LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೆಚ್.ಡಿ.ಕುಮಾರಸ್ವಾಮಿ ಶಬರಿಮಲೆ ಭೇಟಿ: ಪವಿತ್ರ 'ಪಡಿಪೂಜೆ'ಯಲ್ಲಿ ಭಾಗಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ​​ಶಬರಿಮಲೆ:
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

​ಸ್ವಾಮಿಯ ದರ್ಶನ ಪಡೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಅವರು, "ಸ್ವಾಮಿಯೇ ಶರಣಂ ಅಯ್ಯಪ್ಪ" ಎಂದು ಭಕ್ತಿ ಭಾವ ಮೆರೆದಿದ್ದಾರೆ.

​ಪವಿತ್ರ ಪಡಿಪೂಜೆಯಲ್ಲಿ ಭಾಗಿ:
​ಅಯ್ಯಪ್ಪ ಸ್ವಾಮಿ ಸನ್ನಿಧಾನದ ಅತ್ಯಂತ ಪವಿತ್ರ ಹಾಗೂ ವಿಶೇಷ ಪೂಜೆಗಳಲ್ಲಿ ಒಂದಾದ 'ಹದಿನೆಂಟು ಮೆಟ್ಟಿಲುಗಳ ಪೂಜೆ' (ಪಡಿಪೂಜೆ) ಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು. 18 ಪವಿತ್ರ ಮೆಟ್ಟಿಲುಗಳಿಗೆ ನೆರವೇರಿಸಲಾಗುವ ಈ ಮಹಾ ಪೂಜೆಯನ್ನು ಕಣ್ಣಾರೆ ಕಣ್ತುಂಬಿಕೊಂಡ ಸಚಿವರು, ಆ ಭಗವಂತನ ಸನ್ನಿಧಿಗೆ ತೆರಳುವ ದೈವ ಮಾರ್ಗವನ್ನು ಕಂಡು ಧನ್ಯತಾ ಭಾವ ಅನುಭವಿಸಿದ್ದಾಗಿ ತಿಳಿಸಿದ್ದಾರೆ.

​"ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿರುವ ಪವಿತ್ರವಾದ 'ಹದಿನೆಂಟು ಮೆಟ್ಟಿಲುಗಳು' ಪೂಜೆಯಲ್ಲಿ (ಪಡಿಪೂಜೆ) ಪಾಲ್ಗೊಂಡು ಆ ಭಗವಂತನ ಸನ್ನಿಧಿಗೆ ತೆರಳುವ ದೈವ ಮಾರ್ಗವನ್ನು ಕಣ್ತುಂಬಿಕೊಂಡೆ" ಎಂದು ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.

​ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಡಳಿಯ ಪದಾಧಿಕಾರಿಗಳು ಹಾಗೂ ಅರ್ಚಕರು ಕೇಂದ್ರ ಸಚಿವರಿಗೆ ಶಬರಿಮಲೆಯ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಗೂ ಆಪ್ತರು ಉಪಸ್ಥಿತರಿದ್ದರು.

 

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನದಲ್ಲಿ ಜಾತಿ ಉಳಿದಿರುವವರೆಗೂ, ಜಾತ್ಯತೀತತೆ ಕೇವಲ ಮುಖವಾಡ ​ ಅಂತರಂಗದ ಬೇಸಾಯವೇ ಬದುಕಿನ ಸಾರ್ಥಕ ಬೆಳೆ*ಶಿಕ್ಷಕ-ರಕ್ಷಕ*ಆತ್ಮಹತ್ಯೆಗೆ ಶರಣಾದ ರೈತ ದಂಪತಿ ಮನೆಗೆ ಕುಮಾರಸ್ವಾಮಿ ಭೇಟಿ- ಸಾಂತ್ವನ, ಧೈರ್ಯ ತುಂಬಿದ ನಾಯಕಗೋಪೂಜೆ ಮತ್ತು ರಾಗಿಹುಲ್ಲು ವಿತರಣೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ದಿಗ್ವಿಜಯ್ ಸಿಂಗ್ ಭೇಟಿ:ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ ಅಧಿಕೃತವಾಗಿ ಉದ್ಘಾಟನೆ: ಎಂ.ಬಿ. ಪಾಟೀಲ್ ಹರ್ಷ​‘ಕಾಂಗ್ರೆಸ್‌ನ 6ನೇ ಗ್ಯಾರೆಂಟಿ ಅಂದರೆ ಕೃಷಿ ಕಾರ್ಮಿಕರಿಗೆ ಗುಳೆ ಗ್ಯಾರೆಂಟಿ’: ಆರ್‌. ಅಶೋಕ್ ತೀವ್ರ ವಾಗ್ದಾಳಿ!ಕಾಂಗ್ರೆಸ್ ಸರ್ಕಾರ ‘ಮನೆಗೆ ಮಾರಿ, ಪರರಿಗೆ ಉಪಕಾರಿ’: ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆತಮಿಳುನಾಡಿಗೆ ಕಾವೇರಿ ನೀರು ಹರಿಸಲು ಪ್ರಾಧಿಕಾರದ ಆದೇಶ: ರಾಜ್ಯದ ಹಿತ ಕಾಯುವಲ್ಲಿ ಕಾಂಗ್ರೆಸ್‌ಸರ್ಕಾರ ವಿಫಲ - ಸಿ.ಟಿ. ರವಿ ಆಕ್ರೋಶ