Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜುಲೈ 29 ರಂದು ಚಿತ್ರದುರ್ಗದ ಸಾಯಿ ಬಾಬಾ ಮಂದಿರದಲ್ಲಿ ‘ಗುರು ಪೌರ್ಣಮಿ’ ಸಡಗರ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಚಳ್ಳಕೆರೆ ರಸ್ತೆಯ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದ ಹತ್ತಿರವಿರುವ ಶ್ರೀ ಸಾಯಿ ಸಂಕಲ್ಪ ಸೇವಾ ಸಮಿತಿವತಿಯಿಂದ, ಸಾಯಿ ಬಾಬಾ ಮಂದಿರದಲ್ಲಿ ಇದೇ ಜುಲೈ 29 ರಂದು ಗುರು ಪೌರ್ಣಮಿಯ ಅಂಗವಾಗಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಶೇಷ ಕಾರ್ಯಕ್ರಮಗಳ ವಿವರ:
ಸ್ವಹಸ್ತ ಕ್ಷೀರಾಭಿಷೇಕ: ಅಂದು ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಭಕ್ತರು ತಮ್ಮ ಸ್ವಹಸ್ತದಿಂದಲೇ ಸಾಯಿ ಬಾಬಾರವರಿಗೆ ಕ್ಷೀರಾಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ವಿಶೇಷ ಸಂಕಲ್ಪ ಪೂಜೆ: ಬೆಳಗ್ಗೆ 9 ಗಂಟೆಯಿಂದ ದಂಪತಿಗಳಿಗಾಗಿ ವಿಶೇಷ ಸಂಕಲ್ಪ ಕಾರ್ಯಕ್ರಮ ಜರುಗಲಿದೆ.

ಮಹಾಮಂಗಳಾರತಿ ಮತ್ತು ಪ್ರಸಾದ: ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಇರಲಿದ್ದು, ಇಡೀ ದಿನ ಭಕ್ತರಿಗಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 5.30 ರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಮುಕ್ತಾಯದ ವೇಳೆ ಮತ್ತೊಮ್ಮೆ ಮಹಾಮಂಗಳಾರತಿ ನೆರವೇರಲಿದೆ.

ಅಪರೂಪದ ಲೋಹ (ನಾಣ್ಯ) ಸಮರ್ಪಣಾ ಸೇವೆ:
ಮಂದಿರಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಸಿಂಹಾಸನ, ಪ್ರಭಾವಳಿ, ಕಿರೀಟ, ಪಾದುಕೆ ಹಾಗೂ ಗೋಪುರದ ಕಳಸವನ್ನು ಸಿದ್ಧಪಡಿಸಲು ಭಕ್ತರಿಂದ ಲೋಹ (ನಾಣ್ಯ) ಸಮರ್ಪಣಾ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸೇವಾ ಶುಲ್ಕ: ಈ ವಿಶೇಷ ಸೇವೆಗೆ ರೂ. 1,503 ನಿಗದಿಪಡಿಸಲಾಗಿದೆ.
ಪೂಜಾ ಸಾಮಗ್ರಿ: ಲೋಹ ಸೇವೆ ಮಾಡುವ ಭಕ್ತರಿಗೆ ಸಂಕಲ್ಪ ಪೂಜೆಗೆ ಅಗತ್ಯವಿರುವ ಎಲ್ಲಾ ಪೂಜಾ ಸಾಮಗ್ರಿಗಳನ್ನು ಸಮಿತಿಯ ವತಿಯಿಂದಲೇ ಉಚಿತವಾಗಿ ನೀಡಲಾಗುತ್ತದೆ.

ಗಮನಿಸಿ: ಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರು ತಪ್ಪದೇ ತಮ್ಮ ಸೇವಾ ರಸೀದಿಯನ್ನು ತರಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನೇಹಾ – 96862 43311, ಸೌಜನ್ಯ – 96635 19888, ನಯನ್ – 98861 70500.

ಗುರುಪೂರ್ಣಿಮೆಯ ಈ ಪಾವನ ದಿನದಂದು ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸಾಯಿ ಬಾಬಾರವರ ದರ್ಶನ ಹಾಗೂ ತೀರ್ಥಪ್ರಸಾದ ಪಡೆದು ಪುನೀತರಾಗಬೇಕಾಗಿ ಶ್ರೀ ಸಾಯಿ ಸಂಕಲ್ಪ ಸೇವಾ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು