ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಅನುದಾನ ನೀಡಿಕೆ ಹಾಗೂ ತಮ್ಮ ರಾಜಕೀಯ ಅನುಭವದ ಕುರಿತು ಸಂಸದ ಗೋವಿಂದ್ ಕಾರಜೋಳ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ತಮ್ಮಲ್ಲಿ ಜ್ಞಾನ ಮತ್ತು ಅನುಭವದ ಕೊರತೆಯಿದೆ ಎಂದು ಒಪ್ಪಿಕೊಂಡಿರುವ ಅವರು, ಪರಿಪೂರ್ಣತೆಗಾಗಿ ಹಿರಿಯರ ಬಳಿ ತರಬೇತಿ ಪಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ ಮಾತನಾಡಿದ ಸಂಸದ ಕಾರಜೋಳ ಅವರು, ಹಿರಿಯರ ಬಳಿ ಜ್ಞಾನ ಮತ್ತು ಅನುಭವದ ಭಿಕ್ಷೆಯನ್ನು ಬೇಡುವುದರಲ್ಲಿ ತಪ್ಪಿಲ್ಲ ಎಂಬರ್ಥದಲ್ಲಿ ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀರಾವರಿ ಅನುದಾನದ ಚರ್ಚೆ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಗೂ ತದನಂತರ ನೀರಾವರಿ ಕ್ಷೇತ್ರಕ್ಕೆ ನೀಡಲಾದ ಅನುದಾನಗಳ ಕುರಿತು ಅವರು ಸಮಗ್ರವಾಗಿ ಪ್ರಸ್ತಾಪಿಸಿದರು.
ವಚನಗಳ ಉಲ್ಲೇಖ: ಬಸವಣ್ಣ, ಚೆನ್ನಯ್ಯ ಮತ್ತು ದಾಸಯ್ಯನವರ ಮನೆಗಳಲ್ಲೂ ಭಿಕ್ಷೆಯನ್ನು ಬೇಡಿ ಜ್ಞಾನ ಪಡೆಯುವುದಾಗಿ ವಚನದ ಮೂಲಕ ಸಂಸದರು ವಿವರಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರ 12 ಸಾವಿರ ಕೋಟಿ ಕೊಟ್ಟಿಲ್ಲ, ಕೇವಲ ಐದೂವರೆ ಸಾವಿರ ಕೋಟಿ ಕೊಟ್ಟಿದ್ದರೂ ಹೆಚ್ಚಿನ ಅನುದಾನ ನೀಡಿದ್ದೇವೆಂದು ಸಂಸದರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಅಂಕಿ ಅಂಶಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಸಂಸದರ ವಿರುದ್ಧ ದೂರಿದ್ದನ್ನು ಸ್ಮರಿಸಬಹುದಾಗಿದೆ.




