ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಖನಿಜ ಮತ್ತು ಉಕ್ಕು ವಲಯದ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲಾಗಿ ಬಸ್ತಾರ್‌ನಲ್ಲಿ ಯೋಜನೆ ಆರಂಭಿಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ತನ್ನ ದೇಶೀಯ ಖನಿಜ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದು, ಜಾಗತಿಕವಾಗಿ ಸ್ಪರ್ಧಾತ್ಮಕ ಹಾಗೂ ಸ್ವಾವಲಂಬಿ ಉಕ್ಕು ವಲಯವನ್ನು ನಿರ್ಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ₹5,427 ಕೋಟಿ ವೆಚ್ಚದ ಸಮಗ್ರ ಯೋಜನೆಯನ್ನು ಯಶಸ್ವಿಯಾಗಿ ಚಾಲನೆಗೊಳಿಸಿದ ಎನ್‌ಎಂಡಿಸಿ ತಂಡಕ್ಕೆ ಅವರು ಶುಭಾಶಯ ತಿಳಿಸಿದ್ದಾರೆ.
ಈ ಯೋಜನೆಯು 2 MTPA ಸಾಮರ್ಥ್ಯದ ಪೆಲೆಟ್ ಪ್ಲಾಂಟ್, 15 MTPA ಸಾಮರ್ಥ್ಯದ ಸ್ಲರಿ ಪೈಪ್‌ಲೈನ್ ಮತ್ತು ಕಬ್ಬಿನದ ಅದಿರು ಸಂಸ್ಕರಣಾ ಘಟಕವನ್ನು ಒಳಗೊಂಡಿದೆ.
ಯೋಜನೆಯ ಪ್ರಮುಖಾಂಶಗಳು: 135 ಕಿ.ಮೀ. ಸ್ಲರಿ ಪೈಪ್‌ಲೈನ್: ಸಂಸ್ಕರಿಸಿದ ಅದಿರನ್ನು ಸುಲಭವಾಗಿ ಮತ್ತು ವೇಗವಾಗಿ ಸಾಗಿಸಲು ಸಹಕಾರಿ.
ರಸ್ತೆ ಸಾರಿಗೆ ಮೇಲಿನ ಅವಲಂಬನೆ ಕಡಿಮೆ: ಲಾರಿ ಮತ್ತು ರಸ್ತೆ ಸಾರಿಗೆಗೆ ಪರ್ಯಾಯವಾಗಿ ಪೈಪ್‌ಲೈನ್ ಬಳಕೆಯಾಗುವುದರಿಂದ ವೆಚ್ಚ ಮತ್ತು ಮಾಲಿನ್ಯ ತಗ್ಗಲಿದೆ.
ಉಕ್ಕು ವಲಯಕ್ಕೆ ಬಲ: ಕಬ್ಬಿನದ ಅದಿರಿನಿಂದ ಉಕ್ಕು ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಗೆ ಇದು ಹೊಸ ವೇಗ ಸಿಗಲಿದೆ.
ಈ ಯೋಜನೆಯು 'ಆತ್ಮನಿರ್ಭರ ಭಾರತ' ಹಾಗೂ 'ವಿಕಸಿತ ಭಾರತ 2047' ಕಲ್ಪನೆಗೆ ಇಟ್ಟಿರುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.




