Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ.ಮೈಲಳ್ಳಿ ರೇವಣ್ಣ ಅವರಿಗೆ ವಿದ್ವಾಂಸ ಡಾ.ಜೀ.ಶಂ.ಪ ಪ್ರಶಸ್ತಿ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ 2024ನೇ ಸಾಲಿನ ಜಾನಪದ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಜಾನಪದ ಅಕಾಡಿಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ಇಂದು ಕನ್ನಡ ಭವನದ ಅಂತರಂಗ ಸಭಾಂಗಣದಲ್ಲಿ ಜಾನಪದ ಪ್ರಶಸ್ತಿ ಪುರಸ್ಕøತರ ಪಟ್ಟಿ ಪ್ರಕಟಿಸುವ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2024ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರನ್ನು ಹಾಗೂ ಇಬ್ಬರು ಜಾನಪದ ತಜ್ಞರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಬೆಂಗಳೂರು ನಗರದಿಂದ ಜಾನಪದ ಕಲಾವಿದ ಡಾ. ಜೋಗಿಲ ಸಿದ್ಧರಾಜು, ಬೆಂಗಳೂರು ಗ್ರಾಮಾಂತರ ತತ್ವಪದ ಮತ್ತು ಗೀಗೀಪದದ ಸಿದ್ದಯ್ಯ ಸಿ.ಹೆಚ್., ರಾಮನಗರ ಡೊಳ್ಳುಕುಣಿತ ಎಂ.ಮಹೇಶ್, ಕೋಲಾರ ಕೋಲಾಟ ಶ್ರೀಮತಿ ಸುನಂದಮ್ಮ, ಚಿಕ್ಕಬಳ್ಳಾಪುರ ಅರೆವಾದ್ಯ, ತಮಟೆ ಕಲಾವಿದ ವೆಂಕಟರಮಣಪ್ಪ, ತುಮಕೂರು ಕಿನ್ನರಿ ಜೋಗಿ ಕಲಾವಿದ ಸಿದ್ದಪ್ಪ, ದಾವಣಗೆರೆ ಭಜನೆ ಕಲಾವಿದ ಮಾರ್ತಾಂಡಪ್ಪ, ಚಿತ್ರದುರ್ಗ ಹಗಲುವೇಷ ಕಲಾವಿದ .ಶ್ರೀನಿವಾಸ್, ಶಿವಮೊಗ್ಗ ಹಸೆ ಚಿತ್ತಾರ ಕಲಾವಿದೆ ಶ್ರೀಮತಿ ಗೌರಮ್ಮ, ಮೈಸೂರು ಚರ್ಮವಾದ್ಯ ನಗಾರಿ ಕಲಾವಿದ ಶ್ರೀ ಮಂಜುನಾಥ್,

ಮಂಡ್ಯ ಜನಪದಗಾಯನ ಕಲಾವಿದ ಹುರುಗಲವಾಡಿ ರಾಮಯ್ಯ, ಹಾಸನ ಕೋಲಾಟ ಕಲಾವಿದ ಬಿ.ಟಿ.ಮಾನವ, ಚಿಕ್ಕಮಗಳೂರು ಭಜನೆ ಕಲಾವಿದ ಬಿ.ಪಿ.ಪರಮೇಶ್ವರಪ್ಪ, ಚಾಮರಾಜನಗರ ತಂಬೂರು ಪದ ಕಲಾವಿದ ಸಿದ್ದರಾಜು ಆರ್., ದಕ್ಷಿಣ ಕನ್ನಡ ಪಾಡ್ದನ್ ಕಲಾವಿದೆ ಶ್ಸರೀಮತಿ ಜುಯಂತಿ, ಉಡುಪಿ ಜನಪದ ಗಾಯನ ಎನ್.ಗಣೇಶ್ ಗಂಗೊಳ್ಳಿ, ಕೊಡಗು ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ ಶ್ರೀಮತಿ ಎಸ್.ಆರ್. ಸರೋಜ, ಬೆಳಗಾವಿ ಚೌಡಕಿ ಪದ ಕಲಾವಿದೆ ಶ್ರೀಮತಿ ಕಮಲಾ ಮರಗನ್ನವರ,

ಧಾರವಾಡ ಜನಪದ ಸಂಗೀತ ಪ್ರಭು ಬಸಪ್ಪ ಕುಂದರಗಿ, ವಿಜಯಪುರ ಡೊಳ್ಳು ಕುಣಿತ ಕಲಾವಿದ ಸೋಮಣ್ಣ ಗುಂಡಪ್ಪ ಧನಗೊಂಡ, ಬಾಗಲಕೋಟೆ ಕರಡಿ ಮಜಲು ಗಂಗಪ್ಪ .ಕರಡಿ, ಉತ್ತರ ಕನ್ನಡ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದ ಗಣಪು ಬಡವ ಗೌಡ, ಹಾವೇರಿ ಸಂಪ್ರದಾಯದ ಪದ, ಸೋಬಾನೆ ಪದ ಕಲಾವಿದೆ ಶ್ರೀಮತಿ ಗಿರಜವ್ವ ಹನುಮಪ್ಪ ಬಣಕಾರ, ಗದಗ ಹಗಲು ವೇಷ ಕಲಾವಿದ ಡಾ.ಗೋವಿಂದಪ್ಪ ರಾಮಚಂದ್ರಪ್ಪ,

ಕಲಬುರುಗಿ ತತ್ವಪದ ಕಲಾವಿದೆ ಶ್ರೀಮತಿ ಬೋರಮ್ಮ, ಬೀದರ್ ಜನಪದ ಗಾಯನ ಕಲಾವಿದ ಮಾರುತಿ ಕೋಳಿ, ರಾಯಚೂರು ತತ್ವಪದ ಕಲಾವಿದೆ ಶ್ರೀಮತಿ ಯಲ್ಲಮ್ಮ, ಕೊಪ್ಪಳ ಭಜನೆ ಕಲಾವಿದ ಹೆಚ್.ಚಂದ್ರಶೇಖರ್ ಹಡಪದ, ಬಳ್ಳಾರಿ ಹಗಲುವೇಷ ಕೆ.ಶಂಕರಪ್ಪ, ಯಾದಗಿರಿ ತತ್ವಪದ / ಭರವಸೆ ಕಲಾವಿದ ಗೋಪಣ್ಣ ಹಾಗೂ ಮೈಸೂರಿನ ಡಾ.ಮೈಲಾಹಳ್ಳಿ ರೇವಣ್ಣ ಅವರಿಗೆ ವಿದ್ವಾಂಸ ಡಾ.ಜೀ.ಶಂ. ಪ್ರಶಸ್ತಿ ಮತ್ತು ವಿಜಯನಗರದ ಡಾ.ವೆಂಕಟೇಶ ಇಂದ್ವಾಡಿ ಅವರಿಗರೆ ವಿದ್ವಾಂಸರಾದ ಡಾ..ಬಿ.ಎಸ್.ಗದ್ದಿಗೆ ಮಠ  ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
2023
ಮತ್ತು 2024ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಮಾರ್ಚ್ 15 ರಂದು ಬೀದರ್ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಿ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು.  

ಆಯ್ಕೆಯಾದ ಜಾನಪದ ಕಲಾವಿದರಿಗೆ ತಲಾ 25 ಸಾವಿರ ಹಾಗೂ ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿ ರೂ. 50 ಸಾವಿರ ಪ್ರಸಸ್ತಿ ಮೊತ್ತದೊಂದಿಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್(ಪ್ರ) ಶ್ರೀಮತಿ ಎಸ್. ನಮ್ರತ, ಸದಸ್ಯರುಗಳಾದ ಡಾ.ಉಮೇಶ್, ಶಂಕ್ರಣ್ಣ ರಾಮಪ್ಪ ಸಂಕಣ್ಣನವರ, ರಂಗಪ್ಪ, ಕೆಂಕೆರೆ ಮಲ್ಲಕಾರ್ಜುನ, ಸಿ.ಎನ್.ಮಂಜೇಶ್ ಚೆನ್ನಾಪುರ, ಡಾ.ಹುಲಿಕುಂಟೆ ಮೂರ್ತಿ ಉಪಸ್ಥಿತರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ