Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

100 ಹಿರಿಯ ನಾಗರಿಕರಿಗೆ ಉಚಿತ ಹಾಗೂ ವಿಶೇಷ ವಸತಿ ಆರೈಕೆ

ಚಂದ್ರವಳ್ಳಿ ನ್ಯೂಸ್, ​ದೊಡ್ಡಬಳ್ಳಾಪುರ:
ಡಿಮೆನ್ಸಿಯಾ ಆರೈಕೆಯ ಕ್ಷೇತ್ರದಲ್ಲಿ ಒಂದು ಮಹತ್ವದ ಮಾದರಿಯಾಗಿ ರೂಪುಗೊಳ್ಳುತ್ತಿರುವ ಸ್ಮೃತಿ ಗ್ರಾಮವು ವಿಶೇಷ ವಸತಿ ಆರೈಕೆ ಆರೈಕೆದಾರರ ತರಬೇತಿ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಒಂದೇ ಸಮಗ್ರ ಆವರಣದಲ್ಲಿ ಒಗ್ಗೂಡಿಸಿದೆ. ಇದರ ಮೊದಲ ಹಂತದಲ್ಲಿ ಆರ್ಥಿಕವಾಗಿ ಹಿಂದುಳಿದ 100 ಹಿರಿಯ ನಾಗರಿಕರಿಗೆ ಉಚಿತ ಹಾಗೂ ವಿಶೇಷ ವಸತಿ ಆರೈಕೆಯನ್ನು ಒದಗಿಸಲಾಗುತ್ತದೆ ಎಂದು  ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ರಾಧಾ ಎಸ್. ಮೂರ್ತಿ ತಿಳಿಸಿದರು.

 ತಾಲ್ಲೂಕಿನ ತಿರುಮಗೊಂಡನಹಳ್ಳಿ ಸಮೀಪ  ಸಮಗ್ರ ಡಿಮೆನ್ಸಿಯಾ ಆರೈಕೆಗಾಗಿ 'ನೈಟಿಂಗೇಲ್ಸ್ ಸ್ಮೃತಿ ಗ್ರಾಮ' ವನ್ನು ಸ್ಥಾಪಿಸಿದ್ದು,  ಶುಕ್ರವಾರ( ನೆ. 06) ಇದರ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ವಿಶೇಷವಾಗಿ ಅಸಹಾಯಕ ಸ್ಥಿತಿಯಲ್ಲಿರುವವರು, ನಿರ್ಲಕ್ಷ್ಯಕ್ಕೆ ಒಳಗಾದವರು, ಒಂಟಿಯಾಗಿ ವಾಸಿಸುವವರು ಅಥವಾ ಕುಟುಂಬದ ಸಮರ್ಪಕ ಬೆಂಬಲವಿಲ್ಲದ ಹಿರಿಯರಿಗೆ ಆದ್ಯತೆ ನೀಡಲಾಗುತ್ತದೆ.55 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ, ಡಿಮೆನ್ಸಿಯಾ ಇರುವುದು ವೈದ್ಯಕೀಯವಾಗಿ ದೃಢಪಟ್ಟಿರುವ ಹಿರಿಯ ನಾಗರಿಕರಿಗೆ ದಾಖಲಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ, ದಿನದ 24 ಗಂಟೆಗಳ ಆರೈಕೆಯ ಅಗತ್ಯವಿರುವ ಹಾಗೂ ಆರೈಕೆ ಮಾಡಲು ಕುಟುಂಬದ ಸದಸ್ಯರ ಬೆಂಬಲವಿಲ್ಲದ ಅಥವಾ ಅತ್ಯಲ್ಪ ಬೆಂಬಲ ಹೊಂದಿರುವ ಹಿರಿಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

 ಆರ್ಥಿಕ ಸಂಕಷ್ಟವು ಕರುಣಾಮಯಿ ಮತ್ತು ಗುಣಮಟ್ಟದ ಡಿಮೆನ್ಸಿಯಾ ಆರೈಕೆಗೆ ಎಂದಿಗೂ ಅಡ್ಡಿಯಾಗಬಾರದು. ಡಿಮೆನ್ಸಿಯಾದಿಂದ ಬಳಲುತ್ತಿರುವ ಅನೇಕ ಅಸಹಾಯಕ ಹಿರಿಯ ನಾಗರಿಕರಿಗೆ, ಅವರ ಕುಟುಂಬದವರು ಅಗತ್ಯ ಆರೈಕೆಯನ್ನು ಒದಗಿಸಲು ಸಾಧ್ಯವಾಗದ ಸಂದರ್ಭದಲ್ಲಿ ಬೇರೆ ಯಾವುದೇ ಆಸರೆಯಿರುವುದಿಲ್ಲ. ಸ್ಮೃತಿ ಗ್ರಾಮದ ಮೂಲಕ ಇಂತಹ ಹಿರಿಯರನ್ನು ತಲುಪಿ, ಅವರಿಗೆ ಗೌರವ, ಭದ್ರತೆ ಮತ್ತು ಆರೈಕೆಯೊಂದಿಗೆ ಬದುಕುವ ಅವಕಾಶವನ್ನು ಕಲ್ಪಿಸುವುದು ನಮ್ಮ ಆಶಯವಾಗಿದೆ. ಇಂತಹ ಹಿರಿಯರನ್ನು ಗುರುತಿಸಿ ನಮ್ಮನ್ನು ಅವರ ಬಳಿ ತಲುಪಿಸಲು ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್  ನ ಪ್ರಮುಖರಾದ ಎಸ್. ಪ್ರೇಮ್ ಕುಮಾರ್ ರಾಜ, ಅಮರನಾಥ್ ಕಾಮತ್, ಸುಧಾಕರ್ ರಾವ್, ಮನೋಜ್ ಶಾ, ಇಂದ್ರಾ ಮೆನನ್, ಪಂಕಜ್ ಲಾಖ್ನಿ, ಬಸತ್ ಪೋದ್ದಾರ್ ಸೇರಿದಂತೆ ಸ್ಥಳೀಯ ಪ್ರಮುಖರು, ಮುಖಂಡರು ಹಾಜರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ: ಕರ್ನಾಟಕಕ್ಕೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ100 ಹಿರಿಯ ನಾಗರಿಕರಿಗೆ ಉಚಿತ ಹಾಗೂ ವಿಶೇಷ ವಸತಿ ಆರೈಕೆಬುಡ ಸಮೇತ ಧರಾಶಾಯಿಯಾದ ಬೃಹತ್ ಮರ"ಕುರುಬರು ಕೆಟ್ಟು ಕುಂಚಿಟಿಗರಾದರು", "ಹಂಚಿಕಡ್ಡಿಗಾಗಿ ಕಂಚಿಪಟ್ಟಣ ಕೆಡಿಸಿ ಬಂದವರು ಕುಂಚಿಟಿಗರು"ಕುಂಚಿಟಿಗ ಸಮುದಾಯದ 'ಜಾನಕಲ್ಲೋರು' ಮತ್ತು 'ಜಲಧೇನೋರು' ಎಂಬ ಗೋತ್ರಗಳ ನಡುವೆ ನಡೆದ ಸಂಘರ್ಷದ ಕಥನಸಂಪುಟ ವಿಸ್ತರಣೆ ಮತ್ತು ಸ್ಟಿಂಗ್ ಚರ್ಚೆ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿ ಪ್ರವಾಸ  ಬೆಂಗಳೂರು ವಿಮಾನ ನಿಲ್ದಾಣ ಸಂಸ್ಥೆಗಳಿಂದ ಸ್ಥಳೀಯರಿಗೆ ಉದ್ಯೋಗ ಭರವಸೆ: ಕರವೇ ‘ಆಗ್ರಹ ಅಭಿಯಾನ’ದ ಸಭೆ ಯಶಸ್ವಿಪತ್ನಿ ಸೇರಿ ಒಂದೇ ಕುಟುಂಬದ 7 ಜನರ ಬರ್ಬರ ಹತ್ಯೆ; ಆರೋಪಿ ಕ್ಯಾಬ್ ಚಾಲಕ ಪೊಲೀಸ್ ವಶಕ್ಕೆಕಾಲ ಕೂಡಿ ಬಂದಾಗ ಎಲ್ಲವೂ ಸರಿಹೋಗಲಿದೆ: ಸಚಿವ ಸತೀಶ್ ಜಾರಕಿಹೊಳಿಹೊಸೂರಿನಲ್ಲಿ ಘೋರ ದುರಂತ: ಕಾರ್ಖಾನೆ ಕಟ್ಟಡದ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರ ಸಾವು