Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗೀತಂ ವಿಶ್ವ ವಿದ್ಯಾಲಯದಲ್ಲಿ ನೂತನ ಅಂಚೆ ಕಚೇರಿ ಉದ್ಘಾಟನೆ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾರತೀಯ ಅಂಚೆ ಇಲಾಖೆಯು ವಿಶ್ವದ ಅತಿದೊಡ್ಡ ಅಂಚೆ ಜಾಲವಾಗಿದ್ದು
, 1.55 ಲಕ್ಷಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದೆ. ಇದು ಸಾಂಪ್ರದಾಯಿಕ ಅಂಚೆ ಸೇವೆಯೊಂದಿಗೆ, ಉಳಿತಾಯ ಖಾತೆ, ವಿಮೆ, ಮನಿ ಆರ್ಡರ್ ಮತ್ತು ಪಿಂಚಣಿ ವಿತರಣೆ ಸೇರಿದಂತೆ ಹಣಕಾಸು ಸೇವೆಗಳನ್ನು ನೀಡುತ್ತದೆ. 90% ಕ್ಕೊ ಹೆಚ್ಚು ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿವೆ ಹೆಚ್ಚು ಪ್ರಯೋಜನವಾಗಿದೆ ಅಗತ್ಯವಾದ ಸೌಲಭ್ಯ ಒಳಗೊಂಡ ಅಂಚೆ ಕಚೇರಿಗಳನ್ನು ತೆರೆಯಲಾಗುತ್ತಿದೆ ಎಂದು ಕರ್ನಾಟಕ ಸರ್ಕಲ್ ನ ಪೋಸ್ಟಲ್ ಸರ್ವೀಸ್ ನಿರ್ದೇಶಕ ಸಂದೇಶ್ ಮಹಾದೇವಪ್ಪ ತಿಳಿಸಿದರು.


 ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಿಸಲಾದ ನೂತನ ಎನ್-ಜೆನ್ (ಹೊಸ ತಲೆಮಾರಿನ) ಅಂಚೆ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತ 'ನಾಡಿದ ಅವರು, ಅಂಚೆ ವ್ಯವಸ್ಥೆಯಲ್ಲಿ ಕಾಲಾಂತರದಲ್ಲಿ ಪತ್ರಗಳ ವ್ಯವಹಾರ ಕಡಿಮೆ ಆಯಿತು. ಇದರಿಂದ ವಿವಿಧ ಸೇವೆಯನ್ನು ಅಂಚೆ ಅಡಿಯಲ್ಲಿ ಆರಂಭಿಸಲಾಯಿತು. ಪಾಸ್‌ಪೋರ್ಟ್, ಆಧಾರ ಸೀಡಿಂಗ್, ವಿಶ್ವಕರ್ಮ ಯೋಜನೆಯ ಕಿಟ್‌ನ್ನು ಹಳ್ಳಿಗಳಿಗೆ ಸರಬರಾಜು ಮಾಡುವ ನಿಟ್ಟಿನಲ್ಲಿ ಕೂಡ ಅಂಚೆ ಇಲಾಖೆ ಕೆಲಸ ಮಾಡುತ್ತಿದೆ.


ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಈ ಅಂಚೆ ಕಚೇರಿಗೆ ಭೇಟಿ ಕೊಟ್ಟ ತಕ್ಷಣವೇ ಅವರನ್ನು ಸ್ವಾಗತ ಮಾಡಲು ವೆಲ್ಕಮ್ ಲಾಂಚ್ ಸ್ಥಾಪಿಸಲಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಿರುವ ಕಾರಣ ತಮ್ಮ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ಚಾರ್ಜಿಂಗ್ ಸ್ಪಾಟ್ ಕೂಡ ಆ ಯೋಜನೆ ಮಾಡಲಾಗಿದೆ. ಯುವ ಸಮುದಾಯವು ಹೆಚ್ಚಿನ ಸಮಯವನ್ನು ರೀಲ್ಸ್ ಮಾಡುವುದರಲ್ಲಿ ಕಳೆಯುವುದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದು ಅಂತಹ ರೀಲ್ಸ್ ಮಾಡುವವರಿಗೆ ಅಗತ್ಯ ಪರಿಕರಗಳನ್ನು ಈ ಅಂಚೆ ಕಚೇರಿಯಲ್ಲಿ ಬಳಸಿ ವಿಶೇಷ ರೀಲ್ಸ್ ಮಾಡಬಹುದಾಗಿದೆ. ಅಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಚಂದ ಕಾಣುವ ಹಸಿರು ಗಿಡಗಳಿಂದ ತುಂಬಿದ ಅತ್ಯುತ್ತಮ ಸೆಲ್ಫಿ ಸ್ಪಾಟ್ ವಾಲ್ ರೂಪಿಸಿದ್ದು, ಓದುಗರನ್ನು ತಣಿಸಲು ಪುಟಾಣಿ ಲೈಬ್ರರಿ ಕೂಡ ಇದೆ. ಜೊತೆಗೆ ಭಾರತೀಯ ಅಂಚೆ ಸೇವೆಗಳನ್ನು ಕುರಿತ ಸಂಕ್ಷಿಪ್ತ ಮಾಹಿತಿ ನೀಡಲು ಪೋಸ್ಟಲ್ ಟ್ರೀ ಸಿದ್ಧವಿದೆ. ಅಲ್ಲದೆ ಈ ಅಂಚೆ ಕಚೇರಿಯಲ್ಲಿ ಪಾರ್ಸೆಲ್ ತಂದು ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ ಕಾರಣ ಆಧುನಿಕ ಯಂತ್ರೋಪಕರಣದ ಸಹಾಯದಿಂದ ತಾವೇ ಖುದ್ದಾಗಿ ಪಾರ್ಸಲ್ ಅನ್ನು ಯಂತ್ರದಲ್ಲಿ ಸೆಲ್ಫ್  ಬುಕಿಂಗ್ ಮಾಡುವ ಮೂಲಕ ನಮೂದಿಸಿ ಸ್ವೀಕೃತಿ ಚೀಟಿ ಪಡೆಯಬಹುದಾಗಿದೆ ಎಂದು ಹೇಳಿದರು.


ಗೀತಂ ರೆಸಿಡೆನ್ಸಿಯಲ್ ನಿರ್ದೇಶಕ ವಿಜಯ್ ಗಿಜ್ಜಿ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಅಂಚೆ ಇಲಾಖೆ ಬಳಸಬೇಕೆಂಬ ಮಹದಾಸೆಯಿಂದ ಅಂಚೆ ಇಲಾಖೆಯ ಸೇವೆಗಳನ್ನು ಆಧುನಿಕರಣ ದೊಂದಿಗೆ ಬೆಸೆದು ಈ ವಿನೂತನ ಪ್ರಯತ್ನವನ್ನು ಭಾರತೀಯ ಅಂಚೆ ಸೇವೆ ಮಾಡಿದೆ. ಈ ವಿಶೇಷ ಪ್ರಯತ್ನಕ್ಕೆ ನಮ್ಮ ಗೀತಂ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಾವು ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.


ಈ ಸಂಧರ್ಭದಲ್ಲಿ ಗೀತಂ ವಿಶ್ವವಿದ್ಯಾಲಯದ ಪ್ರಮುಖರು, ಭಾರತೀಯ ಅಂಚೆ ಇಲಾಖೆ(ಬೆಂಗಳೂರು ವಿಭಾಗ )ಯ ಸಿಬ್ಬಂದಿ ವರ್ಗ ಹಾಜರಿದ್ದರು.


 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ