Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ನಕಲಿ ಔಷಧ ಜಾಲದ ಮೇಲೆ ಇ.ಡಿ ದಾಳಿ; 9 ಲಕ್ಷ ಜಪ್ತಿ, ಡಿಜಿಟಲ್ ಪುರಾವೆ ವಶ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ನಕಲಿ ಔಷಧ ತಯಾರಿಕೆ ಮತ್ತು ವಿತರಣೆ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಕಾರ್ಯಾಚರಣೆ ಚುರುಕುಗೊಳಿಸಿದ್ದು, ಮಂಗಳವಾರ ನಗರದ ಐದು ಪ್ರಮುಖ ಸ್ಥಳಗಳಲ್ಲಿ ಶೋಧ ನಡೆಸಿದೆ.

ದಾಳಿಯ ವೇಳೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವೀರೇಶ್ ಕುಮಾರ್‌ಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು ₹9 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಅಕ್ರಮಕ್ಕೆ ಬಳಸಲಾದ ಡಿಜಿಟಲ್ ಉಪಕರಣಗಳು, ಪ್ರಮುಖ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಘಟಕ: ಪ್ರಕರಣದ ಮುಖ್ಯ ರೂವಾರಿ ಆರ್.ಪ್ರಶಾಂತ್, ಬಿಡದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧಗಳ ತಯಾರಿಕೆ, ಮರುಪ್ಯಾಕಿಂಗ್ ಹಾಗೂ ಲೇಬಲ್ ಬದಲಾಯಿಸುವ ವ್ಯವಸ್ಥಿತ ಜಾಲ ನಡೆಸುತ್ತಿದ್ದ. ವಿವಿಧ ರಾಜ್ಯಗಳಿಂದ ತಂದಿದ್ದ ಕಳಪೆ ಮಟ್ಟದ ಔಷಧಗಳನ್ನು ‘ಫೈಜರ್’ ಕಂಪನಿಯ ದುಬಾರಿ ಜೀವರಕ್ಷಕ ಪ್ರತಿಜೀವಕಗಳಾದ 'ಜಾವಿಸೆಫ್ಟಾ' ಹಾಗೂ 'ಎಂಬ್ಲಾವಿಯೋ' ಹೆಸರಿನಲ್ಲಿ ನಕಲಿ ಸೀಸೆಗಳಿಗೆ ಮರುಪ್ಯಾಕ್ ಮಾಡಲಾಗುತ್ತಿತ್ತು.

ಈ ನಕಲಿ ಔಷಧಗಳನ್ನು ಮೊದಲು ‘ಡಿಎಂ ಫಾರ್ಮಾಸ್ಯುಟಿಕಲ್ಸ್’ ಹಾಗೂ ನಂತರ ‘ಕೃಪಾ ಹೆಲ್ತ್‌ಕೇರ್’ ಮೂಲಕ ಅಸಲಿ ಔಷಧಗಳೊಂದಿಗೆ ಬೆರೆಸಿ, ವಿವಿಧ ಆಸ್ಪತ್ರೆಗಳು ಹಾಗೂ ಔಷಧೀಯ ಘಟಕಗಳಿಗೆ ಪೂರೈಸಲಾಗುತ್ತಿತ್ತು ಎಂದು ಇ.ಡಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಆಗಸ್ಟ್ 18ರಂದು ಬಿಡದಿ ಮತ್ತು ದೊಡ್ಡೇರಿಯಲ್ಲಿ ನಡೆದ ದಾಳಿ ವೇಳೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಅಂದಾಜು 4.5 ರಿಂದ 5 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ಜಪ್ತಿ ಮಾಡಿದ್ದರು. ತುರ್ತು ನಿಗಾ ಘಟಕಗಳಲ್ಲಿ ಬಳಸುವ ಅತ್ಯಗತ್ಯ ಔಷಧಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಆಸ್ಪತ್ರೆಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಕೃತ್ಯದಲ್ಲಿ ದೊಡ್ಡ ಮಟ್ಟದ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಇ.ಡಿ ಪ್ರತ್ಯೇಕ ತನಿಖೆ ಕೈಗೆತ್ತಿಕೊಂಡಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಚ್ಚವನಹಳ್ಳಿ: ಹಿರಿಯ ಕಾಂಗ್ರೆಸ್ ಮುಖಂಡ ಡಾ. ಕೆ.ಟಿ. ಪ್ರಕಾಶ್ ವಿಧಿವಶಕಾಡುಗೊಲ್ಲ ಪರಿಶಿಷ್ಟ ಪಂಗಡ ಸೇರ್ಪಡೆ ಶಿಫಾರಸ್ಸು : ಕೇಂದ್ರ ಸರ್ಕಾರದಿಂದ ತಿರಸ್ಕಾರ, ಪುಃನ ಶಿಫಾರಸ್ಸಿಗೆ ಸರ್ಕಾರದ ಚಿಂತನೆ- ಮುಖ್ಯಮಂತ್ರಿಭದ್ರಾ ಮೇಲ್ದಂಡೆ ಅನುದಾನ 5,300 ಕೋಟಿ; ಬಿಜೆಪಿ ದನಿ ಎತ್ತುತ್ತಿಲ್ಲರಸ್ತೆ ಅಪಘಾತ ಬೈಕ್ ಸವಾರನಿಗೆ ಗಾಯ, ನಗರಸಭೆ ವಿರುದ್ಧ ಆಕ್ರೋಶ'ಅಖಿಲ ಭಾರತೀಯ ಸಾಹಿತ್ಯ ಪರಿಷತ್' ಜಾನಪದ ಪ್ರಕಾರದ ಜಿಲ್ಲಾ ಘಟಕ ಉದ್ಘಾಟನೆಹರಿಯಬ್ಬೆ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ: ಕಲಾವಿದ ಜಿ.ಡಿ. ತಿಮ್ಮಯ್ಯ ಅವರಿಗೆ ಸನ್ಮಾನವ್ಯಾಪಾರ ಮಾಡುವ ಹಕ್ಕಿಗೂ ಬೆಲೆ ಇರಬೇಕು: ಸುಪ್ರೀಂ ಕೋರ್ಟ್ಕೋರ್ಟ್ ಆದೇಶ ಮೀರಿ ಪಟಾಕಿ ಮಾರಾಟ: ಸುಪ್ರೀಂ ಅಸಮಾಧಾನಕಾಂಗ್ರೆಸ್ ಅರಾಜಕತೆ ಸೃಷ್ಟಿಸಿದರೆ ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ: ಛಲವಾದಿ ನಾರಾಯಣಸ್ವಾಮಿವಿಜಯೇಂದ್ರ ಏಕವಚನ ನಿಂದನೆ: ಬಿಎಸ್‌ವೈ ಮನೆ ಮುಂದೆ 'ಆರ್‌ಟಿಜಿಎಸ್ ಚೋರ್' ಪೋಸ್ಟರ್‌ಪ್ರತ್ಯಕ್ಷ!