Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಸಾರದಲ್ಲಿದ್ದರೂ ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು:ಸೌಮ್ಯ ಪ್ರಸಾದ್‌

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀರಾಮಕೃಷ್ಣ ಪರಮಹಂಸರು ತಿಳಿಸಿದ ತತ್ವಗಳ ಪಾಲನೆಯಿಂದ  ಆಧುನಿಕ ಮನುಷ್ಯ ಸಂಸಾರಿಕ  ಜೀವನದಲ್ಲಿದ್ದರೂ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಸೌಮ್ಯ ಪ್ರಸಾದ್ ತಿಳಿಸಿದರು.

ನಗರದ ತ್ಯಾಗರಾಜನಗರದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು "ಸಂಸಾರದಲ್ಲಿದ್ದರೂ ಭಗವಂತನ ಸಾಕ್ಷಾತ್ಕಾರ ಸಾಧ್ಯವೇ"? ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.                               

              ಶ್ರೀರಾಮಕೃಷ್ಣರು ಹೇಳಿದ ಸಾಧನಾ ಮಾರ್ಗಗಳಿಂದ  ಲೌಕಿಕ ಜನರು ಒಂದು ಕೈಯಿಂದ ಭಗವಂತನ ದಿವ್ಯಪಾದಪದ್ಮಗಳನ್ನು ಇನ್ನೊಂದು ಕೈಯಿಂದ ಸಂಸಾರಿಕ ಕಾರ್ಯಗಳನ್ನು ಮಾಡುತ್ತಾ ಬಂದರೆ ಖಂಡಿತವಾಗಿಯೂ ದೇವರ ದರುಶನ ಭಾಗ್ಯವನ್ನು ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.       

                          ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.     

              ಕಾರ್ಯಕ್ರಮದಲ್ಲಿ ನಂಜಮ್ಮ ಕೆಂಚಪ್ಪ, ಭಾಗ್ಯಲಕ್ಷ್ಮೀ, ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ,ದ್ರಾಕ್ಷಾಯಣಿ, ಸುವರ್ಣ ನಾಗರಾಜ್, ಗೀತಾ ಸುಂದರೇಶ್, ಯಶೋಧಾ ದೇವರಾಜ್,ಎಂ ಗೀತಾ ನಾಗರಾಜ್, ಸರಸ್ವತಿ ರಾಜು, ನೇತ್ರಾ ಮಂಜುನಾಥ, ಪ್ರಮೀಳಾ ಜಗದೀಶ್, ಪ್ರೇಮಾ, ಅನುಸೂಯ ರಾಘವೇಂದ್ರ, ಸಹನಾ, ಗೀತಾ ವೆಂಕಟೇಶ್, ಹನ್ವಿಕಾ, ತಿಪ್ಪಮ್ಮ ಉಮಾಶಂಕರ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST