Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಶ್ರಯ ಬಡಾವಣೆಯಲ್ಲಿ ಅಕ್ರಮ ವಾಸ-ಪ್ರತಿಭಟನೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಬಡವರು ನಿರ್ಗತಿಕರಿಗೆ ಹಂಚಿಕೆ ಮಾಡಲಾದ ಆಶ್ರಯ ಮನೆಗಳು ಬಲಾಢ್ಯರ ಪಾಲಾಗಿವೆ
, ಅಕ್ರಮವಾಗಿ ಮನೆಗಳ ಬೀಗ ಹೊಡೆದು ಅಶ್ರಯ ಮನೆಗಳನ್ನ ಕಬಳಿಸಲಾಗಿದೆ, ನಕಲಿ ದಾಖಲೆ ಸೃಷ್ಠಿಸಿ ಅಕ್ರಮವಾಗಿ ವಾಸವಾಗಿರುವರನ್ನ ತೆರವು ಮಾಡುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರದ ನಗರಸಭೆಯ ಮುಂದೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಪ್ರತಿಭಟನೆ ನಡೆಸಿತು. 

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ 2002ರಲ್ಲಿ ಅಶ್ರಯ ಯೋಜನೆಯಡಿ ಬಡವರು, ನಿರ್ಗತಿಕರು ಮತ್ತು ದಲಿತರಿಗೆ ನಿವೇಶಗಳ ಹಂಚಿಕೆ ಮಾಡಲಾಗಿದೆ, ಸುಮಾರು 50ಕ್ಕೂ ಹೆಚ್ಚು ಮನೆಗಳು ಇಲ್ಲಿನ ಸ್ಥಳೀಯ ಮುಖಂಡರೆಂದು ಕರೆಸಿಕೊಳ್ಳುವರ ವಶದಲ್ಲಿವೆ, ಅಕ್ರಮವಾಗಿ ವಾಸವಾಗಿರುವ ನಿವಾಸಿಗಳ ಮನೆಗಳನ್ನ ಖಾಲಿ ಮಾಡಿಸಿ, ಅಸಲಿ ಹಕ್ಕುಪತ್ರ ವಾರಸುದಾರರಿಗೆ ಅಶ್ರಯ ಮನೆಗಳನ್ನ ನೀಡುವಂತೆ   ಪ್ರಬುದ್ಧ ಭೀಮ ಸೇನೆ ಒತ್ತಾಯಿಸಿದೆ. 

 ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷರಾದ ಯು.ಮುನಿರಾಜು, ರಾಜೀವ್ ಗಾಂಧಿ ಬಡಾವಣೆಯಲ್ಲಿನ ಸ್ಥಳೀಯ ಕೆಲವು ಮುಖಂಡರು ಅಕ್ರಮವಾಗಿ ಮನೆಗಳ ಬೀಗ ಹೊಡೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ, ಅಕ್ರಮವಾಗಿ ದಾಖಲೆಗಳನ್ನ ಸೃಷ್ಠಿಸಿ ಅಸಲಿ ಹಕ್ಕುದಾರರಿಗೆ ವಂಚನೆ ಮಾಡಿದ್ದಾರೆ,

ಹಕ್ಕುಪತ್ರದ ವಾರಸುದಾರರು ಮನೆಗಳ ಬಳಿ ಬಂದರೆ ದಬ್ಬಾಳಿಕೆ ದೌರ್ಜನ್ಯ ನಡೆಸಿ ಅಲ್ಲಿಂದ ಓಡಿಸುತ್ತಾರೆ,   ಪೌರಾಯುಕ್ತರು ಪ್ರತಿ ಮನೆಗೂ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲನೆ ಮಾಡಬೇಕು, ನಕಲಿ ವಾಸಿಗಳನ್ನ ಪತ್ತೆ ಮಾಡಿ ಅಸಲಿ ಹಕ್ಕುಪತ್ರ ಇರುವ ಜನರಿಗೆ ಮನೆಗಳನ್ನ ನೀಡುವಂತೆ ಒತ್ತಾಯಿಸಿದರು. 

ನಗರಸಭೆಯ ಎಸ್ ಡಿಎ ನೌಕರ ನಕಲಿ ದಾಖಲೆ ಸೃಷ್ಠಿಸಿ ಅಂಜಾದ್ ಖಾನ್ ರವರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು, ಅವರು ನೀಡಿರುವ ಅಂಕಪಟ್ಟಿ ನಕಲಿಯಾಗಿದ್ದು, ಅದನ್ನು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು. 

  ಪ್ರತಿಭಟನೆಯಲ್ಲಿ  ರಾಜ್ಯ ಗೌರವ ಅಧ್ಯಕ್ಷ ವಿ.ನಾಗರಾಜು, ರಾಜ್ಯ  ಪ್ರಧಾನ ಕಾರ್ಯದರ್ಶಿ ಎಂ.ಚನ್ನಿಗರಾಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ  ಶಿವಕುಮಾರ್ಬೆಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ರಘುಕುಮಾರ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಕುಮಾರ್ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್,

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಲಿಗೆ ವೆಂಕಟೇಶ್, ರಾಜ್ಯ ಕಾರ್ಯದರ್ಶಿ ಮಹೇಶ್.ಎಂಡಿ, ಅಲ್ಪ ಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ  ಮೊಕದ್ದರ್ದೇವನಹಳ್ಳಿ ಮಹಿಳಾ ಘಟಕ ಅಧ್ಯಕ್ಷ ಸುಜಾತ, ಸೇರಿದಂತೆ ಮುಖಂಡರಾದ ಮಹಮ್ಮದ್ ಪೈಜುಲ್ಲಾ, ಜಬೀವುಲ್ಲಾ, ಅಂಜಾದ್  ಪಾಷಾ, ರವಿಕುಮಾರ್ ಇದ್ದರು.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ