ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ೨೦೨೨ ರಲ್ಲಿ ಶಾಲಾ-ಕಾಲೇಜುಗಳಿಗೆ ಮಕ್ಕಳು ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದನ್ನು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರದ್ದುಪಡಿಸಿ ೧ ರಿಂದ ೧೨ ನೇ ತರಗತಿ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬರಲು ಅವಕಾಶ ನೀಡಿರುವುದನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಾದಾಪೀರ್ ಕೆ.ಆರ್. ಸ್ವಾಗತಿಸಿದ್ದಾರೆ.
ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆ ಅವರವರ ವೈಯಕ್ತಿಕ ವಿಚಾರ. ಸಮಾನತೆ ಎಲ್ಲರೂ ಒಂದೆ ಎನ್ನುವ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಜಾಬ್, ತಲೆವಸ್ತ್ರ, ಪೇಟ, ಟರ್ಬನ್ ಧರಿಸಲು ಅವಕಾಶ ನೀಡಿ ಜಾತಿ ಧರ್ಮಗಳ ನಡುವೆ ಉಂಟಾಗಿದ್ದ ಗೊಂದಲಮಯ ವಾತಾವರಣವನ್ನು ತಿಳಿಸಿಗೊಳಿಸಿರುವುದಕ್ಕೆ ಡಾ.ದಾದಾಪೀರ್ ಕೆ.ಆರ್. ಸಂತಸ ವ್ಯಕ್ತಪಡಿಸಿದ್ದಾರೆ.


