Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಖ್ಯಾತ ಜೈನ ಜ್ಯೋತಿಷಿ ಬಿಕೆ ಸುಭಾಷ್ ಚಂದ್ರ ಜೈನ್ ಭೇಟಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕಾದ್ಯಂತ ಜನಪರ  ಅಭಿವೃದ್ಧಿ ಕೆಲಸ
, ಮೂಲಭೂತ ಸೌಕರ್ಯ ಮತ್ತು ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸುವ ಮೂಲಕ ಚರಿತ್ರೆಯನ್ನು ಸೃಷ್ಟಿಸಿವ ನಾಡಿನ ಪ್ರಖ್ಯಾತ ಮುಖ್ಯಮಂತ್ರಿ ಸನ್ಮಾನ್ಯ ಡಿ ಕೆ ಶಿವಕುಮಾರ್ ರವರನ್ನು  ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ  ಕರಾವಳಿ ತೀರದ ಪ್ರಖ್ಯಾತ ವಾಸ್ತು ಜ್ಯೋತಿಷ್ಯ ಶಾಸ್ತ್ರಜ್ಞ  ಬಿ ಕೆ ಸುಭಾಷ್ ಚಂದ್ರ ಜೈನ್ ರವರು  ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜನಪರ ಅಭಿವೃದ್ಧಿ ಕೆಲಸಗಳ ಬಗ್ಗೆ ಆಳವಾಗಿ ಚರ್ಚಿಸಿದರು ಹಾಗೂ ಸಚಿವ ಸಂಪುಟ ಸಭೆಯಲ್ಲಿ  ತುಳುನಾಡಿನ ಹಲವು ದಶಕಗಳ ಕೋರಿಕೆಯಾದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಎಂಟನೇ ಪರಿಚಯದ ಹಾಗೂ ಎರಡನೇ ಆಡಳಿತ ಭಾಷೆಯನ್ನು ಮಾಡಬೇಕೆಂಬ ಕೋರಿಕೆಯನ್ನು ಮುಂದಿಟ್ಟರು.

 ಹಾಗೆಯೇ ಪ್ರಸ್ತುತ ಸಂದರ್ಭದಲ್ಲಿ  ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದ ಮೂಲಕ ಶ್ರೀಮತಿ ಅನಿತಕ್ಕ ಸುರೇಂದ್ರಣ್ಣ ದಂಪತಿಗಳ ಮಾರ್ಗದರ್ಶನದಂತೆ  ರಾಜಧಾನಿ ಬೆಂಗಳೂರಿನಲ್ಲಿ ಚಾತುರ್ಮಾಸವನ್ನು  ಮಾಡುತ್ತಿರುವ ಪ್ರಖ್ಯಾತ ಜೈನಮುನಿಗಳಾದ ಅನೇಕಾಂತ ಸಾಗರ ಮಹಾರಾಜರ ಅಪೇಕ್ಷೆಯಂತೆ ಅಕ್ಟೋಬರ್ 25ನೇ ತಾರೀಕು ನಗರದ ಪ್ಯಾಲೇಸ್ ಗ್ರೌಂಡಿನಲ್ಲಿ  ನಡೆಯುವ "ಬೃಹತ್ ಸಿದ್ದ ನವಗ್ರಹ ತೀರ್ತಂಕರ ಮಹಾ  ಆರಾಧನಾ ಮಹೋತ್ಸವ" ಕಾರ್ಯಕ್ರಮಕ್ಕೆ  ಮಾನ್ಯ ಮುಖ್ಯಮಂತ್ರಿ ಅವರನ್ನು  ವೈಯಕ್ತಿಕವಾಗಿ ಆಮಂತ್ರಿಸಿದ್ದು ಖಂಡಿತ ಜೈನ ಸಮುದಾಯದ ಈ ಕಾರ್ಯಕ್ರಮದಲ್ಲಿ  ಭಾಗವಹಿಸುವುದಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

 ಹಾಗೂ ಸುಹಾಸ್ತಿ ಜೈನ್ ಮಿಲನ ಈ ವರ್ಷದ ಜಿನ ಸಮ್ಮಿಲನ ಕಾರ್ಯಕ್ರಮವು ದೂರದ ಶಿಖರ್ಜಿಯಲ್ಲಿ ನಡೆಯುವುದರಿಂದ ಶಿಖರ್ಜಿ ಯಾತ್ರೆಯ ಸಂಪೂರ್ಣ ಕಾರ್ಯಕ್ರಮದ ವಿವರಗಳ  ಬ್ರೊಶರ್ ರನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮತ್ತು ಸಾಮಾಜಿಕ ಹೋರಾಟಗಾರ ಸಮಾಜ ಸೇವಕ  ಮುಖಂಡ ಮಾಳ ಹರ್ಷೇಂದ್ರ ಜೈನ್, ಐಟಿ ಉದ್ಯೋಗಿ ಸುನಿತಾ ಮ್ಯಾನೇಜಸ್, ಶ್ರೀಮತಿ ರಶ್ಮಿ ಜೈನ್  ಉಪಸ್ಥಿತರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಖ್ಯಾತ ಜೈನ ಜ್ಯೋತಿಷಿ ಬಿಕೆ ಸುಭಾಷ್ ಚಂದ್ರ ಜೈನ್ ಭೇಟಿಸೆ. 21ರಂದು ನೇರ ನೇಮಕಾತಿ ಸಂದರ್ಶನರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು; ಕೊಲೆಯೋ ಅಥವಾ ಆತ್ಮಹತ್ಯೆಯೋ...? ಭದ್ರೆ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡಿ-ರೈತಸಂಘ ಜಿಲ್ಲಾಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್ಹೈಕೋರ್ಟ್ ವೃತ್ತದಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಮೂರ್ತಿ ಪ್ರತಿಷ್ಠಾಪನೆ: ಪಾಲಿಕೆಯಿಂದ ಕ್ಷಿಪ್ರ ತೆರವು!ಕೆಕೆ ಅಭಿವೃದ್ಧಿಗೆ ಹೊಸ ಮನ್ವಂತರ: 50 ಸಾವಿರ ನಿವೇಶನ, ಐಟಿ ಪಾರ್ಕ್ ಸೇರಿ 10 ಮಹತ್ವದ ಯೋಜನೆ ಘೋಷಣೆ!ಕೋರ್ಟ್ ಕಚೇರಿಯಲ್ಲಿ ಕುಡಿದು ರಂಪಾಟ: ವಕೀಲನಿಗೆ ಹೈಕೋರ್ಟ್‌ನಿಂದ ಜೈಲು ಶಿಕ್ಷೆ!ತಹಶೀಲ್ದಾರ್ 50 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ! ಮಾಲ್‌ಗಳ ಡಿ.ಜಿ ಸೆಟ್‌ಗಳಿಗೆ ವಾರ್ಷಿಕ ಟ್ರೇಡ್‌ ಲೈಸೆನ್ಸ್‌ ಅಗತ್ಯವಿಲ್ಲ!-ಹೈಕೋರ್ಟ್