Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಗರಸಭೆ ನೂತನ ಅಧ್ಯಕ್ಷರಾಗಿ ಪ್ರಭಾ ನಾಗರಾಜ್ ಆಯ್ಕೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆ ಅಧ್ಯಕ್ಷರಾಗಿದ್ದ ಸುಮಿತ್ರಾ ಆನಂದ್ ರವರ ರಾಜೀನಾಮೆಯಿಂದ ತೆರವಾದ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ದಳ ಮೈತ್ರಿ ಕೂಟದ ಅಭ್ಯರ್ಥಿ ದಳದ ಪ್ರಭಾ ನಾಗರಾಜ್ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಧಿಕಾರಿ ಮಂಜುನಾಥ್ ರವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದಳ ಮೈತ್ರಿ ಅಭ್ಯರ್ಥಿಯಾಗಿ ದಳದ ಪ್ರಭಾ ನಾಗರಾಜ್ ರವರು ಸ್ಪರ್ಧಿಸಿದರೆ ಕಾಂಗ್ರೆಸ್ ನಿಂದ ರೂಪಿಣಿ ಮಂಜುನಾಥ್ ಸ್ಪರ್ದಿಸಿದ್ದರು. 31 ನಗರಸಭಾ ಸದಸ್ಯರು ಹಾಗೂ ಶಾಸಕರ ಹಾಗೂ ಸಂಸದರ ಮತಗಳು ಸೇರಿದಂತೆ ಒಟ್ಟು 33 ಮತಗಳ ಚಲಾವಣೆಯಲ್ಲಿ ಮೈತ್ರಿ ಪಕ್ಷದ ಪ್ರಭಾ ನಾಗರಾಜ್ 24 ಮತ ಪಡೆದರೆ ಕಾಂಗ್ರೆಸ್ ನ ರೂಪಿಣಿ ಮಂಜುನಾಥ್ 9 ಮತಗಳನ್ನು ಪಡೆದರು. ಅತಿ ಹೆಚ್ಚು ಮತ ಪಡೆದ ಪ್ರಭಾ ನಾಗರಾಜ್ ರವರನ್ನು ಚುನಾವಣಾಧಿಕಾರಿ ಮಂಜುನಾಥ್ ನೂತನ ಅಧ್ಯಕ್ಷರೆಂದು ಘೋಷಿದರು.ಶಾಸಕ ಧೀರಜ್ ಮುನಿರಾಜು ಹಾಗೂ ಸಂಸದ ಡಾ. ಕೆ. ಸುಧಾಕರ್ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ್ದು ವಿಶೇಷವಾಗಿತ್ತು.

      ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಭಾ ನಾಗರಾಜ್ ರವರು ಮಾಧ್ಯಮಗಳೊಂದಿಗೆ ಮಾತನಾಡಿ ನನಗೆ ಸಿಕ್ಕಿರುವ ಅಲ್ಪಾವಧಿಯಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಿ ನಗರದ ಜನತೆಯ ವಿಶ್ವಾಸ ಗಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನಾನು ಅಧ್ಯಕ್ಷೆಯಾಗಲು ಸಹಕರಿಸಿದ ಶಾಸಕರಾದ ಧೀರಜ್ ಮುನಿರಾಜು ಹಾಗೂ ಸಂಸದ ಡಾ. ಕೆ.ಸುಧಾಕರ್, ಬಿಜೆಪಿ ದಳ ಮೈತ್ರಿ ಕೂಟದ ಸದಸ್ಯರು ಮುಖ್ಯವಾಗಿ ನನ್ನ ವಾರ್ಡಿನ ಮತದಾರ ಬಂದುಗಳು ಸೇರಿದಂತೆ ನನ್ನ ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.

     ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಭಾ ನಾಗರಾಜ್ ರವರನ್ನು ಶಾಸಕ ಧೀರಜ್ ಮುನಿರಾಜು, ಸಂಸದ ಡಾ. ಕೆ.ಸುಧಾಕರ್, ಜೆಡಿಎಸ್ ತಾಲೂಕು ಅಧ್ಯಕ್ಷರಾದ ಹರೀಶ್ ಗೌಡ, ಬಿಜೆಪಿ ಜೆಡಿಎಸ್ ನ ಮುಖಂಡರು ಸೇರಿದಂತೆ ಹಲವಾರು ಗಣ್ಯರು ಅಭಿನಂದಿಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.