Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ನಿನ್ನ ಬರುವಿಕೆಗಾಗಿ ನಾ ಕಾದಿರುವೆ"

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ನಿನ್ನ ಬರುವಿಕೆಗಾಗಿ ನಾ ಕಾದಿರುವೆ"
ಜಗವೆಲ್ಲ ಮಲಗಿದಾಗ!
ನೀನೊಬ್ಬನು ಎದ್ದಿದ್ದು ಸರಿಯೇ
?
ಬಾಳ ದಾರಿಯಲ್ಲಿ ಸಂಗಾತಿಯಾಗಿ ಬಂದ
ಯಶೋಧರೆಯ ಬಿಟ್ಟು ಬಂದದ್ದು ಸರಿಯೇ
?

ಅಂಗಲಾಚಿದ, ಕೈಮುಗಿದು ಬೇಡಿದ
ತಡೆದ ಕೈಗಳು ಇನ್ನು ಕೈಚಾಚಿಯೇ ಇವೆ

ಆಸೆ ಕಂಗಳಲಿ ನೂರೆಂಟು ಕನಸುಗಳ ಹೊತ್ತು
ನಿನ್ನ ಬರುವಿಕೆಗಾಗಿ ಕಾದ ಕಣ್ಣುಗಳು ಬಿಟ್ಟಂತೆಯೇ ಇವೆ!

ಗುಡುಗು, ಮಿಂಚುಗಳು ಬಂದು ಹೋದವು
ಮಳೆ ತಾನೆ ಯಾರಿಗೇನಾದರೇನೆಂದು

ತಾ ಸುರಿದು ಹೋಯ್ತು
ಸುರಿದೀತೇ ಮತ್ತೊಮ್ಮೆ ಬಾಳಲ್ಲಿ ಮಳೆ

ನನ್ನ ಪ್ರೀತಿಯ ಸೊನೆ ಕಮರಿದರು ಚಿಂತೆಯಿಲ್ಲ
ಏನನರಿಯದ ಹಾಲುಗಲ್ಲದ ಹಸುಳೆ

ಮಾಡಿತ್ತೇನು ಅಪರಾಧ?
ಅಪ್ಪಾ........ ಎಂದು ಕರೆವ ಮುನ್ನವೇ

ತೊದಲು ನುಡಿಗಳನು ಕೇಳಿಸದೆ
ಅಂಬೆಗಾಲಲಿ ನಡೆದು ಬೀಳುವಾಗ ಮೇಲೇಳಿಸದೆ

ಬದುಕಿಗೆ ಬೆನ್ನು ತಿರುಗಿಸಿದ್ದು ಸರಿಯೇ?
ನಮ್ಮೆಲ್ಲ ಆಸೆಗಳ ಗೋರಿಗಳಿಗೆ ಹಾಕಿ ಮುಚ್ಚಿದ್ದು

ಜಗದ ತೋಟದ ಹೂವುಗಳ ಅರಳಿಸಿದ್ದು
ಸರಿಯೇ
?

ಕತ್ತಲು ಸರಿದು ಬೆಳಕು ಉದಯವಾದಂತೆ
ಮನದ ಮೂಲೆಯು ಜಾಗೃತಗೊಂಡು

ನೀ ಮಾಡಿದ್ದು ಸರಿಯೆನಿಸಿತು
ನನಗಿಂತ ನಮ್ಮ ಬಾಳ ಶ್ರೇಯಸ್ಸಿಗಿಂತ

ಜಗದ ಹಸಿವೇ ಮಿಗಿಲೆಂದು
ಆದರೂ.......ನಾ ಕಾದಿರುವೆ ನಿನ್ನ ನೆರಳಾಗಿ ಹಿಂಬಾಲಿಸಲು
l
ಕವಿತೆ
-ಕೆ.ಎಸ್.ತಿಪ್ಪಮ್ಮ ನಾಗರಾಜು, ಚಿತ್ರದುರ್ಗ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಶೀಘ್ರ ಜಾರಿಗೆ ಕೆಯುಡಬ್ಲ್ಯೂಜೆ ಆಗ್ರಹಜೂನ್ 20ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆಟಿ. ಎಂ. ಸಿ. ಬ್ಯಾಂಕ್ ಸರ್ವ ಸದಸ್ಯರ ಸಭೆದೊಡ್ಡಬಳ್ಳಾಪುರ ತಿರುವಣ್ಣ ಮಲೈ ಮಾರ್ಗದ ಕೆಎಸ್ಆರ್ ಟಿಸಿ ಸೇವೆ ಮುಂದುವರೆಸಲು ಒತ್ತಾಯಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಗೌರವ ಪುರಸ್ಕಾರ"ಸಿಎಂ ಆದ ಮೇಲಾದರೂ ನೀಲಿ ಚಿತ್ರ, ಪೋಸ್ಟರ್ ಮಾಡೋದು ಬಿಡ್ತಾರೆ ಅಂದ್ಕೊಂಡಿದ್ದೆ" – ಡಿಕೆಶಿ ವಿರುದ್ಧ ಹೆಚ್‌ಡಿಕೆ ಬಾಂಬ್!ಹಿರಿಯೂರಿನಲ್ಲಿ ರೈತರ ಕುಂದುಕೊರತೆ ಸಭೆ: ವಿವಿಧ ಇಲಾಖೆಗಳಿಂದ ಸ್ಥಳದಲ್ಲೇ ಪರಿಹಾರಮಧ್ಯರಾತ್ರಿ ಸ್ನೇಹಿತನಿಗೆ ಕರೆ ಮಾಡಿ ಪಿಎಸ್‌ಐ ಬಸವರಾಜ ಹೆರೂರ್ ಆತ್ಮಹತ್ಯೆ!ವಿಧಾನ ಪರಿಷತ್ ಚುನಾವಣೆ ತಲ್ಲಣ; ಕ್ರಾಸ್ ವೋಟಿಂಗ್ ಭೀತಿಯಲ್ಲಿ ಕಾಂಗ್ರೆಸ್ ಶಾಸಕರುಪಿಎಚ್‌ಡಿ ವಿದ್ಯಾರ್ಥಿನಿ ಲೈಂಗಿಕ ಸಂಪರ್ಕ; ಪ್ರಾಧ್ಯಾಪಕ ದೇವರಾಜನ್ ಅಮಾನತು