Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚರಿತ್ರೆ ಮತ್ತು ಪುರಾಣಗಳು ಹುಸಿ ಸಂಕಥನಗಳಾಗಬಾರದು: ಪ್ರೊ. ಬರಗೂರು ರಾಮಚಂದ್ರಪ್ಪ

Advertisement

ಚಂದ್ರವಳ್ಳಿ ನ್ಯೂಸ್, ತುಮಕೂರು: 
ಚರಿತ್ರೆ ಮತ್ತು ಪುರಾಣಗಳು ಸ್ಥಗಿತಗೊಂಡರೆ ಅವುಗಳ ಸಾವು ಸಮೀಪಿಸಿದೆ ಎಂದರ್ಥ. ಇವು ಯಾವತ್ತೂ ಚಲನಶೀಲವಾಗಿರಬೇಕು ಹಾಗೂ ವರ್ತಮಾನದ ವಿವೇಕದೊಂದಿಗೆ ಇವುಗಳನ್ನು ಮರುಶೋಧಿಸಬೇಕಾದ ಜವಾಬ್ದಾರಿ ಇಂದಿನ ತಲೆಮಾರಿನ ಮೇಲಿದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕವು ಬಂಡಾಯ ಸಾಹಿತ್ಯ: ಹೊಸ ತಲೆಮಾರುಅಭಿಯಾನದ ಅಂಗವಾಗಿ ಶನಿವಾರದಂದು (ದಿನಾಂಕ: ೨೫-೦೪-೨೦೨೬) ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ "ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ ಪಯಣ: ಸಾಮಾಜಿಕ ನೆಲೆಗಳು" ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾ?ಣ ಮಾಡಿದರು.

ಇಂದಿನ ಕಾಲಘಟ್ಟದಲ್ಲಿ ನೈಜ ಇತಿಹಾಸಕಾರರಿಗಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳ ವಕ್ತಾರರು ಚರಿತ್ರೆಯ ಬಗ್ಗೆ ಮಾತನಾಡುತ್ತಿರುವುದು ಆತಂಕಕಾರಿ ಎಂದು ವಿ?ದ ವ್ಯಕ್ತಪಡಿಸಿದ ಅವರು, ಚರಿತ್ರೆಯ ಬಗ್ಗೆ ಸಾಕ? ಅಧ್ಯಯನವಿಲ್ಲದ ಇಂತಹ ರಾಜಕೀಯ ಮಾತುಗಳು ನೈಜ ಶೋಧಕ್ಕೆ ಧಕ್ಕೆ ತರುತ್ತವೆ. ಯಾವುದೇ ಚರಿತ್ರೆಯನ್ನು ಜಾತಿವಾದ, ಧಾರ್ಮಿಕ ಮೂಲಭೂತವಾದ ಅಥವಾ ಕೇವಲ ರಾಜಕೀಯ ಪಕ್ಷಗಳ ಹಿತಾಸಕ್ತಿಗನುಗುಣವಾಗಿ ಕಟ್ಟಬಾರದು; ಹಾಗೆ ಮಾಡಿದಲ್ಲಿ ಅದು ನೈಜ ಇತಿಹಾಸವಾಗದೆ ಹುಸಿ ಕಟ್ಟುವಿಕೆಅಥವಾ ಹುಸಿ ಸಂಕಥನವಾಗಿ ಉಳಿಯುತ್ತದೆ ಎಂದು ಅವರು ಎಚ್ಚರಿಸಿದರು.

ಇತಿಹಾಸಕಾರರು ದಾಖಲೆಗಳ ಮೂಲಕ ಚರಿತ್ರೆಯನ್ನು ಯಥಾವತ್ತಾಗಿ ನಿರೂಪಿಸಿದರೆ, ಸಾಹಿತ್ಯದಲ್ಲಿ ಚರಿತ್ರೆಯು ಸೃಜನಶೀಲ ರೂಪಕಗಳ ಮೂಲಕ ಪ್ರವೇಶಿಸುತ್ತದೆ. ಸಾಹಿತಿಗಳು ಚಾರಿತ್ರಿಕ ಸತ್ಯಗಳನ್ನು ಸಾಂಕೇತಿಕವಾಗಿ ಮತ್ತು ರೂಪಕಾತ್ಮಕವಾಗಿ ಚಿತ್ರಿಸುವ ಸವಾಲನ್ನು ಎದುರಿಸಬೇಕಾಗುತ್ತದೆ. ಚರಿತ್ರೆ ಎನ್ನುವುದು ಭೂತಕಾಲಕ್ಕೆ ಮಾತ್ರ ಸೀಮಿತವಲ್ಲ, ಅದು ವರ್ತಮಾನದೊಂದಿಗೆ ನಿರಂತರ ಸಂವಾದ ನಡೆಸುವ ಚಲನಶೀಲ ಪ್ರಕ್ರಿಯೆಯಾಗಿದೆ. ಕೇವಲ ರಾಜರ ದಾಖಲೆಗಳ ಸಂಗ್ರಹವೇ ಇತಿಹಾಸವಲ್ಲ, ವರ್ತಮಾನದ ವಿವೇಕದೊಂದಿಗೆ ಜನಚರಿತ್ರೆಯನ್ನು ವಿಶ್ಲೇಷಿಸಿದಾಗ ಮಾತ್ರ ನೈಜ ಚರಿತ್ರೆ ಮೂಡಲು ಸಾಧ್ಯ ಎಂದರು.

ಪುರಾಣ ಶಾಸ್ತ್ರ ಮತ್ತು ಪುರಾಣ ಕಾವ್ಯಗಳ ನಡುವಿನ ವ್ಯತ್ಯಾಸವನ್ನು ನಾವು ಮೊದಲು ಗುರುತಿಸಬೇಕು ಎಂದು ಅವರು ಪ್ರತಿಪಾದಿಸಿದರು. ಶಾಸ್ತ್ರಗಳಲ್ಲಿರುವ ಅಮಾನವೀಯ ಅಂಶಗಳನ್ನು ಕಟುವಾಗಿ ವಿರೋಧಿಸಬೇಕಾದರೂ, ಪುರಾಣ ಕಾವ್ಯಗಳು ನೀಡುವ ಸಾಂಕೇತಿಕ ಅರ್ಥಗಳು ಮತ್ತು ಆಶಯಗಳು ಮುಖ್ಯವಾದವು. ನಮ್ಮ ದೇಶದ ಮಹಾಕಾವ್ಯಗಳಿಗೆ ತಳ ಸಮುದಾಯಗಳು ಕಟ್ಟಿಕೊಟ್ಟ ಸಂಸ್ಕೃತಿಯೇ ಮೂಲಾಧಾರವಾಗಿದೆ. ಜನಸಾಮಾನ್ಯರು ತಮ್ಮ ಬದುಕಿನ ವಾಸ್ತವಗಳಿಗೆ ಹತ್ತಿರವಾಗುವಂತೆ ಸೃಷ್ಟಿಸಿಕೊಂಡ ಇಂತಹ ಜನಪುರಾಣಗಳನ್ನು ನಿರಾಕರಿಸುವ ಬದಲು, ಅವುಗಳಲ್ಲಿನ ಪ್ರಗತಿಪರ ನೆಲೆಗಳನ್ನು ಗುರುತಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಇಂದಿನ ಹೊಸ ತಲೆಮಾರು ಪೂರ್ವಾಗ್ರಹಗಳಿಲ್ಲದ ಮತ್ತು ಪಕ್ಷಪಾತವಿಲ್ಲದ ತಾತ್ವಿಕ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕು. ಚರಿತ್ರೆ ಮತ್ತು ಪುರಾಣಗಳನ್ನು ಅಧ್ಯಯನ ಮಾಡುವಾಗ ಮೌಢ್ಯಗಳನ್ನು ತಳ್ಳಿಹಾಕಿ, ಪರಂಪರೆಯ ಪ್ರಜ್ಞೆಯೊಂದಿಗೆ ಸಮಕಾಲೀನ ಪ್ರಜ್ಞೆಯನ್ನು ಬೆಸೆಯುವ ಸವಾಲನ್ನು ಸ್ವೀಕರಿಸಬೇಕು. ವಿಮರ್ಶಾತ್ಮಕ ನೋಟದೊಂದಿಗೆ ಸಂಸ್ಕೃತಿಯನ್ನು ಮರುವ್ಯಾಖ್ಯಾನ ಮಾಡುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಒತ್ತಿ ಹೇಳಿದರು.

ವಿಚಾರ ಗೋಷ್ಠಿಗಳ ವಿವರ:

ಗೋಷ್ಠಿ-೧: ಸಾಹಿತ್ಯದಲ್ಲಿ ಚರಿತ್ರೆ ಮತ್ತು ಸಾಮಾಜಿಕ ಪಯಣ: ಈ ಗೋಷ್ಠಿಯ ಅಧ್ಯಕ್ಷತೆಯನ್ನು ಬಾ.ಹ. ರಮಾಕುಮಾರಿ ಅವರು ವಹಿಸಿದ್ದರು. ಸಚಿನ್ ಕುಂದಾಪುರ ಅವರು ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ ವಸ್ತುಗಳ ಸೃಜನಶೀಲ ನಿರ್ವಹಣೆಕುರಿತು ವಿ?ಯ ಮಂಡಿಸಿದರು. ದಸ್ತಗೀರ್ ಸಾಬ್ ದಿನ್ನಿ ಅವರು ಕನ್ನಡ ಸಾಹಿತ್ಯ: ಸಾಮಾಜಿಕ ಚರಿತ್ರೆಯ ಪಯಣ ಪ್ರಜ್ಞೆವಿ?ಯದ ಕುರಿತು ಮಾತನಾಡಿದರು.

ಗೋಷ್ಠಿ-೨: ಪುರಾಣ ಮತ್ತು ಜನಪದ ನೆಲೆಗಳು: ಈ ಗೋಷ್ಠಿಯ ಅಧ್ಯಕ್ಷತೆಯನ್ನು ಅನಸೂಯ ಕಾಂಬ್ಳೆ ಅವರು ವಹಿಸಿದ್ದರು. ಸೋಮಶೇಖರ್ ಕದಿರೇಹಳ್ಳಿ ಅವರು ಕನ್ನಡ ಸಾಹಿತ್ಯ: ಪುರಾಣ ವಸ್ತುವಿನ ಪುನರ್ ಪಯಣದ ಸ್ವರೂಪಕುರಿತು ಪ್ರಬಂಧ ಮಂಡಿಸಿದರು. ಡಾ. ನಾಗಭೂ?ಣ ಬಗ್ಗನಡು ಅವರು ಕನ್ನಡ ಜನಪದ ಸಾಹಿತ್ಯ: ಜನ ಪುರಾಣಗಳ ಪಯಣವಿ?ಯದ ಬಗ್ಗೆ ಆಳವಾದ ವಿಶ್ಲೇ?ಣೆ ನೀಡಿದರು.

ಅಭಿಯಾನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ೧೭ ಮಂದಿ ಹೊಸ ತಲೆಮಾರಿನ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಮೋಹನ್ ಎಚ್.ಎಸ್, ಪ್ರಗತಿಪರ ಚಿಂತಕರಾದ ಕೆ. ದೊರೆರಾಜು, ಡಾ. ಲಕ್ಷ್ಮಣ್ ದಾಸ್, ತುಮಕೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಎಸ್.ಶಿವಣ್ಣ, ಬಂಡಾಯ ಸಾಹಿತ್ಯ ಸಂಘಟನೆಯ ರಾಮಚಂದ್ರಪ್ಪ, ಗೋವಿಂದಯ್ಯ, ಅಶ್ವತನಾರಾಯಣ ಸೇರಿದಂತೆ ಬಂಡಾಯ ಸಾಹಿತ್ಯ ಸಂಘಟನೆಯ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್. ಎಸ್. ಎಲ್. ಸಿ.ಪರೀಕ್ಷೆಯಲ್ಲಿ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾಗೆ 625ಕ್ಕೆ 622 ಅಂಕ.ಬಡಪ್ಪನ ಕಟ್ಟೆ   ಕಥೆ ಭಾಗ-4 ಕುಮಾರ್ ಬಡಪ್ಪಬಡಪ್ಪನ ಕಟ್ಟೆ   ಕಥೆ ಭಾಗ-3   ಕುಮಾರ್ ಬಡಪ್ಪಬಡಪ್ಪನ ಕಟ್ಟೆ, ಕಥೆ ಭಾಗ- 2  ಕುಮಾರ್ ಬಡಪ್ಪಬಡಪ್ಪನ ಕಟ್ಟೆ..   ಕಥೆ ಭಾಗ-1  ಕುಮಾರ್ ಬಡಪ್ಪಪುಸ್ತಕಗಳೇ ಜಗತ್ತಿನ ಅತ್ಯುತ್ತಮ ಸ್ನೇಹಿತ- ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿಕನ್ನಡ ಪರೀಕ್ಷೆಯಲ್ಲಿ 19 ಸಾವಿರ ವಿದ್ಯಾರ್ಥಿಗಳು ಫೇಲ್: ಸಿ.ಟಿ. ರವಿ ಆಕ್ರೋಶಪ.ಜಾ. ಒಳಮೀಸಲಾತಿ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿ.ವೈ. ವಿಜಯೇಂದ್ರ​ಜನಿವಾರ ತೆಗೆಸಿದ್ದು ಖಂಡನೀಯ: ನಿಖಿಲ್ ಕುಮಾರಸ್ವಾಮಿ ಆಕ್ರೋಶ​ಜೆಡಿಎಸ್ ಜಿಲ್ಲಾ ಅಧ್ಯಕ್ಷರ ಸಭೆ: ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ತಂತ್ರ ರೂಪಿಸಿದ ಎಂ. ಕೃಷ್ಣಾರೆಡ್ಡಿ