Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅರ್ಕಾವತಿ ನದಿ ಹೋರಾಟ ಸಮಿತಿ ವತಿಯಿಂದ ಉಪವಾಸ ಸತ್ಯಾಗ್ರಹ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿ ದಿನದಂದು ಸಂವಿಧಾನ ಉಳಿಸಿ ಕಾನೂನು ರಕ್ಷಣೆಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಅರ್ಕಾವತಿ ನದಿ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂದೆ ನಡೆಸುತ್ತಿದ್ದೇವೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.

  ತಾಲ್ಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜಾರಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಸಂಪೂರ್ಣ ಜೀವ ಜಲವು ಹಾಳಾಗಿದ್ದು ಪ್ರಸ್ತುತ ನಮ್ಮ ಭಾಗದಲ್ಲಿ ಅನೇಕ ಜನರು ಕ್ಯಾನ್ಸ‌ರ್ ಕಾಯಿಲೆಗೆ ತುತ್ತಾಗಿ ಕಿಡ್ನಿ ಸೇರಿದಂತೆ ಹಲವು ಅಂಗಾಂಗ ವೈಫಲ್ಯಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಹೋರಾಟ ಹಲವು ವರ್ಷಗಳಿಂದ ನಿರಂತರವಾಗಿ ನೆಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಏಪ್ರಿಲ್ 14 ರಂದು ಸಂಕೇತಿಕ ಹೋರಾಟ ( ಉಪವಾಸ ಸತ್ಯಗ್ರಹ ) ನೆಡೆಸುತ್ತಿದೆ ಎಂದು ರೈತ ಮುಖಂಡ ವಸಂತ್ ಕುಮಾರ್ ತಿಳಿಸಿದರು.

  

ಒತ್ತಾಯಗಳೇನು?
ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜುರ ಹೊಸಳ್ಳಿ ಗ್ರಾಮ ಪಂಚಾಯಿತಿಗಳಿಗೆ ಕುಡಿಯಲು ಮಳೆ ಕೊಯ್ದು ಮಾಡಿಕೊಡಬೇಕು.

  1. ಜನ ಬಳಸಲು ನೀರನ್ನು ಈ ಹಿಂದೆ ನೀಡಿದಂತೆ ಪಕ್ಕದ ಪಂಚಾಯಿತಿಯಿಂದ ಕೊಳವೆ ಕೊರೆಸಿ ನೀರು ಕೊಡಬೇಕು.

  2. ದೊಡ್ಡಬಳ್ಳಾಪುರ ನಗರಸಭೆ, ಮತ್ತು ಭಾಷೆಟಿಹಳಿ ಪಟ್ಟಣ ಪಂಚಾಯಿತಿ ಬಿಡುವ ಕೊಳಚೆನೀರಿಗೆ ಮೂರನೇ ಹಂತದ ಶುದ್ದೀಕರಣ ಘಟಕ ಸ್ಥಾಪಿಸಬೇಕು.


 ಕಾರ್ಖಾನೆಗಳು ಕಾನೂನು ವಿರುದ್ಧವಾಗಿ ನೀರು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.

  1. ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು.

  2. ಕೈಗಾರಿಕೆಗಳಿಗೆ ಕೊಳವೆಬಾವಿ ಕೊರೆಯಲು ಇನ್ನು ಮುಂದೆ ಅನುಮತಿ ಕೊಡಬಾರದು.

  3. ಕೆಲ ಕಾರ್ಖಾನೆಗಳು ತಮ್ಮಲ್ಲಿ ಇರುವ ಕೊಳವೆ ಬಾವಿಗಳಿಗೆ ಕೊಳಚೆ ನೀರನ್ನು ಬಿಡುತ್ತಿದ್ದಾರೆ ಅಂತಹ ಕಾರ್ಖಾನೆಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.


ಸುದ್ದಿಗೋಷ್ಠಿಯಲ್ಲಿ ಅರ್ಕಾವತಿ ನದಿ ಹೋರಾಟ ಸಮಿತಿಯ ವಸಂತ್ ಕುಮಾರ್, ರಮೇಶ್, ಸತೀಶ್ ಕುಮಾರ್, ಮುನಿಕೃಷ್ಣ, ನರಸಿಂಹಮೂರ್ತಿ,ಕಾಳೆಗೌಡ, ವಿಜಯ್ ಕುಮಾರ್, ಗೋಪಾಲ್, ರಮೇಶ್, ರೈತ ಸಂಘ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಗ್ರಾಮ ಪಂಚಾಯಿತಿ ಯಿಂದ  ಕೊರೆಯಲಾದ  18 ಕೊಳವೆ ಬಾವಿಯ ಪೈಕಿ 17 ಕೊಳವೆ ಬಾವಿಗಳಲ್ಲಿ ಕುಡಿಯಲು  ಯೋಗ್ಯವೆಲ್ಲ ಎಂಬ  ಪರೀಕ್ಷೆಯಲ್ಲಿ ಕಂಡು ಬಂದಿದ್ದು  ಅದರೆ ಎರಡು ಮೂರು ವಾರಗಳ ಮುಂಚೆ ಕೊಳವೆ ಬಾವಿಯಲ್ಲಿ  ಕಪ್ಪು ನೀರು  ಹೊರ ಬಂದಿದ್ದು ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ಬಂದಿದೆ ಯಾವರೀತಿ ಹೋರಾಟ ಮಾಡಿದರು ನಮ್ಮಗೆ ನ್ಯಾಯ ಸಿಗುತ್ತಿಲ್ಲ”.
ವಸಂತ್ ಕುಮಾರ್, ಅರ್ಕಾವತಿ ನದಿ ಹೋರಾಟ ಸಮಿತಿಯ ಮುಖಂಡ.

 ನಮ್ಮ ತಾತಾ ಅಪ್ಪ ನಾ ಕಾಲದಲ್ಲಿ 80 ರಿಂದ 100 ವರ್ಷ ಬದುಕುತ್ತಿದ್ದರು ಅದರೆ ನಮ್ಮ ಪೀಳಿಗೆಗೆ 40 ರಿಂದ 50 ವರ್ಷ ಬದಕುವುದೆ ಕಷ್ಟ ವಾಗಿದೆ ನಮ್ಮ ಅಣ್ಣ ಯಾವುದೆ ಕಾಯಿಲೆ ಇಲ್ಲದಿದ್ದರು ಸಾವನ್ನಪ್ಪಿರುವುದು ರಾಸಾಯಿನಿಕ  ನೀರಿನಿಂದ  ಆಗಿದೆ  ಅಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದರು ಯಾವುದೆ ಕಾಯಿಲೆ ಇಲ್ಲವೆಂದು ವರದಿ ಬಂದಿದೆ ಅದರೆ ರಾಸಾಯಿನಿಕ ಮಿಶ್ರಿತ ನೀರು ಕುಡಿಯುವುದರಿಂದ  ನಿಧಾನ ಗತಿಯ ವಿಷದಿಂದ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಕಂಡುಬಂದಿದೆ.
ವಿಜಯ್ ಕುಮಾರ್, ಮಜರಾಹೊಸಹಳ್ಳಿಯ ಗ್ರಾಮಸ್ಥ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ