Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೈಕೋರ್ಟ್‌ನಲ್ಲಿ 101 ‘ಡಿ’ ದರ್ಜೆ ಹುದ್ದೆಗಳ ಭರ್ತಿ; ಅರ್ಜಿ ಆಹ್ವಾನ

Advertisement
Advertisement

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯವು (High Court of Karnataka) ಸಿಹಿ ಸುದ್ದಿ ನೀಡಿದೆ. ಹೈಕೋರ್ಟ್‌ನಲ್ಲಿ ಖಾಲಿ ಇರುವ ಒಟ್ಟು 101 ‘ಡಿದರ್ಜೆ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ:
ಒಟ್ಟು 101 ಹುದ್ದೆಗಳ ಪೈಕಿ ವಿವಿಧ ವಿಭಾಗಗಳಲ್ಲಿ ಈ ಕೆಳಗಿನಂತೆ ನೇಮಕಾತಿ ನಡೆಯಲಿದೆ. 

ಜವಾನ/ವಾಚ್‌ಮನ್: 93 ಹುದ್ದೆಗಳು
ಲಿಫ್ಟ್ ಅಟೆಂಡೆಂಟ್: 05 ಹುದ್ದೆಗಳು
ಸಹಾಯಕ ಬೈಂಡರ್: 01 ಹುದ್ದೆ
ಟೈಲರ್: 01 ಹುದ್ದೆ
ದೋಬಿ: 01 ಹುದ್ದೆ

ವಿದ್ಯಾರ್ಹತೆ ಮತ್ತು ವಯೋಮಿತಿ:
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ (ಅಧಿಸೂಚನೆಯನ್ವಯ ಮಾರ್ಪಾಡುಗಳಿಗೆ ಒಳಪಟ್ಟಿರುತ್ತದೆ), ಆದರೆ ಸರ್ಕಾರದ ನಿಯಮದಂತೆ ಸಡಿಲಿಕೆ ನೀಡಲಾಗಿದೆ.

ಪ್ರವರ್ಗ 2, 2ಬಿ, 3, 3ಬಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ (ಗರಿಷ್ಠ 38 ವರ್ಷ). ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ (ಗರಿಷ್ಠ 40 ವರ್ಷ).

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ: 100. ಇತರ ಎಲ್ಲಾ ಅಭ್ಯರ್ಥಿಗಳಿಗೆ (ಸಾಮಾನ್ಯ ಮತ್ತು ಹಿಂದುಳಿದ ವರ್ಗ): 200.

ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಏಪ್ರಿಲ್ 22, 2026. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 21, 2026

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಓದಲು ಅಭ್ಯರ್ಥಿಗಳು ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ judiciary.karnataka.gov.in ಗೆ ಭೇಟಿ ನೀಡಬಹುದು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ್ ಶಾ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್: ಕರ್ನಾಟಕದ ಭದ್ರತೆ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಬದ್ಧಹಿರಿಯೂರು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಸಂಧ್ಯಾ ವೈ.ಎಸ್. ಕರ್ತವ್ಯದಿಂದ ಬಿಡುಗಡೆಅಕ್ರಮವಾಗಿ ಗಾಂಜವನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ಬಂಧನಧರ್ಮಸ್ಥಳ ಬುರುಡೆ ಪ್ರಕರಣ: ನಟ ಪ್ರಕಾಶ್‌ರಾಜ್‌ಹೆಸರು ಪ್ರಸ್ತಾಪ; ಗೃಹ ಸಚಿವರ ಪ್ರತಿಕ್ರಿಯೆಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಪೆಟ್ರೋಲ್ ಬಂಕ್‌ಗಳಲ್ಲಿ ಬಲ್ಕ್ ಇಂಧನ ಖರೀದಿಗೆ ಕೇಂದ್ರದ ಬ್ರೇಕ್: ದಿನಕ್ಕೆ 200 ಲೀಟರ್‌ಮಾತ್ರ ಮಿತಿ!ರೈತರ ತೀವ್ರ ವಿರೋಧದ ನಡುವೆ ಬಿಡದಿ ಟೌನ್ ಶಿಪ್ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲ, ಇದು ಅಂತಿಮ ಪಟ್ಟಿಯಲ್ಲ: ಸಿದ್ದರಾಮಯ್ಯ ಸ್ಪಷ್ಟನೆಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ತಮಿಳುನಾಡು ಸಿಎಂ 'ದಳಪತಿ' ವಿಜಯ್: ಕರವೇ ಪ್ರತಿಭಟನೆಮಾವಿನ ಹಣ್ಣು ತಿಂದ ಬೆನ್ನಲ್ಲೇ ಇಬ್ಬರು ಸಹೋದರಿಯರು ಸಾವು!