Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬ್ರಹ್ಮಚರ್ಯ- ವಾನಪ್ರಸ್ಥಾ- ಸನ್ಯಾಸಾಶ್ರಮಗಳಿಗೆ ಗೃಹಸ್ಥಾಶ್ರಮವೇ ಆಧಾರ: ವೈ ರಾಜಾರಾಮ್ 

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗೃಹಸ್ಥ ಆದರ್ಶ ಜೀವನ ನಡೆಸಲು ಆಧ್ಯಾತ್ಮ ವಿದ್ಯೆ ಅತ್ಯಂತ ಅವಶ್ಯಕ ಎಂದು ಚಳ್ಳಕೆರೆಯ ನರಹರಿ ನಗರದ  ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ.ವೈ ರಾಜಾರಾಮ್ ಹೇಳಿದರು.

 

ನಗರದ ಶಾಂತಿನಗರದ ಶ್ರೀಗಣಪತಿ ದೇವಸ್ಥಾನದಲ್ಲಿ ಶ್ರೀಗಣೇಶ ಮಹಿಳಾ ಭಜನಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು "ಗೃಹಸ್ಥ ಜೀವನದಲ್ಲಿ ಆಧ್ಯಾತ್ಮ" ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು. 

 

ಗೃಹಸ್ಥರಾದವರು ದಿನನಿತ್ಯದ ಕರ್ಮಗಳನ್ನು ನಿಷ್ಕಾಮ ಭಾವದಿಂದ-ಭಗವದ್ ಸಮರ್ಪಿತವಾಗಿ  ಮಾಡಬೇಕು, ಮನೆಗೆ ಬಂದ ಅತಿಥಿಗಳನ್ನು ದೇವರರಂತೆ ಕಂಡು ಅವರನ್ನು ಯೋಗ್ಯ ರೀತಿಯಲ್ಲಿ ಉಪಚರಿಸಿ ಆದರಿಸಬೇಕು. ಪ್ರತಿನಿತ್ಯ ಮನೆಯಲ್ಲಿ ಭಜನೆ ಮಾಡಬೇಕು‌. ದಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.ಇವೆಲ್ಲವುಗಳ ಸರಿಯಾದ  ಅನುಷ್ಠಾನದಿಂದ ಗೃಹಸ್ಥ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದ ಅವರು ಕೌಂಡಿನ್ಯ ಮತ್ತು ಭಕ್ತ ಸುಧಾಮನ ಕಥೆಯ ಮೂಲಕ ವಿವರಿಸಿದರು.

 

ಕಾರ್ಯಕ್ರಮದ ಪ್ರಯುಕ್ತ ಸುನೀತಾ ಗೋಪಾಲಕೃಷ್ಣ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಗೀತಾ  ಪ್ರಕಾಶ್, ಪ್ರಮೀಳಾ ಜಗದೀಶ್ ಅವರಿಂದ ವಿಶೇಷ ಭಜನೆ ನಡೆದರೆ ಸತ್ಸಂಗವನ್ನು ಯತೀಶ್ ಎಂ ಸಿದ್ದಾಪುರ ಸುಂದರವಾಗಿ ನಿರೂಪಿಸಿದರು.

ಕೊನೆಯಲ್ಲಿ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು‌.  

 

ವಿಶೇಷ ಸತ್ಸಂಗದಲ್ಲಿ ರಾಜೇಶ್ವರಿ ರಾಜಾರಾಮ್, ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಲತಾ, ಈಶ್ವರಮ್ಮ, ಪದ್ಮ,ಗಜಮ್ಮ, ವಿಸ್ಮಿತ, ಜ್ಯೋತಿ, ಮೋಹಿನಿ, ಭಾವನಾ, ಸುಮಾ, ಮೀನಾಕ್ಷಿ, ರಾಜೇಶ್ವರಿ, ಭಾರತಿ, ಸರಸ್ವತಿ ಗೋವಿಂದರಾಜು, ಕವಿತಾ, ಅಂಬುಜಾ, ಗೀತಾ ಭಕ್ತವತ್ಸಲ, ಪ್ರೇಮಲೀಲಾ, ಪದ್ಮ,  ಜಿ.ಯಶೋಧಾ ಪ್ರಕಾಶ್, ಶಾಂತಮ್ಮ, ಗೀತಾ ವೆಂಕಟೇಶ್, ರಾಘವೇಂದ್ರ, ಪ್ರಹ್ಲಾದ್, ಶೋಭಾ, ಗೀತಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಬಿಳಿ ವಸ್ತ್ರಗಳೊಂದಿಗೆ ಕಂಗೊಳಿಸಿದ ಶಾಲಾ ಮಕ್ಕಳು  ಅಖಿಲೇಶ್ ಯಾದವ್‌ರವರ ಹುಟ್ಟುಹಬ್ಬ ಆಚರಿಸಿದ ಸಮಾಜವಾದಿ ಪಾರ್ಟಿಎಸ್‌ಐಆರ್ ಮತದಾರರ ಪಟ್ಟಿಯ ಶುದ್ಧೀಕರಣವೋ ಅಥವಾ ಪ್ರಜಾಪ್ರಭುತ್ವದ ವಿಶ್ವಾಸ ಪರೀಕ್ಷೆಯೋ:ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟ ರಾಜ್ಯಪಾಲ ಗೆಹ್ಲೋಟ್ ಹಾಗೂ ಡಿ.ಕೆ. ಶಿವಕುಮಾರ್"ಅವರಿಗೆ ದೇಶ ಮೊದಲಲ್ಲ, ದೇಣಿಗೆ ಮೊದಲು": ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಗುಡುಗು!ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಜುಲೈ-1 ರಿಂದಲೇ ಮನೆ-ಮನೆಗೆ ಬರಲಿದ್ದಾರೆ ಎಸ್ಕಾಂ ಸಿಬ್ಬಂದಿ!ಬೆಂಗಳೂರಿನಲ್ಲಿ 'ಸುರಕ್ಷಿತ ಪಾದಚಾರಿ ಮಾರ್ಗ' ಬೃಹತ್ ಕಾರ್ಯಾಚರಣೆ ಆರಂಭ!ನಾನು ಮಾಜಿ ಸಿಎಂ; ಸಿದ್ದರಾಮಯ್ಯ ಮಾರ್ಮಿಕ ನುಡಿ!ಬಿಜೆಪಿ ಅಧಿಕಾರಕ್ಕೆ ಬಂದರೆ ಹುಂಡಿ ಹಣ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಬೇಕಾಗುತ್ತದೆ: ಹರಿಪ್ರಸಾದ್ ತೀಕ್ಷ್ಣ ವ್ಯಂಗ್ಯ!