Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾಧ್ಯಮ ಅಕಾಡೆಮಿಯಿಂದ ಫೆಲೋಷಿಪ್: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪತ್ರಕರ್ತರಿಗೆ ಆರು ವಿಷಯಗಳ ಕುರಿತ ಫೆಲೋಷಿಪ್‍ಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು 2025ರ ಆಗಸ್ಟ್ 8 ರವರೆಗೆ ವಿಸ್ತರಿಸಲಾಗಿದೆ.


ಅಕಾಡೆಮಿಯ ಸಾಮಾನ್ಯ ಆಯವ್ಯಯದಡಿ ಎರಡು, ಮಹಿಳಾ ಆಯವ್ಯಯದಡಿ ಎರಡು ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿ ಒಂದು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಒಂದು ಫೆಲೋಷಿಪ್ ನೀಡಲಾಗುವುದು. ಫೆಲೋಷಿಪ್ ಅವಧಿ 6 ತಿಂಗಳು. ಕನಿಷ್ಠ ಐದು ವರ್ಷ ಸೇವಾನುಭವ ಹೊಂದಿರುವ, ಕನಿಷ್ಠ 30 ವರ್ಷದಿಂದ 50 ವರ್ಷ ವಯೋಮಿತಿಯ ಪತ್ರಕರ್ತರು ಫೆಲೋಷಿಪ್‍ಗೆ ಅರ್ಜಿ ಸಲ್ಲಿಸಬಹುದು.


ಪತ್ರಕರ್ತರು ಪದವೀಧರರಾಗಿರಬೇಕು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಈ ಕುರಿತು ಸಂಪಾದಕರ ದೃಢೀಕರಣ ಪತ್ರ ಸಲ್ಲಿಸಬೇಕು.


ಫೆಲೋಷಿಪನ ವಿಷಯಗಳು ಈ ಕೆಳಗಿನಂತಿವೆ. ಬಾಲ್ಯವಿವಾಹ, POCSO, , ಮರ್ಯಾದೆಗೇಡು ಹತ್ಯೆ- ಮಾಧ್ಯಮ ದೃಷ್ಟಿಕೋನ. ಕೃಷಿ ಸಂವಹನ- ಒಂದು ಅಧ್ಯಯನ. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ.ಬುಡಕಟ್ಟು ಕಾಯ್ದೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ- ಮಾಧ್ಯಮ ನೋಟ. Role of Media in creating awareness on cybercrime and digital safety  (ಇಂಗ್ಲಿಷ್ನಲ್ಲಿ ಅಧ್ಯಯನ ವರದಿ ಸಲ್ಲಿಸುವುದು).

ಮಾಧ್ಯಮ ಶಿಕ್ಷಣ ಮತ್ತು ವೃತ್ತಿ ನಡುವಿನ ಅಂತರ: ಕಾರಣಗಳು, ಪರಿಣಾಮ ಹಾಗೂ ಪರಿಹಾರ. ಫೆಲೋಷಿಪ್ ಅವಧಿ ಆರು ತಿಂಗಳು. ಅರ್ಜಿ ಸ್ವೀಕರಿಸಲು 8ನೇ ಆಗಸ್ಟ್ 2025 ಕೊನೆಯ ದಿನವಾಗಿದ್ದು, ವಿಜೇತರ ಆಯ್ಕೆಯಲ್ಲಿ ಅಕಾಡೆಮಿಯ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.


ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ಸೈಟ್ mediaacademy.karnataka.gov.in  ನಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರಕ ದಾಖಲೆಗಳು ಹಾಗೂ ಅಧ್ಯಯನ ಕುರಿತ ಟಿಪ್ಪಣಿಯೊಂದಿಗೆ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೆÇೀಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು 560001 ಇವರಿಗೆ ಕಳುಹಿಸಬಹುದು ಅಥವಾ [email protected]  ಗೆ ಇ - ಮೇಲ್ ಮೂಲಕ ಕಳಿಸಬಹುದು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ