ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ :
ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಭೂಗೋಳ ಶಾಸ್ತ ಉಪನ್ಯಾಸಕರಾದ ಆರ್ ಮೂರ್ತಿ ವಯೋನಿವೃತ್ತಿ ಸಂದರ್ಭದಲ್ಲಿ ಗೌರವ ಅಭಿನಂದನೆ ಕಾರ್ಯಕ್ರಮ ಕಾಲೇಜು ಸಭಾಂಗಣ ದಲ್ಲಿ ನೆರವೇರಿತು.
ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ,ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 32 ವರ್ಷಗಳ ನಿರಂತರ ಸೇವೆ ಸ್ಮರಿಸಿ ಅಭಿನಂದನೆಗಳ ಮಹಾಪೂರ ಜರುಗಿತು.
ಹಿರಿಯ ವಿದ್ಯಾರ್ಥಿಗಳು ಬೆಳ್ಳಿ ರಥದಲ್ಲಿ ಮೆರವಣಿಗೆಯ ಮೂಲಕ ಗುರುವಿಗೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪ ನವರು ಮಾತನಾಡಿ ಆರ್ ಮೂರ್ತಿರವರು ಸದಾ ಕಾಲ ಕ್ರಿಯಾಶೀಲರಾಗಿ ಕಾಲೇಜಿನ ಬೋಧನೆ ಮತ್ತು ಇತರ ಎಲ್ಲಾ ಆಡಳಿತ ಸೇವೆಯನ್ನು ನಿರಂತರವಾಗಿ ಶೃದ್ಧೆಯಿಂದ ನೆರವೇರಿಸಿಕೊಂಡು ಉತ್ತಮ ಕಾರ್ಯವನ್ನು ನಿರ್ವಹಿಸಿದ್ದವರು. ನಿವೃತ್ತ ಜೀವನ ಸುಖಕರವಾಗಿ ಇರಲಿ ಎಂದು ಆಶಿಸುತ್ತೇನೆ ಎಂದರು.
ಹಿರಿಯ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ಸರಳತೆಯ ಮೂಲಕ ಉತ್ತಮ ಬೋಧನೆಯನ್ನು ನಿರ್ವಹಿಸಿ ಶೇಕಡನೂರು ಫಲಿತಾಂಶವನ್ನು ನಿರಂತರವಾಗಿ ಕಾಲೇಜಿಗೆ ತಂದುಕೊಡುವ ಮೂಲಕ ಉಪನ್ಯಾಸವಲ್ಲದೆ ರಂಗಭೂಮಿ, ನಾಟಕ, ಸಾಹಿತ್ಯ, ಕಲೆ,ಸ್ಕೌಟ್ ಮತ್ತು ಗೈಡ್ನಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ನಿವೃತ್ತಿಗೊಂಡ ಮೂರ್ತಿರವರ ಸೇವೆ ಸಮಾಜಕ್ಕೆ ಮತ್ತಷ್ಟು ಹೆಚ್ಚಲಿ ಎಂದರು. ಗ್ರಾಮದ ಮುಖಂಡ ಶಿವಣ್ಣ ಮಾತನಾಡಿ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷ, ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ ಸರಳ ವ್ಯಕ್ತಿತ್ವದ ಮೂರ್ತಿ ಎಲ್ಲಾ ಜನರ ನಡುವೆ ಸದಾ ಕಾಲ ಪ್ರೀತಿಯಿಂದ ಗೌರವದಿಂದ ನಡೆದುಕೊಂಡ ವ್ಯಕ್ತಿ. ನಿವೃತ್ತಿ ಸಮಾರಂಭಕ್ಕೆ ಅಪಾರ ಜನ ಆಗಮಿಸಿ, ಗೌರವಿಸಿರುವುದೇ ಸಾಕ್ಷಿಯಾಗಿದೆ ಎಂದರು.
ನಿವೃತ್ತಿ ಗೊಂಡ ಮೂರ್ತಿ ಮಾತನಾಡಿ ಕಾಲೇಜಿನಲ್ಲಿ ಉತ್ತಮ ವಾತಾವರಣ ವಿದ್ದು ನಮ್ಮ ಸೇವೆಗೆ ಎಲ್ಲಾ ಉತ್ತೇಜನ ನೀಡಿ ಆತ್ಮ ತೃಪ್ತಿಯ ಸೇವೆ ಸಲ್ಲಿಸಿದ್ದೇನೆ ಎಂದರು.
ಮಾಜಿ ಪ್ರಾಂಶುಪಾಲ ಬಂಗಾರ ನಾಯಕ್, ನಿವೃತ್ತ ಉಪನ್ಯಾಸಕ ಶ್ರೀಕಂಠ ನಾಯಕ ಉಪನ್ಯಾಸಕ ಶಿವ ಸ್ವಾಮಿ, ಶಿವರಾಮ್, ಬಸವಣ್ಣ, ಹಿರಿಯ ವಿದ್ಯಾರ್ಥಿ ನಮ್ರತ ಅರಸ್, ಸುಮಾ, ಶಂಕರ್, ಮಹಾದೇವ, ನಮ್ರತಾ ಮಾತನಾಡಿದರು.
ಪ್ರಾಂಶುಪಾಲರು, ಉಪನ್ಯಾಸಕರು, ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ನಿವೃತ್ತ ಜೀವನಕ್ಕೆ ಶುಭಕೋರಿದರು.
ನಿವೃತ್ತಿ ನೆನಪಿನಲ್ಲಿ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು.



