Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವನಾಡಿನ ಮಾವಿನ ಸುವಾಸನೆ ಜಾರ್ಖಂಡ್‌ಗೆ: ಬಾಬಾನಗರದ ರೈತನ ಸಾಧನೆಗೆ ಎಂ.ಬಿ. ಪಾಟೀಲ್ ಮೆಚ್ಚುಗೆ

Advertisement

ಚಂದ್ರವಳ್ಳಿ ನ್ಯೂಸ್, ​ವಿಜಯಪುರ:
ಬಸವನಾಡಿನ ಮಣ್ಣಿನ ಗುಣ ಹಾಗೂ ರೈತನ ಪರಿಶ್ರಮ ಸೇರಿದರೆ ಎಂತಹ ಅದ್ಭುತವನ್ನಾದರೂ ಸೃಷ್ಟಿಸಬಹುದು ಎಂಬುದಕ್ಕೆ ಬಬಲೇಶ್ವರ ಮತಕ್ಷೇತ್ರದ ಬಾಬಾನಗರದ ರೈತ ಮುರಿಗೆಪ್ಪ ಬಸಪ್ಪ ಡೆಂಗಿನವರ ಅವರೇ ಸಾಕ್ಷಿ. ತಮ್ಮ ತೋಟದಲ್ಲಿ ಬೆಳೆದ ಗುಣಮಟ್ಟದ ಕೇಸರ್ ಮಾವಿನ ಹಣ್ಣಿನ ಮೂಲಕ ಈ ರೈತ ಈಗ ದೂರದ ಜಾರ್ಖಂಡ್‌ರಾಜ್ಯದ ಮಾರುಕಟ್ಟೆಯನ್ನೂ ತಲುಪಿದ್ದಾರೆ.

​ಮಂಗಳವಾರ ವಿಜಯಪುರದ ನಿವಾಸದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾದ ಮುರಿಗೆಪ್ಪ ಡೆಂಗಿನವರ ಹಾಗೂ ಅವರ ಸಂಗಡಿಗರು, ತಾವು ಬೆಳೆದ ಮಾವಿನ ಹಣ್ಣುಗಳನ್ನು ಸಚಿವರಿಗೆ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದರು.

​​ಯಶಸ್ವಿ ತೋಟಗಾರಿಕೆ: ಮುರಿಗೆಪ್ಪ ಅವರು ತಮ್ಮ ತೋಟದಲ್ಲಿ ಒಟ್ಟು 500 ಕೇಸರ್ ಮಾವಿನ ಗಿಡಗಳನ್ನು ನಾಟಿ ಮಾಡಿ ವೈಜ್ಞಾನಿಕವಾಗಿ ಬೆಳೆಸುತ್ತಿದ್ದಾರೆ.

​ಆರ್ಥಿಕ ಪ್ರಗತಿ: ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಮಾವಿಗೆ 150 ರೂ. ಗಳಂತೆ ದರ ಸಿಗುತ್ತಿದ್ದು, ಈ ಹಂಗಾಮಿನಲ್ಲಿ ಸುಮಾರು 4 ರಿಂದ 4.5 ಲಕ್ಷ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿದ್ದಾರೆ.

​ರಾಜ್ಯದ ಗಡಿ ದಾಟಿದ ಘಮ: ಇವರು ಬೆಳೆದ ಹಣ್ಣುಗಳು ಕೇವಲ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗದೆ, ಸಾವಿರಾರು ಕಿಲೋಮೀಟರ್ ದೂರದ ಜಾರ್ಖಂಡ್‌ರಾಜ್ಯಕ್ಕೂ ಪೂರೈಕೆಯಾಗುತ್ತಿರುವುದು ವಿಶೇಷ.

​"ಬಾಬಾನಗರದ ರೈತರ ಈ ಪರಿಶ್ರಮ ಹೆಮ್ಮೆ ತರುವಂತದ್ದು. ಬಸವನಾಡಿನ ಮಾವಿನ ಸುವಾಸನೆ ಭಾರತದಾದ್ಯಂತ ಪಸರಿಸಲಿ. ನಮ್ಮ ರೈತರ ಶ್ರಮಕ್ಕೆ ತಕ್ಕ ಗೌರವ ಮತ್ತು ಮಾರುಕಟ್ಟೆ ಸಿಗಲಿ ಎಂಬುದು ನನ್ನ ಹಾರೈಕೆ."
ಎಂ.ಬಿ. ಪಾಟೀಲ್
, ಸಚಿವರು.

​ರೈತರ ಈ ಯಶಸ್ಸು ಜಿಲ್ಲೆಯ ಇತರ ಯುವ ರೈತರಿಗೆ ತೋಟಗಾರಿಕಾ ಬೆಳೆಗಳತ್ತ ಮುಖ ಮಾಡಲು ಪ್ರೇರಣೆಯಾಗಿದೆ. ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿಯಲ್ಲಿ ಉತ್ತಮ ಲಾಭ ಗಳಿಸಬಹುದು ಎಂಬುದನ್ನು ಮುರಿಗೆಪ್ಪ ಅವರು ತೋರಿಸಿಕೊಟ್ಟಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ಹರಿಯಬ್ಬೆಯಲ್ಲಿ ಗಾಂಧೀಜಿ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಶೃಂಗೇರಿ ಮರು ಎಣಿಕೆಯಲ್ಲಿ ಅಕ್ರಮ ಆರೋಪ: ಆಯೋಗಕ್ಕೆ ರಾಜೇಗೌಡ ದೂರುಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಬಲಿಯಾದ ಸುವೇಂದು ಅಧಿಕಾರಿ ಆಪ್ತ; ಪನಿಹಟಿಯಲ್ಲಿ ಬಾಂಬ್ ದಾಳಿ!"ನಮ್ಮಲ್ಲಿ ಡಜನ್ ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ" - ಕೆ.ಎನ್ ರಾಜಣ್ಣ ಹೊಸ ಬಾಂಬ್!ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಮಹಿಳೆಯ ಆಭರಣ ಕಳವು: ಖತರ್ನಾಕ್ ಮಹಿಳಾ ಸಿಬ್ಬಂದಿ ಪೊಲೀಸ್ ವಶಕ್ಕೆಯಡಿಯೂರಪ್ಪ ‘ಅಭಿಮಾನೋತ್ಸವ’ಕ್ಕೆ ‘ಹಳ್ಳಿಹಕ್ಕಿ’ ಆಕ್ಷೇಪ: ಪೋಕ್ಸೋ ಪ್ರಕರಣ ಮುಂದಿಟ್ಟು ವಿಶ್ವನಾಥ್ ವಾಗ್ದಾಳಿಚುನಾವಣಾ ರಾಜಕೀಯಕ್ಕೆ ‘ಹೆಚ್. ವಿಶ್ವನಾಥ್’ ವಿದಾಯಜಿಲ್ಲಾ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಹವಾಮಾನ ವರದಿ: ಬಿಸಿಲ ಧಗೆಯ ನಡುವೆ ಮಳೆಯ ಮುನ್ಸೂಚನೆದಳಪತಿ ವಿಜಯ್ ಹಾದಿಯಲ್ಲಿ ನಿಖಿಲ್ ಕುಮಾರಸ್ವಾಮಿ: ಪುಟ್ಟರಾಜು ಸ್ಫೋಟಕ ಭವಿಷ್ಯ!