Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಮಾಜಮುಖಿ ಕಾರ್ಯ ಮಾಡುತ್ತಿರುವ ಜಯಂಟ್ಸ್ ಕೇರ್ ಫೌಂಡೇಶನ್ 

ಸಮಾಜಮುಖಿ ಕಾರ್ಯ ಮಾಡುತ್ತಿರುವ ಜಯಂಟ್ಸ್ ಕೇರ್ ಫೌಂಡೇಶನ್ 
ಚಂದ್ರವಳ್ಳಿ ನ್ಯೂಸ್, ಉಡುಪಿ:
ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಜಯಂಟ್ಸ್ ಕೇರ್ ಫೌಂಡೇಶನ್  ಇದರ ವತಿಯಿಂದ  ಜಯಂಟ್ಸ್ ಸಪ್ತಾಹ ಸಮಾರೋಪ ಸಮಾರಂಭ ಜಯ0ಟ್ಸ್ ಗ್ರೇಟ್ ಡೆ ಕಾರ್ಯಕ್ರಮ ಬ್ರಹ್ಮಾವರ ಸಿಟಿ ಸೆಂಟರ್ ನಲ್ಲಿ ನಡೆಯಿತು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭಾರತೀಯ ಮೂಲದ ಅಂತರಾಷ್ಟ್ರೀಯ ಸೇವಾ ಸಂಸ್ಥೆ    ಬ್ರಹ್ಮಾವರದ ಘಟಕ ಈ ವರ್ಷದಲ್ಲಿ 74 ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಮನೆ ಮಾತಾಗಿದೆ. ಉಡುಪಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲು  ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಫುಡ್ ಸ್ಟ್ರೀಟ್ ಮಾಡುವ  ವಿನೂತನ ಯೋಜನಾ  ಮನವಿ ಬಗ್ಗೆ ಗಮನಹರಿಸುವುದಾಗಿ ತಿಳಿಸಿದರು.

Advertisement

 ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ ಶುಭ ಹಾರೈಸಿದರು.

ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಕೇಂದ್ರ ಸಮಿತಿ ಸದಸ್ಯ ದಿನಕರ್ ಕೆ ಅಮೀನ್, ಬ್ರಹ್ಮಾವರದ ಘಟಕ  ಕಳೆದ ಹಲವಾರು ವರ್ಷಗಳಿಂದ ಅನೇಕ ರೀತಿಯ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಈ ಸಂಸ್ಥೆ ವತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.

 ವೇದಿಕೆಯಲ್ಲಿ ಯೂನಿಟ್ ಡೈರೆಕ್ಟರ್ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಜೆಂಟ್ಸ್ ಫೆಡರೇಶನ್ ಉಪಾಧ್ಯಕ್ಷ ದೀಪಕ್ ಬೋಜ್ ಶುಭ ಹಾರೈಸಿದರು.

ಜೆಂಟ್ಸ್ ಗ್ರೂಪ್ ಆಫ್ ಗಾರ್ಡನ್ ಸಿಟಿ ಬೆಂಗಳೂರು ಅಧ್ಯಕ್ಷ ಸಿ ಎಸ್ ಬಾಲಸುಬ್ರಮಣ್ಯ ಮುಂದಿನ ಅಂತರಾಷ್ಟ್ರೀಯ ಸಮ್ಮೇಳನದ ಕುರಿತು ವಿವರವಾದ ಮಾಹಿತಿ ನೀಡಿ ಆಮಂತ್ರಣ ಪತ್ರಿಕೆಯನ್ನು ಸಂಸ್ಥೆಗೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಹೇರೂರು ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಜಯಕರ ಅವರನ್ನು ಸನ್ಮಾನಿಸಲಾಯಿತು.

 ಸಂಸ್ಥೆಯ ಗೌರವ ಸಲಹೆಗಾರ ಮಧುಸೂದನ್ ಹೇರೂರು ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಯಿತು. ಕಾರ್ಯದರ್ಶಿ ಮೀಲ್ಟನ್ ಒಲಿವೇರ ವರದಿ ವಾಚಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ್ ಬಿ, ಕಿಶೋರಿ ಶೆಟ್ಟಿ, ವಿವೇಕಾನಂದ ಕಾಮತ್ ದಂಪತಿಗಳು, ಕಲಾವಿದರಾದ ಸಚಿನ್ ಪೈ ಅವರನ್ನು ಗೌರವಿಸಲಾಯಿತು. ಡೋರಿಸ್ ಡಿಸಿಲ್ವ, ಸುಧಾಕರ್  ಸನ್ಮಾನಿತರ ಪರಿಚಯ ಮಾಡಿದರು. ವಿವಿಧ ಗಣ್ಯರನ್ನು ಗೌರವಿಸಲಾಯಿತು ಶ್ರೀನಾಥ್ ಕೋಟ ರೋನಾಲ್ಡ್, ಪ್ರತಿಮಾ  ಸಹಕರಿಸಿದರು. ರಾಫವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೋಮಾಳ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಹಕ್ಕುಪತ್ರ ನೀಡಿ.. ಬಡ ನಿರಾಶ್ರಿತರಿಂದ ಉಗ್ರ ಹೋರಾಟದ ಎಚ್ಚರಿಕೆ....!ಕೆವಿಕೆಗೆ ರಾಷ್ಟ್ರೀಯ ಪ್ರಯೋಗಾಲಯದ ಎನ್ಎಬಿಎಲ್ ಮಾನ್ಯತೆಚಿನ್ನಾಭರಣ ಕಳ್ಳತನ ಆರೋಪಿ ಬಂಧನ... ಬಂದಿತನಿಂದ 25ಲಕ್ಷ ಮೌಲ್ಯದ ಚಿನ್ನಾಭರಣ ವಶಸಮಾಜಮುಖಿ ಕಾರ್ಯ ಮಾಡುತ್ತಿರುವ ಜಯಂಟ್ಸ್ ಕೇರ್ ಫೌಂಡೇಶನ್ ಬಿಗ್ ಬಾಸ್ ಸೀಸನ್-13: ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಲ್ಲೇ ಅಬ್ಬರಿಸಿದ 'ಘಾಟಿ ಗಾನವಿ'!ಭೀಕರ ಉಗ್ರರ ಸಂಚು ಭೇದಿಸಿದ ರಾಜ್ಯ ಪೊಲೀಸರು: ಪ್ರಮುಖ ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್‌!ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ವಿಚಾರಣೆಬಿಜೆಪಿಯವರದ್ದು ಕಪಟ ನಾಟಕ; ಕೇಂದ್ರಕ್ಕೆ ಮನವಿ ಸಲ್ಲಿಸಲು ಬಾರದಿದ್ದರೆ ರೈತರ ಪರ ನಾವೇ ಕ್ರಮ: ಡಿ.ಕೆ. ಶಿವಕುಮಾರ್ಸಿಎಂ ಆಗುವ ಆಸೆ ಇದೆ: ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಮಾತುಗಳು! ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಸ್ವಂತ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕೇಂದ್ರ ಸಚಿವ