ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಗಂಟಿಗಾನಹಳ್ಳಿ ವಿವಿದೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ರಾಮಕೃಷ್ಣಪ್ಪ, ಬಿ.ಎನ್. ಶ್ರೀನಿವಾಸ್ ಮೂರ್ತಿ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಪಿ ರಾಮಕೃಷ್ಣಪ್ಪ ನವರಿಗೆ 8 ಮತಗಳು ಸಲ್ಲಿಕೆಯಾಗಿದ್ದು ಶ್ರೀನಿವಾಸ್ ಮೂರ್ತಿ ಅವರಿಗೆ ಒಂದು ಮತ ಸಲ್ಲಿಕೆಯಾಗಿದೆ ಎಂದು ಚುನಾಣಾಧಿಕಾರಿ ಜಿ.ಎ.ದೇವರಾಜು ಅವರು ತಿಳಿಸಿದ್ದು ಪಿ.ರಾಮಕೃಷ್ಣಪ್ಪ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡಿದ್ದಾರೆ.
ಸಂಘದಲ್ಲಿ 13 ನಿರ್ದೇಶಕರು ಸ್ಥಾನ ಇದ್ದು, ಅಧ್ಯಕ್ಷರ ಸ್ಥಾನಕ್ಕೆ ಎರಡು ಅರ್ಜಿಗಳನ್ನು ಹಾಕಲಾಗಿತ್ತು, ಅದರಲ್ಲಿ ಪಿ.ರಾಮಕೃಷ್ಣಪ್ಪ ಎಂಬುವರಿಗೆ 8 ಮತಗಳು ಸಲ್ಲಿಕೆಯಾಗಿವೆ ಬಿ.ಎನ್.ಶ್ರೀನಿವಾಸ್ ಮೂರ್ತಿ ಅವರಿಗೆ ಒಂದು ಮತ ಸಲ್ಲಿಕೆಯಾಗಿದೆ ಉಳಿದ ನಾಲ್ಕು ಮತಗಳು ಹಾಗೆ ಉಳಿದಿವೆ.
ಇನ್ನು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ರಾಮಕೃಷ್ಣಪ್ಪ ಮಾತನಾಡಿ,ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ, ಇನ್ನು ಸಂಘವು ರೈತರ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಪಕ್ಷಾತೀತವಾಗಿ ರೈತರ ಸೇವೆ ಮಾಡುವ ಮೂಲಕ ಮಾದರಿ ಸಂಘವನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆದು ಕೆಲಸ ಮಾಡಲಾಗುವುದು ಎಂದು ಹೇಳಿದರು.
ತೆಂಗು ನಾರು ಮಂಡಳಿಯ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಪಿ.ರಾಮಕೃಷ್ಣಪ್ಪನವರನ್ನು ಪುಷ್ಪ ಮಾಲೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿ , 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ರಾಮಕೃಷ್ಣಪ್ಪನವರು ಇಂದಿಗೂ ರೈತರ ಸೇವೆ ಮಾಡುತ್ತಾ ಬಂದಿದ್ದಾರೆ ಅದಕ್ಕಾಗಿಯೇ ಮತ್ತೆ ಇಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎ. ನಾಗರಾಜ್, ನಿರ್ದೇಶಕರಾದ ಸುಮಿತ್ರ, ಎಂ.ಎಸ್.ನಂದೀಶ್, ಗೌರೀಶ್, ವಿಜಯ್ ಕುಮಾರ್, ಯಶ್ವಂತ್, ಹಾಗೂ ಸಂಘದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.



