LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯೋಗ ಬಲ್ಲವರು ನಿರೋಗಿಗಳು : ಟಿ.ಪಿ.ಉಮೇಶ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ದೇಹ ಮತ್ತು ಮನಸ್ಸಿನ ಸಮತೋಲನಕ್ಕೆ ತನುಮನಗಳ ಆರೋಗ್ಯ ವೃದ್ಧಿಗೆ ಯೋಗ ಬಹಳ ಸಹಕಾರಿ. ಯೋಗ ಸರ್ವ ರೋಗಗಳ ಹೋಗಲಾಡಿಸುವುದು ಮತ್ತು ನಿಯಂತ್ರಿಸುವುದು. ಯೋಗ ಬಲ್ಲವರು ನಿರೋಗಿಗಳು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.

ಹೊಳಲ್ಕೆರೆ ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹನ್ನೆರಡನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಮಾತನಾಡಿದ ಅವರು, ಯೋಗ ಭಾರತದ ಸಾವಿರಾರು ವರ್ಷಗಳ ಸಾಧಕರ ಕೊಡುಗೆ.

ಪತಂಜಲಿ ಮುನಿಯವರ ಅಷ್ಟಾಂಗ ಯೋಗ ಕೃತಿಯಲ್ಲಿ ಯೋಗಕ್ಕೆ ನಿಯಮಿತ ವಿಧಿ ನಿಯಮ ಆಸನಗಳ ವ್ಯವಸ್ಥೆಗೊಳಿಸಿದರು. ಇಂದು ಪ್ರಪಂಚವೇ ಯೋಗ ಸರ್ವರೋಗಗಳ ನಿರ್ಮೂಲನಕಾರಿಯೆಂದು ಅರಿತಿದೆ. ವೃದ್ಧಾಪ್ಯದಲ್ಲಿ ಆರೋಗ್ಯ ವೃದ್ಧಿ ಎಂಬ ಧ್ಯೇಯಯೊಂದಿಗೆ ಹನ್ನೆರಡನೇ ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ನಿತ್ಯವೂ ಯೋಗ ಮಾಡೋಣ ಆರೋಗ್ಯವಂತರಾಗೋಣ ಆರೋಗ್ಯವೇ ಜೀವನದ ಭಾಗ್ಯ. 

ಯೋಗ ದೇಹದ ಪುಷ್ಟಿಗೆ ಆಸನಗಳ ಅಭ್ಯಾಸ ತಿಳಿಸಿದರೆ ಮನಸ್ಸಿನ ಪ್ರಗತಿಗೆ ಧ್ಯಾನ ಯಮ ನಿಯಮ ಪ್ರಾಣಾಯಾಮ ಪ್ರತ್ಯಾಹಾರಗಳ ಅಭ್ಯಾಸ ತಿಳಿಸಿದೆ. ಯೋಗ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಬೇಕು. ದಿನವು ಮುಂಜಾನೆ ಹಾಗು ಸಂಜೆ ಕನಿಷ್ಠ ಅರ್ಧ ಗಂಟೆಗಳ ಅಭ್ಯಾಸ ನಡೆಸಿದರೆ ದೇಹ ಹಾಗು ಮನಸ್ಸುಗಳ ಆಯುಷ್ಯ ವೃದ್ಧಿಸುವುದು ಎಂದು ಹೇಳಿದರು. 

ಯೋಗ ದಿನಾಚರಣೆಯ ಪ್ರಯುಕ್ತ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕಿ ಜಿ.ಎನ್.ರೇಷ್ಮಾ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿಸಿದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಸಚಿವ ಟಿ. ರಘುಮೂರ್ತಿ ಮಾಲಾರ್ಪಣೆ; ಗೌರವ ನಮನ  ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ- ಟಿ.ರಘುಮೂರ್ತಿಹಿರಿಯೂರು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ  ಸಚಿವ ಟಿ.ರಘುಮೂರ್ತಿ ಭೇಟಿ, ಪರಿಶೀಲನೆರಘುನಾಥಪುರ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವಹದಗೆಟ್ಟ ರಸ್ತೆ, ಚರಂಡಿ ಶೀಘ್ರ ದುರಸ್ತಿಗೆ ಕನ್ನಡ ಪಕ್ಷ ಆಗ್ರಹಆಗಸ್ಟ್-9ರಂದು ರಾಜ್ಯ ಮಟ್ಟದ ದೇಹ ದಾರ್ಢ್ಯ ಸ್ಪರ್ಧೆಮಳೆ ಬರದಿದ್ದರೆ ಪರಿಹಾರದ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ-ಕೆ.ಹೆಚ್ ಮುನಿಯಪ್ಪಶೀಘ್ರ ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ-ಸಚಿವ ರಘುಮೂರ್ತಿಅಕ್ಕ ಸಮ್ಮೇಳನಕ್ಕೆ ಗೌರವ ಅತಿಥಿಯಾಗಿ ಮಹಬೂಬ್ ಪಾಷಾಗೆ ಆಹ್ವಾನ "ನಾಗೇಂದ್ರ ರಾಜೀನಾಮೆ ನೀಡದಿದ್ದರೆ ಸದನ ನಡೆಯಲು ಬಿಡಲ್ಲ": ಛಲವಾದಿ ನಾರಾಯಣಸ್ವಾಮಿ!