Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕರ್ನಾಟಕದ  ರಾಜ್ಯಸಭಾ ಕಣದಲ್ಲಿ ಡಾ.ಎಂ.ಆರ್ ರಂಗನಾಥ್ 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರ್ಥಿಕ ತಜ್ಞ
, ಸಹಕಾರಿ , ಕಾನೂನು, ಕೃಷಿ , ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನೇರ ನುಡಿ, ದಿಟ್ಟ ಸಾಮಾಜಿಕ ಹೋರಾಟಗಾರ ಪ್ರಬುದ್ಧ ಪ್ರಾಮಾಣಿಕ ವ್ಯಕ್ತಿಯಾದ  ಡಾ. ಎಂ. ಆರ್. ರಂಗನಾಥ್  ಅವರನ್ನು ಈ ಬಾರಿ ಕರ್ನಾಟಕದಿಂದ ರಾಜ್ಯ ಸಭೆಗೆ ಒಮ್ಮತದಿಂದ  ಆಯ್ಕೆ  ಮಾಡಬೇಕು ಎಂದು ಡಾ ಎಂ ಆರ್ ರಂಗನಾಥ ಅಭಿಮಾನಿಗಳ ಬಳಗ ಒತ್ತಾಯ ಮಾಡಿದೆ. 

ಈ ಕುರಿತು ನಗರದ  ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಮುಖಂಡರುಗಳು ಕರ್ನಾಟಕ ರಾಜ್ಯದಿಂದ ಒಬ್ಬ ಉತ್ತಮ ವ್ಯಕ್ತಿಯನ್ನು ಆರಿಸುವ ಅವಕಾಶ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೇಲಿದೆ.

Advertisement

ಡಾ ಎಂ ಆರ್ ರಂಗನಾಥ ಅವರನ್ನು ಶೈಕ್ಷಣಿಕ ಸಾಧನೆ ನೋಡಿದಾಗ 19 ಸ್ನಾತಕೋತರ ಮತ್ತು ಪಿಎಚ್.ಡಿ. ಪದವಿ ಪಡೆದಿರುವ ಇವರು ಕರ್ನಾಟಕ ರಾಜ್ಯ ಸರ್ಕಾರದಲ್ಲಿ 1983 ರಿಂದ 2013ರವರೆಗೆ ಹಲವಾರು ಉನ್ನತ ಸರ್ಕಾರಿ ಸೇವೆಯ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿರುತ್ತಾರೆ. ಯೋಗ ಶಿಕ್ಷಕರು. ಸಹಕಾರಿಗಳು ಹಾಗೂ ಅಂತರ್ರಾಷ್ಟ್ರಮಟ್ಟದ ಕ್ರೀಡಾಪಟು ಸಹ ಆಗಿದ್ದಾರೆ. ಇವರು ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಫೆಡರೇಷನ್ ಸಂಸ್ಥೆಯ ಅಧ್ಯಕ್ಷರೂ ಸಹ ಆಗಿರುತ್ತಾರೆ. ಇವರು ತಮ್ಮ ಸೇವಾ ಅವದಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸೂಕ್ಷ್ಮ ನೀರಾವರಿ ಅಳವಡಿಸಿ ಯಶಸ್ವಿಯಾಗಿದ್ದಾರೆ. ರಾಜ್ಯಾದ್ಯಂತ ರೈತರ ಸವಳು ಜವಳು ಭೂಮಿಯನ್ನು ಸಹ ಹಸನು ಮಾಡಿಸಿರುತ್ತಾರೆ.

ದಶಕಗಳಿಂದ ಕುಂಠಿತಗೊಂಡಿದ್ದ ಕಲ್ಯಾಣ ಕರ್ನಾಟಕ ಭಾಗದ 19 ನೀರಾವರಿ ಯೋಜನೆಗಳಿಗೆ ಮರುಜೀವ ನೀಡಿ ರೈತರ ಕೃಷಿ ಭೂಮಿಗೆ ನೀರಾವರಿ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಿದ್ದು, ಇದು ರಾಜ್ಯಕ್ಕೆ ಹೆಮ್ಮೆ ತರುವಂತಹ ವಿಷಯವಾಗಿದೆ.

ನಾಲ್ಕು ದಶಕಗಳಿಂದ ಕುಂಠಿತಗೊಂಡಿದ್ದ ಮಹದಾಯಿ ಯೋಜನೆಯನ್ನು ಜಾರಿಗೊಳಿಸಲು ಇವರು ಯಶಸ್ವಿಯಾಗಿದ್ದಾರೆ. ಅಲ್ಲದೆ, ಈ ಭಾಗದಲ್ಲಿನ 4.8 ಲಕ್ಷ ಹೆಕ್ಟೇ‌ರ್ ರೈತರ ಕೃಷಿ ಭೂಮಿಗೆ ಸೂಕ್ಷ್ಮ ನೀರಾವರಿಯನ್ನು ರೈತರ ಸಹಭಾಗಿತ್ವದ ಅಡಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ವತಿಯಿಂದ ಅಳವಡಿಸಿಕೊಳ್ಳುವ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಿರುತ್ತಾರೆ.

ಇದಲ್ಲದೆ ರಾಜ್ಯದ ಇಂದನ‌ಕೊರತೆಯನ್ನು ನೀಗಿಸುವ ದೂರದೃಷ್ಟಿಯಿಂದ  ಅಂದಾಜು 20 ಸಾವಿರ ಕೋಟಿ ಹೂಡಿಕೆಯಲ್ಲಿ ಹೈಡ್ರೋಜನ್ ಅನಿಲ, ಸೋಲಾರ್ ಮತ್ತು ವಿಂಡ್ ಎನರ್ಜಿ ಉತ್ಪಾದನೆಗೆ ಈಗಾಗಲೇ ಸ್ಥಳ ಪರಿಶೀಲಿಸಿ ಅದಕ್ಕೆ ಬೇಕಾದ ಸಮಗ್ರ ಯೋಜನಾ ವರದಿಯನ್ನು ತಯಾರಿಸಿದ್ದಾರೆ.  ರಾಜ್ಯದ ಕಾರವಾರ,  ರಾಮದುರ್ಗ, ಹೊನ್ನಾವರ,  ತಾಲೂಕಿನ ಹಳದಿಪುರ ಗ್ರಾಮ ವ್ಯಾಪ್ತಿಯಲ್ಲಿ ಹೈಡ್ರೋಜನ್ ಅನಿಲ ಉತ್ಪಾದನೆ. ಬೆಳಗಾವಿ ಜಿಲ್ಲೆಯ ಸವದತ್ತಿ,  ಚಿತ್ರದುರ್ಗ ಜಿಲ್ಲೆಯ ಹಿರಿಯೂರು,  ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟಯ ಬಿಳಿಗಿ ತಾಲೂಕಿನ ಸಿದ್ದಾಪುರ ಮತ್ತು ಕರಕಲಮಟ್ಟಿ, ಮತ್ತು ರಾಮದುರ್ಗದಲ್ಲಿ ಹೈಡ್ರೋಜನ್ ವಿದ್ಯುತ್ ಶಕ್ತಿ ಅಂದರೆ ಸೌರ ವಿದ್ಯುತ್ ಮತ್ತು ವಾಯು ವಿದ್ಯುತ್ ಶಕ್ತಿ ಉತ್ಪಾದನೆಗೆ ಸ್ಥಳ ಪರಿಶೀಲಿಸಿ,  ಅಗತ್ಯ  ಯೋಜನಾ ವರದಿಯನ್ನು ತಯಾರು ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಉದ್ದೇಶದಿಂದ ಪಾಲಾರ್ ಮತ್ತು ಪೆನ್ನಾರ್ ನದಿಗಳಿಂದ ಎರಡು ಜಿಲ್ಲೆಯ ರೈತರಿಗೆ ಸೂಕ್ಷ್ಮ ನೀರಾವರಿ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದ್ದಾರೆ.

ನಿವೃತ್ತಿಗೊಂಡ ನಂತರವೂ ಸಹ ಇವರು ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಸಮಾಜಸೇವೆ, ಶಿಕ್ಷಣ, ಆರೋಗ್ಯ, ಕ್ರೀಡೆ, ಯೋಗ ಮತ್ತು ಯುವಜನ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಕಳೆದ ಸಾಲಿನ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ರಾಜ್ಯದ  ಸರ್ವತೋಮುಖ ಅಭಿವೃದ್ಧಿಗೊಳ್ಳಬೇಕಾಗಿದ್ದಲ್ಲಿ ನೇರ, ದಿಟ್ಟ, ದಕ್ಷ ವ್ಯಕ್ತಿಯ ಅವಶ್ಯಕತೆ ಇರುವುದರಿಂದ  ಈ ಬಾರಿ ಕರ್ನಾಟಕದಿಂದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಒಮ್ಮತ್ತದಿಂದ ಡಾಕ್ಟರ್ M R ರಂಗನಾಥ್ ಅವರನ್ನು ರಾಜ್ಯಸಭೆಗೆ ಕಲಿಸಬೇಕು ಮತ್ತು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ಲೋಬಲ್ ಗ್ರೀನ್ ಎನರ್ಜಿ ಪ್ರವೈಟ್ ಲಿಮಿಟೆಡ್ ನಿರ್ದೆಶಕ ಡಾ ಪ್ರವೀಣ್ ನಾಯಕ್, ಸನಾತನ ಸೇವಾ ಸಂಘದ ಕರ್ನಾಟಕ ಘಟಕದ ರಾಜ್ಯಾದ್ಯಕ್ಷ ನಾರಾಯಣ, ಶ್ರೀ ವಿದ್ಯಾ ಟ್ರಸ್ಟ್ ನ ಅವದೂತರಾದ ಶ್ರೀ ಶಂಕರನಾರಾಯಣ, ಕುಮಟಾ ಶಂಕರ ನಾರಾಯಣ ದೇವಾಲಯದ ಧರ್ಮದರ್ಶಿ ಶ್ರೀ ಗುರುದಾಸ್ ಭಟ್ ಇವರು ಇದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು