Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರಲ್ಲಿ ಉಚಿತ  ಪ್ರೌಢಶಾಲೆ ಮತ್ತು ಹಾಸ್ಟೆಲ್..!

Advertisement
ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರಲ್ಲಿ ಉಚಿತವಾಗಿ ಪ್ರೌಢಶಾಲೆಗೆ ಹಾಗೂ ಹಾಸ್ಟೆಲ್ ಗೆ ಸೇರ ಬಯಸುವ ವಿದ್ಯಾರ್ಥಿಗಳಿಗಿದೋ ಸುವರ್ಣಾವಕಾಶ..!

ಅನಾಥ ಮಕ್ಕಳಿಗೆ, ಕೇವಲ ತಂದೆ ಅಥವಾ ಕೇವಲ ತಾಯಿ ಇರುವ ಮಕ್ಕಳಿಗೆ, ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಬಡ ಮಕ್ಕಳಿಗೆ, ಯಾವುದೇ ಜಾತಿ ಭೇದವಿಲ್ಲದೆ ಸೇರಿಸಿಕೊಳ್ಳುವ, ಸಂಪೂರ್ಣ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ಅವಕಾಶ ಒದಗಿಸುವ, ಹಾಸ್ಟೆಲ್ ಇರುವ  ಪ್ರೌಢಶಾಲೆಯೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ..!  ಖಂಡಿತವಾಗಿಯೂ ತಮಗಿದೊಂದು ಸುವರ್ಣಾವಕಾಶ ಕಲ್ಪಿಸಿಕೊಡಲಿದೆ..!
ಸೇರ ಬಯಸುವ ಆಸಕ್ತ ಮಕ್ಕಳು ಹಾಗೂ ಸೇರಿಸ ಬಯಸುವ ತಂದೆ/ ತಾಯಿ/ ಪಾಲಕ/ ಪೋಷಕರು ದಯಮಾಡಿ ಗಮನಿಸಿ:


 8 ರಿಂದ 10 ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದ ಪ್ರತಿಷ್ಠಿತ ಡಿ.ಸಿ.ಎಂ. ಶಿಕ್ಷಣ ಸಂಸ್ಥೆಯಶ್ರೀ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಪ್ರವೇಶಾತಿಯೂ ಸೇರಿದಂತೆ, ಊಟ, ವಸತಿ, ಸಮವಸ್ತ್ರ, ನೋಟ್ಸ್, ಶೂಸ್ ಹೀಗೇ ಎಲ್ಲವೂ ಇಲ್ಲಿ ಸೇರಲಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಉಚಿತವಾಗಿ ಸಿಗಲಿವೆ..!

ವಿವಿಧ ಸಂಕಷ್ಟಗಳ ಕಾರಣಗಳಿಂದ  ಓದಲಾಗದೆ ತೊಂದರೆಯಲ್ಲಿರುವ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ವಸತಿ/ ಆಶ್ರಯ/ ಶಿಕ್ಷಣ ನೀಡಲಿರುವ ಹಾಸ್ಟೆಲ್ ಹಾಗೂ ಈ ಪ್ರೌಢಶಾಲೆ, ನಿಜಕ್ಕೂ ಬಡ ಮಕ್ಕಳ ಪಾಲಿಗೆ ಆಶಾಕಿರಣವಷ್ಟೇ ಅಲ್ಲ, ನಾಳೆಯ ಬಾಳಿನ ಹೆಗ್ಗುರಿಗಾಗಿ ಸಾಗಲಿರುವ  ನವ ಚೈತನ್ಯಗಳಿಗೆ ದಾರಿ ತೋರುವ ದೊಂದಿಗಳು; ಪ್ರೀತಿಯ ಪಂಜುಗಳು..! ಬನ್ನಿ ವಿದ್ಯಾರ್ಥಿಗಳೆ ಈ ದೊಂದಿ/ಪಂಜುಗಳ ಮಮತೆಯ ಸಮತೆಯ ಮಧುರ ಮುಂಬೆಳಕಲ್ಲಿ ನಿಮ್ಮ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಿಕೊಳ್ಳಿ..!

ಮೊದಲು ಸಂಪರ್ಕಿಸುವವರಿಗೆ ಅಥವಾ ಬಂದವರಿಗೆ ಪ್ರಥಮಾಧ್ಯತೆ..!
ಈಗಲೇ ಕರೆಮಾಡಿ ಸಂಪರ್ಕಿಸಿ ಅಥವಾ ಸ್ವತಃ ಬಂದು
, ಮುಂದೆ ಹೆಸರಿಸಿದ ಶಿಕ್ಷಕ ಶಿಕ್ಷಕಿಯರ ಕಂಡು ತಮ್ಮ ಮಕ್ಕಳಿಗೆ ಅವಕಾಶ ಖಚಿತಪಡಿಸಿಕೊಳ್ಳಿ..! 

ಪ್ರವೇಶಾತಿಗಾಗಿ ತಾವು ಸಂಪರ್ಕಿಸಬೇಕಾದ/ಅಥವಾ ಕಾಣಬೇಕಾದ ಶಿಕ್ಷಕ/ಶಿಕ್ಷಕಿಯರ ಹೆಸರು ಹಾಗೂ ಪೋನ್ ವಿವರ:

೧) ಡಾ. ಜಯಪ್ಪ ಹೊನ್ನಾಳಿ, Mo: 9480216657, ೨)ಮುರಳೀಧರರಾವ್    Mo: 9845026750, ೩) ಶಿವಮೂರ್ತಿ Mo:9880900918, ೪) ಶ್ರೀನಿವಾಸ್ Mo:9449525468 ೫)ಹರೀಶ್ Mo: 9739342125, ೬) ಮಹದೇವಸ್ವಾಮಿ Mo: 8951753368, ೭)ತನುಜಾ Mo: 8722859033 ಇವರುಗಳನ್ನು ಸಂಪರ್ಕಿಸುವಂತೆ ಡಾ.ಜಯಪ್ಪ ಹೊನ್ನಾಳಿ (ಜಯಕವಿ), ಮೈಸೂರು ಮನವಿ ಮಾಡಿದ್ದಾರೆ.

ಸಂಪರ್ಕಿಸಬೇಕಾದ ವಿಳಾಸ: ಶ್ರೀ ಸಿದ್ಧೇಶ್ವರ ಪ್ರೌಢಶಾಲೆ, ಶ್ರೀ ಡಿ ಎಸ್ ಎಂ ಶಿಕ್ಷಣ ಸಂಸ್ಥೆ, ಶ್ರೀ ಸಿದ್ಧೇಶ್ವರ ಅನುದಾನಿತ ಪ್ರೌಢಶಾಲೆ, ಮೊದಲನೇ ಹಂತ, ವಿಜಯನಗರ, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಹತ್ತಿರ, 100 ಅಡಿ ರಸ್ತೆ, ರಘುಲಾಲ್ ಪಕ್ಕ, ಮೈಸೂರು-570017 ಯಾರಿಗಾದರೂ ಉಪಯೋಗ ಆಗುತ್ತದೆ ದಯವಿಟ್ಟು ನಿಮ್ಮ ಗುಂಪುಗಳಲ್ಲಿ ಪ್ರಚಾರ ಮಾಡಿ ಎಂದು ದಾವಣಗೆರೆ ಗುಜ್ಜಾರ್ ಮನವಿ ಮಾಡಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ