Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Politics News

2028ಕ್ಕೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ? ರಾಜಕೀಯ ಲೆಕ್ಕಾಚಾರ!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಕಮಲ ಪಡೆಗಳ ನಾಯಕರಿಗಿಂತೆ ಹೆಚ್ಚು ಆಕ್ಟಿವ್ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ರಾಜ್ಯ ರಾಜಕಾರಣದ ಪ್ರವೇಶ ಸನ್ನಿಹಿತವಾಗುತ್ತಿದೆಯಾ ಎನ್ನುವ ಪ್ರಶ್ನೆ ಬಲವಾಗಿ ಕಾಡುತ್ತಿದೆ. ಕೆಪಿಎಸ್ ಸಿ ನೇಮಕಾತಿ ಅಕ್ರಮ, ಸ್ಟಿಂಗ್ ಆಪರೇಷನ್, ಬಿಡದಿ ಟೌನ್‌ಶಿಪ್ ಮತ್ತು ನೈಸ್ ವಿರುದ್ಧದ ಹೋರಾಟದಲ್ಲಿ ಅವರು ತೊಡಗಿಸಿಕೊಳ್ಳುತ್ತಿರುವ ರೀತಿಯೇ ಇದಕ್ಕೆ ಕಾರಣವಾಗಿದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದು ಬಹುತೇಕ ನಿಚ್ಚಳವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ಜೆಡಿಎಸ್ ಸಖ್ಯ ಅಷ್ಟಾಗಿ ಇಷ್ಟವಿಲ್ಲದಿದ್ದರೂ, ಕೇಂದ್ರದ ನಾಯಕರಿಗೆ ದೇವೇಗೌಡರ ಕುಟುಂಬದ ಮೇಲೆ ವಿಶೇಷ ಒಲವಿದೆ. ಇದರ ಜೊತೆಗೆ, ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಸುದ್ದಿಯ ನಡುವೆ, ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯನವರು ಕೂಡ ಇದೇ ರೀತಿಯ ಭವಿಷ್ಯ ನುಡಿದಿದ್ದಾರೆ.

ಜೆಡಿಎಸ್ ನಲವತ್ತು ಸ್ಥಾನ ಗೆಲ್ಲಲಿದೆ ಎಂದ ಪ್ರಕಾಶ್ ಅಮ್ಮಣ್ಣಾಯ:
ಜಾತಕ ಆಧಾರಿತವಾಗಿ ಭವಿಷ್ಯ ನುಡಿಯುವ ಅಮ್ಮಣ್ಣಾಯ ಅವರ ಪ್ರಕಾರ, ಕುಮಾರಸ್ವಾಮಿಯವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಎಲ್ಲಾ ಯೋಗವಿದೆ. ಆದರೆ, ಈ ಯೋಗದ ಮೂಲಕ ಅಧಿಕಾರವನ್ನು ಪಡೆದುಕೊಳ್ಳುವುದು ಅವರು ಮುಂದಿಡುವ ರಾಜಕೀಯ ಹೆಜ್ಜೆಗಳ ಮೇಲೆ ಸಂಪೂರ್ಣವಾಗಿ ನಿರ್ಧಾರವಾಗಲಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಾರ್ಟಿಯು ಕನಿಷ್ಠ ನಲವತ್ತು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ:
ಜ್ಯೋತಿಷ್ಯದ ಲೆಕ್ಕಾಚಾರಗಳನ್ನು ಬಿಚ್ಚಿಟ್ಟಿರುವ ಪ್ರಕಾಶ್ ಅಮ್ಮಣ್ಣಾಯ
, "2028 ರಲ್ಲಿ ಕನಿಷ್ಠ 40 ಸೀಟು ಜೆಡಿಎಸ್ ಪಡೆಯುವುದು ನಿಶ್ಚಿತ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ. 2027ರ ನವೆಂಬರ್ ಮಾಸಕ್ಕೆ ಗುರುವು ಕನ್ಯಾರಾಶಿಯನ್ನು ಪ್ರವೇಶಿಸಲಿದ್ದಾನೆ. ಲಗ್ನಾಧಿಪತಿ ಮತ್ತು ರಾಶಿಪತಿ ಬುಧನಿರುವ ಕ್ಷೇತ್ರಕ್ಕೆ ಲಾಭ ಸ್ಥಾನದಲ್ಲಿ ಗುರು ಇರುವುದು ಅತ್ಯಂತ ಬಲಿಷ್ಟ ಯೋಗ. ಒಂದು ವೇಳೆ ಲಗ್ನ ಹಾಗೂ ಚಂದ್ರರಿಗೆ ಅನಿಷ್ಟದಲ್ಲಿ ಗುರು ಇದ್ದು, ಕೇವಲ ಲಗ್ನ ರಾಶಿ ಅಧಿಪತಿಗೆ ಏಕಾದಶದಲ್ಲಿ ಗುರು ಬಂದರೂ ಸಾಲದು. ಆದರೆ ಇಲ್ಲಿ ಎರಡೂ ರಾಶಿಗೂ ಇಷ್ಟ ಸ್ಥಿತಿಯಿದೆ. ಸಾಲದ್ದಕ್ಕೆ ಪಂಚಮಾಧಿಪತಿ ಶುಕ್ರನ ದಶೆಯೂ ಇದೆ" ಎಂದು ವಿವರಿಸಿದ್ದಾರೆ.

ಅದೇ ಸಮಯದಲ್ಲಿ ಎಚ್ಚರಿಕೆಯ ಮಾತುಗಳನ್ನೂ ಆಡಿರುವ ಅವರು, "2027ರ ಜೂನ್ ವರೆಗೆ ಕುಮಾರಸ್ವಾಮಿಯವರಿಗೆ ಆರೋಗ್ಯ ಹಾಗೂ ರಾಜಕೀಯವಾಗಿ ಸಾಕಷ್ಟು ತೊಂದರೆಗಳೂ ಇವೆ. ಸೂಕ್ತ ಪರಿಹಾರ ಮಾಡಿಕೊಳ್ಳದೇ ಹೋದರೆ ಆರೋಗ್ಯಕ್ಕೂ ಬಾಧೆಯಾಗಬಹುದು. ಮೊದಲಾಗಿ ಅವರು ಎಲ್ಲಾ ವಿಚಾರದಲ್ಲೂ ಅತ್ಯಂತ ತಾಳ್ಮೆಯಿಂದ ಇರಬೇಕು. ವಿಪರೀತ ಸೆಂಟಿಮೆಂಟ್ ಆಗದೆ ಇರುವುದು ಉತ್ತಮ. ಯಾರಾದರೂ ಅವರ ಆಪ್ತರಿದ್ದರೆ ಈ ಎಚ್ಚರಿಕೆಯನ್ನು ಅವರಿಗೆ ಮುಟ್ಟಿಸಲಿ" ಎಂದು ಜ್ಯೋತಿಷ್ಯದ ಮೂಲಕ ಸಲಹೆ ನೀಡಿದ್ದಾರೆ.

ಮೈತ್ರಿ ರಾಜಕಾರಣ ಮತ್ತು ಡಿಕೆ ಶಿವಕುಮಾರ್ ವ್ಯಂಗ್ಯ:
ಕುಮಾರಸ್ವಾಮಿಯವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ನೀಡಿರುವ ಹೇಳಿಕೆ ಇಲ್ಲಿ ಉಲ್ಲೇಖಾರ್ಹ. "ನೀವಿಬ್ಬರು (ಬಿ.ವೈ. ವಿಜಯೇಂದ್ರ, ಆರ್. ಅಶೋಕ್) ಮುಖ್ಯಮಂತ್ರಿ ಹುದ್ದೆಗಾಗಿ ಕಾಯುತ್ತಿರಿ; ಆದರೆ ಒಂದು ವೇಳೆ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂದರೆ, ಹೆಲಿಕಾಪ್ಟರ್‌ನಲ್ಲಿ ಬಂದು ಕೇಂದ್ರದಲ್ಲಿರುವ ಇನ್ನೋರ್ವ ಸಚಿವರು ಆ ಹುದ್ದೆಯಲ್ಲಿ ಕುಳಿತುಕೊಳ್ಳುತ್ತಾರೆ, ನಿಮಗೆ ಚೊಂಬೇ ಗತಿ" ಎಂದು ಡಿ.ಕೆ. ಶಿವಕುಮಾರ್ ರಾಜ್ಯ ಬಿಜೆಪಿ ನಾಯಕರನ್ನು ವ್ಯಂಗ್ಯವಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಒಳಾರ್ಥಗಳು ಮತ್ತು ಕುಮಾರಸ್ವಾಮಿಯವರ ಮುಂದಿನ ನಡೆಗಳು ರಾಜ್ಯದ ಅಧಿಕಾರ ರಾಜಕಾರಣದ ದಿಕ್ಕನ್ನೇ ಬದಲಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಯುಧ ಪೂಜೆ ಶುಭಾಶಯ ತಿಳಿಸಿದ ಡಿ.ಕೆ.ಶಿವಕುಮಾರ್ತೋಟದ ಮನೆಯಲ್ಲಿ ಕುಟುಂಬ ಸಮೇತ ವಾಹನ ಪೂಜೆ ನೆರವೇರಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಪ್ರಧಾನಿ ಭೇಟಿಗೆ ಸಮಯ ಕೋರಿದ ಡಿ.ಕೆ.ಶಿವಕುಮಾರ್ಕಾಂಗ್ರೆಸ್ ಸರ್ಕಾರ ಬೀಳಿಸಲು ನಾವೇನು ಕಾಯುತ್ತಿಲ್ಲ, ಅವರ ಶಾಸಕರೇ ದಂಗೆ ಏಳಲಿದ್ದಾರೆ!: ಬಿ.ವೈ. ವಿಜಯೇಂದ್ರಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ; ಪ್ರಯಾಣಿಕರು ಸೇಫ್!ಕಬ್ಬು ಬೆಳೆಗಾರರ ಸಮಸ್ಯೆ ಜಂಟಿ ಜವಾಬ್ದಾರಿ, ಒಟ್ಟಾಗಿ ಬಗೆಹರಿಸೋಣ: ಸಿಎಂ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್ ನಲ್ಲಿ ಅಶಾಂತಿ: ಮೂರನೇ, ನಾಲ್ಕನೇ ಸಿಎಂ ಕೂಡ ಬರಬಹುದು: ಛಲವಾದಿ ನಾರಾಯಣಸ್ವಾಮಿಸುಪ್ರೀಂ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ದ್ವೇಷ ಪ್ರಚೋದನೆಯಾಗುವುದಿಲ್ಲ: ಹೈಕೋರ್ಟ್2028ಕ್ಕೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ? ರಾಜಕೀಯ ಲೆಕ್ಕಾಚಾರ!ಖಾಲಿಸ್ತಾನ್ ಉಗ್ರ ಪನ್ನುನ್ ಕುಕೃತ್ಯ: ಮೋದಿ ಸರ್ಕಾರ ಬೀಳಿಸಲು ವಿದೇಶದಿಂದ ಸಂಚು!