Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ ಅಭಿಯಾನ- ಜಿಪಂ ಸಿಇಒ ಡಾ.ಎಸ್.ಆಕಾಶ್

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ತಿಳಿಸಿದ್ದಾರೆ.    

  79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಗ್ರಾಮೀಣ ಜನರಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶದೊಂದಿಗೆ ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ ಆಚರಣೆ ಎಂಬ ಘೋಷವಾಕ್ಯದಡಿ ಆಗಸ್ಟ್ 08ರಿಂದ ಅಭಿಯಾನ ಪ್ರಾರಂಭವಾಗಿದ್ದು, ಆಗಸ್ಟ್ 15 ರವರೆಗೆ ಅಭಿಯಾನ ನಡೆಯಲಿದೆ.    

  ಈ ಅಭಿಯಾನದ ಅಡಿಯಲ್ಲಿ ಗ್ರಾಮ ಮತ್ತು ಗ್ರಾಮ  ಪಂಚಾಯತಿಗಳಲ್ಲಿ ಸ್ವಚ್ಛ ಸುಜಲ್ ಗ್ರಾಮ ಪ್ರತಿಜ್ಞೆಗಳು, ಸಮುದಾಯ ಶುಚಿತ್ವ ಅಭಿಯಾನಗಳು, ವಾಶ್ ಆಸ್ತಿಗಳು ಶುಚಿಗೊಳಿಸುವಿಕೆ, ಅರಿವು ಮೂಡಿಸುವ ಚಟುವಟಿಕೆಗಳು, ಜಲ ಸಂರಕ್ಷಣೆ ಮತ್ತು 2025ರ ಆಗಸ್ಟ್ 15ರಂದು ಅಮೃತ್ ಸರೋವರಗಳು, ಸಾರ್ವಜನಿಕ ಸ್ಥಳಗಳು ಇತ್ಯಾದಿ ಪ್ರಮುಖ ವಾಶ್  ಮೂಲಸೌಕರ್ಯ ಸ್ಥಳಗಳಲ್ಲಿ ಧ್ವಜಾರೋಹಣ ಸಮಾರಂಭ ಆಯೋಜನೆ ಮಾಡುವುದು.     

ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ ಅಭಿಯಾನದಲ್ಲಿ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹಾಗೂ ಸ್ಥಳೀಯ ಸಂಸ್ಥೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು, ಸ್ವ-ಸಹಾಯ ಸಂಘದ ಗುಂಪುಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಶಾಲಾ ಮಕ್ಕಳು, ಸ್ವಯಂ ಸೇವಕರು ಮತ್ತು ಮುಂಚೂಣಿ ಕಾರ್ಯಕರ್ತರು ಈ ಅಭಿಯಾನದಲ್ಲಿ ಸಕ್ರಿಯಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು.      

ಅಭಿಯಾನದ ಅಂಗವಾಗಿ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಮುದಾಯದ ಸದಸ್ಯರು ಮತ್ತು ಶಾಲಾ ಮಕ್ಕಳು ಸೇರಿ ಸ್ವಚ್ಛ ಸುಜಲ್ ಗ್ರಾಮ ಪ್ರತಿಜ್ಞೆ ವಿಧಿ ಸ್ವೀಕಾರ ಮಾಡುವುದು. ಸಮುದಾಯದ ಶುಚಿತ್ವ ಅಭಿಯಾನ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಅರಿವು ಮೂಡಿಸುವ ಚಟುವಟಿಕೆಗಳು, ಚರಂಡಿಗಳ ಸ್ವಚ್ಛತೆ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಯ ಅಭಿಯಾನ ಹಮ್ಮಿಕೊಳ್ಳವುದು. ವಾಶ್ ಮೂಲ ಸೌಕರ್ಯ ಶುಚಿತ್ವ ದಿನ, ಜೆಜೆಎಂ ಮೂಲ ಸೌಕರ್ಯದ ಮೇಲೆ ವಿಶೇಷ ಗಮನಹರಿಸುವುದು.

ಸ್ವಚ್ಛತಾ ಸಂವಾದ ಮತ್ತು ಅರಿವು ದಿನ ಆಯೋಜಿಸುವುದು ಹಾಗೂ ಆಗಸ್ಟ್ 15ರಂದು ವಾಶ್ ಮೂಲ ಸೌಕರ್ಯ ಸಾರ್ವಜನಿಕ ಸ್ಥಳಗಳಾದ ಗ್ರಾಮ ಪಂಚಾಯತ್ ಕಟ್ಟಡ ಮತ್ತು ಇತರೆ ಸರ್ಕಾರಿ ಕಟ್ಟಡಗಳು, ಅಮೃತ್ ಸರೋವರಗಳು ಇತ್ಯಾದಿಗಳಲ್ಲಿ  ಧ್ವಜಾರೋಹಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ಗುರುತಿಸಲಾದ ಸ್ಥಳಗಳಲ್ಲಿ (ವೈಯಕ್ತಿಕ ಮನೆಗಳು) ಧ್ವಜಾರೋಹಣ ನೆರವೇರಿಸುವುದು. ಸ್ವಚ್ಛತಾ ಚಾಂಪಿಯನ್ ಮತ್ತು ಸ್ವಯಂ ಸೇವಕರ ಕೊಡುಗೆಗಳನ್ನು ಗುರುತಿಸಿ ಸನ್ಮಾನಿಸುವುದು.

ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಂಜೀವಿನಿ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯರು, ಯುವಕರು, ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ