Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಜಮೀನು ಸ್ವಾದೀನ ವಿರೋಧಿಸಿ ಅನಿರ್ದಿಷ್ಟ ಧರಣಿ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿ ಸುತ್ತಮುತ್ತಲಿನ ಚಿಕ್ಕಬೆಳವಂಗಲ
, ರಾಂಪುರ, ನಾರನಹಳ್ಳಿ, ಸೊಣ್ಣೇನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ರೈತರ ಕೃಷಿ ಯೋಗ್ಯ ಭೂಮಿಯನ್ನು ಕೆಐಎಡಿಬಿ ಬಲವಂತವಾಗಿ  ಪರಭಾರೆ ವಿರೋಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ಭ್ರಷ್ಟಾಚಾರ ವಿರೋಧಿ ಮಂಡಳಿ ತೀವ್ರವಾಗಿ ಖಂಡಿಸಿ ಅನಿರ್ದಿಷ್ಟ ಧರಣಿ ಮಾಡಲಾಯಿತು.

ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ಭ್ರಷ್ಟಾಚಾರ ವಿರೋಧಿ ಮಂಡಳಿ ರಾಷ್ಟ್ರೀಯ ಅಧ್ಯಕ್ಷ ಡಾ. ಹೆಚ್  ರಾಜಗೋಪಾಲ್ ಮಾತನಾಡಿ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರ ದೊಡ್ಡಬೆಳವಂಗಲ ಹೋಬಳಿಯ   ಸೊಣ್ಣೇನಹಳ್ಳಿ, ರಾಂಪುರ, ಅಕ್ಕತಮ್ಮನಹಳ್ಳಿ, ನಾಗನಹಳ್ಳಿ, ದೊಡ್ಡ ಬೆಳವಂಗಲ,ಚಿಕ್ಕ ಬೆಳವಂಗಲ, ಸೇರಿದಂತೆ ಹಲವು ಗ್ರಾಮಗಳ ಸುಮಾರು 2100 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು  ಕೆಐಎಡಿಬಿ ವತಿಯಿಂದ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಈ ಭಾಗದ ರೈತಾಪಿ ವರ್ಗದವರು ಮತ್ತು ರೈತ ಸಂಘಟನೆಗಳು ನಮ್ಮನ್ನು ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಅವರ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ.

ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನು ಅತ್ಯಂತ ಫಲವತ್ತಾಗಿದ್ದು ವರ್ಷದಲ್ಲಿ , ಮೂರು ಬೆಳೆ ತೆಗೆಯುವ ಕೃಷಿ ಭೂಮಿಯಾಗಿದೆ. ಇದರಿಂದ ನೂರಾರು ರೈತ ಕುಟುಂಬಗಳು ಜೀವನಕ್ಕೆ ಅಧಾರವಾಗಿದೆ. ಇಂತಹ ಭೂಮಿಯ ಸ್ವಾಧೀನದಿಂದ ರೈತರು ಬೀದಿಗೆ ಬೀಳಲಿದ್ದು, ಆಹಾರ ಭದ್ರತೆಗೆ ಧಕ್ಕೆಯಾಗಲಿದೆ. ಈ ಬಾಗ ಬಹುಪಾಲು ಕಾಡು ಹಾಗು ಬೆಟ್ಟ ಗುಡ್ಡಗಳಿಂದ ಕೂಡಿದ್ದು ಕಾಡುಗಳಲ್ಲಿ ಆಮ್ಲಜನಕ  ಹೆಚ್ಚು ಸಿಗಲು ಮುಖ್ಯ ಕಾರಣವೆಂದರೆ ಅಲ್ಲಿರುವ ಅಸಂಖ್ಯಾತ ಮರ-ಗಿಡಗಳು ನಡೆಸುವ ದ್ಯುತಿ ಸಂಶ್ಲೇಷಣೆ  ಕ್ರಿಯೆ.ಇದರ ಹಿಂದಿನ ಪ್ರಮುಖ ವೈಜ್ಞಾನಿಕ ಕಾರಣಗಳು ಇಲ್ಲಿವೆ. ದ್ಯುತಿಸಂಶ್ಲೇಷಣೆ ಪ್ರಕ್ರಿಯೆ: ಮರಗಳು ಸೂರ್ಯನ ಬೆಳಕು, ನೀರು ಮತ್ತು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಬಳಸಿ ತಮ್ಮ ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಅವು ಆಮ್ಲಜನಕವನ್ನು ಉಪ ಉತ್ಪನ್ನವಾಗಿ  ಹೊರಹಾಕುತ್ತವೆ ಹೆಚ್ಚಿನ ಸಸ್ಯ ಸಾಂದ್ರತೆ ಕಾಡುಗಳಲ್ಲಿ ದಟ್ಟವಾದ ಮರಗಳು, ಗಿಡಗಳು ಮತ್ತು ಪೊದೆಗಳಿರುತ್ತವೆ.

ಇವೆಲ್ಲವೂ ನಿರಂತರವಾಗಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿರುವುದರಿಂದ, ಅಲ್ಲಿ ಗಾಳಿಯು ಹೆಚ್ಚು ಶುದ್ಧವಾಗಿರುತ್ತದೆ ಮತ್ತು ಆಮ್ಲಜನಕದ ಪ್ರಮಾಣ ಅಧಿಕವಾಗಿರುತ್ತದೆ.ಹಾಗು ಈ ಬೆಟ್ಟಗುಡ್ಡ ಪ್ರಾಣಿ ಪಕ್ಷಿಗಳು ನೆಮ್ಮದಿಯ ಜೀವನ ನೆಡೆಸುತ್ತಿವೆ ಇಂತಹ ಕಾಡುಗಳಲ್ಲಿ ವಾಸಮಾಡುವ ಕಾಡುಪ್ರಾಣಿಗಳ ಅವಸ್ಥಾನಕ್ಕೆ ಲಗ್ಗೆ ಇಟ್ಟು ಅವುಗಳ ಜೀವನಕ್ಕೆ ಹಾಳು ಮಾಡುವುದಲ್ಲದೆ.  ಅಧಿಕಾರಿಗಳು ರೈತರಿಗೆ ನಿಮ್ಮ ಜಮೀನು ರಸ್ತೆಗೆ ಹೋಗುತ್ತವೆ ಎಂದು  ತಪ್ಪು ಮಾಹಿತಿ ನೀಡಿ, ಭಯ ಹುಟ್ಟಿಸಿ ಭೂಮಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಇದು ಖಂಡನೀಯ ಎಂದರು.

ಅನಿರ್ದಿಷ್ಟ ಧರಣಿಯಲ್ಲಿ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿ  ರಾಜ್ಯ ಕಾರ್ಯದರ್ಶಿ   ದಿಲೀಪ್, ಕೋಲಾರ ಅಧ್ಯಕ್ಷ   ವಿ.ಮುನಿರಾಜು, ಜಿಲ್ಲಾ ಕಾರ್ಯದರ್ಶಿ    ಕೆ.ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರದ  ಜಿಲ್ಲಾ ಅಧ್ಯಕ್ಷರು ಹರಿ ಕೃಷ್ಣ, ಪೂರ್ವ ವಲಯ ಅಧ್ಯಕ್ಷರು ಬೆಂಗಳೂರು ವಿಠ್ಠಲ್, ಪೂರ್ವ ವಲಯ ಯುವ ಅಧ್ಯಕ್ಷರು ಬೆಂಗಳೂರು ಮೋಹನ್, ಕಾರ್ಯಕಾರಿ ಸಮಿತಿಯ ಸದಸ್ಯ ವೆಂಕಟರಾಮ್ ಹಾಗೂ ಭಾರತೀಯ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿ ಪದಾಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವದ ಪ್ರಯುಕ್ತ ವೈಭವೋಪೇತವಾಗಿ ನಡೆದ ಮೆರವಣಿಗೆ  ಜಿಟಿಟಿಸಿ ಡಿಪ್ಲೋಮಾ ಕೋರ್ಸ್‍ಗಳಿಂದ ಉಜ್ವಲ ಭವಿಷ್ಯ-ಪಿ.ರಘುವಸತಿ ರಹಿತರ ಪಟ್ಟಿಗೆ ಹೆಸರು ಸೇರಿಸಲು ಮೇ 15 ಕೊನೆಯ ದಿನಅರಿವು ಶೈಕ್ಷಣಿಕ ಸಾಲ ಯೋಜನೆ: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಕ್ರಿಯಾಶೀಲ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರಗಳು ಸಹಕಾರಿ- ಕಲ್ಯಾಣಾಧಿಕಾರಿ ಜೆ.ವೈಶಾಲಿಕರವಸೂಲಿಗಾರರ ಹುದ್ದೆಯ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಆಕ್ಷೇಪಣೆಗೆ ಅವಕಾಶಸೇವಾದಳದ ಸಂಸ್ಥಾಪಕ ಹರ್ಡಿಕರ್ ರವರ ಜನ್ಮ ದಿನಾಚರಣೆವಿಶ್ವ ಅಮ್ಮಂದಿರ ದಿನಾಚರಣೆ-ಅಮ್ಮಾ ಕವಿತೆಕಾಂಗ್ರೆಸ್‌ಗೆ 'ಮೊಟ್ಟೆ' ಏಟಿನ ಭವಿಷ್ಯ ನುಡಿದ ಬಿಜೆಪಿ ನಾಯಕ!ಪತ್ನಿ-ಮಕ್ಕಳನ್ನು ಕರೆದೊಯ್ಯಲು ಹೋದ ಅಳಿಯನಿಗೆ ಬೆಂಕಿ ಹಚ್ಚಿದ ಅತ್ತೆ ಮನೆಯವರು!