Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಿಎಂ ಆಗುವ ಆಸೆ ಇದೆ: ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಮಾತುಗಳು!

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಆಕಾಂಕ್ಷೆಗಳು ಹಾಗೂ ರಾಜ್ಯ ರಾಜಕಾರಣದ ಪ್ರಮುಖ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

Advertisement

ಸಚಿವ ಸ್ಥಾನದ ಆಕಾಂಕ್ಷೆ: ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಶಿಕ್ಷಣ ಸುಧಾರಣಾ ಸಬ್‌ಕಮಿಟಿಗೆ ಹಲವು ಇನ್‌ಪುಟ್‌ಗಳನ್ನು ನೀಡಿದ್ದೇನೆ. ನನಗೆ ಒಂದು ಇಲಾಖೆ ಕೊಟ್ಟು ನೋಡಲಿ, ಉತ್ತಮವಾಗಿ ನಿರ್ವಹಿಸಿ ತೋರಿಸುತ್ತೇನೆ. ಕೊನೆ ಪಕ್ಷ ಸಚಿವ ಸ್ಥಾನವಾದರೂ ನೀಡಲಿ" ಎಂದು ಪರೋಕ್ಷವಾಗಿ ಸಚಿವರಾಗುವ ಬಯಕೆಯನ್ನು ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾಗುವ ಬಯಕೆ: "25 ವರ್ಷಗಳ ಬಳಿಕ ನಾನು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ" ಎಂದು ತಮ್ಮ ದೀರ್ಘಕಾಲಿಕ ರಾಜಕೀಯ ಗುರಿಯನ್ನು ತೆರೆದಿಟ್ಟರು.

ಸರ್ಕಾರಿ ಶಾಲೆಗಳ ಸ್ಥಿತಿ: ತಮ್ಮ ಕ್ಷೇತ್ರದ 7ನೇ ತರಗತಿಯ 359 ವಿದ್ಯಾರ್ಥಿಗಳಿಗೆ ಕನ್ನಡ ವರ್ಣಮಾಲೆಯೇ ಬಾರದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಈ ಬಗ್ಗೆ ಸರ್ಕಾರಿ ಶಾಲಾ ಶಿಕ್ಷಕರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದರು.

ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ: ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಪ್ರದೀಪ್ ಈಶ್ವರ್, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಖಜಾನೆ ಖಾಲಿ ಇಲ್ಲ: ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕೇಳುವುದು ಸಹಜ ಎಂದ ಅವರು, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ ತಲಾ 30 ಕೋಟಿ ರೂ. ಅನುದಾನ ನೀಡಿರುವುದಾಗಿ ತಿಳಿಸಿದರು.

ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು: ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಮಾಜಿ ಸಂಸದರಾಗಿರುವ ಅವರು ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಓದಿಕೊಳ್ಳಿ ಎನ್ನುತ್ತಿದ್ದಾರೆ. ಅಂಬೇಡ್ಕರ್ ಅವರು ಓದೋಕೆ ಹೇಳುವುದಲ್ಲ, ಅವರ ವಂಶಸ್ಥರ ರಕ್ತದಲ್ಲೇ ಡಾ. ಬಿ.ಆರ್. ಅಂಬೇಡ್ಕರ್ ಇದ್ದಾರೆ. ಅವರಿಂದ ನಮಗೆ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ" ಎಂದು ತಿರುಗೇಟು ನೀಡಿದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೋಮಾಳ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಹಕ್ಕುಪತ್ರ ನೀಡಿ.. ಬಡ ನಿರಾಶ್ರಿತರಿಂದ ಉಗ್ರ ಹೋರಾಟದ ಎಚ್ಚರಿಕೆ....!ಕೆವಿಕೆಗೆ ರಾಷ್ಟ್ರೀಯ ಪ್ರಯೋಗಾಲಯದ ಎನ್ಎಬಿಎಲ್ ಮಾನ್ಯತೆಚಿನ್ನಾಭರಣ ಕಳ್ಳತನ ಆರೋಪಿ ಬಂಧನ... ಬಂದಿತನಿಂದ 25ಲಕ್ಷ ಮೌಲ್ಯದ ಚಿನ್ನಾಭರಣ ವಶಸಮಾಜಮುಖಿ ಕಾರ್ಯ ಮಾಡುತ್ತಿರುವ ಜಯಂಟ್ಸ್ ಕೇರ್ ಫೌಂಡೇಶನ್ ಬಿಗ್ ಬಾಸ್ ಸೀಸನ್-13: ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಲ್ಲೇ ಅಬ್ಬರಿಸಿದ 'ಘಾಟಿ ಗಾನವಿ'!ಭೀಕರ ಉಗ್ರರ ಸಂಚು ಭೇದಿಸಿದ ರಾಜ್ಯ ಪೊಲೀಸರು: ಪ್ರಮುಖ ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್‌!ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ವಿಚಾರಣೆಬಿಜೆಪಿಯವರದ್ದು ಕಪಟ ನಾಟಕ; ಕೇಂದ್ರಕ್ಕೆ ಮನವಿ ಸಲ್ಲಿಸಲು ಬಾರದಿದ್ದರೆ ರೈತರ ಪರ ನಾವೇ ಕ್ರಮ: ಡಿ.ಕೆ. ಶಿವಕುಮಾರ್ಸಿಎಂ ಆಗುವ ಆಸೆ ಇದೆ: ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಮಾತುಗಳು! ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಸ್ವಂತ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕೇಂದ್ರ ಸಚಿವ