Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೊರಾರ್ಜಿ ದೇಸಾಯಿ ವಸತಿ ಕಾಲೇಜುಗಳ ಪ್ರಥಮ ಪಿಯು ಪ್ರವೇಶಕ್ಕೆ ಅರ್ಜಿ ಆಹ್ವಾನ

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ 2026-27ನೇ ಸಾಲಿನ ಪ್ರಥಮ ಪಿಯುಸಿ (ವಿಜ್ಞಾನ ವಿಭಾಗ) ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಕುರಿತು ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಬಿ. ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 24.04.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29.04.2026
ಅರ್ಜಿಸಲ್ಲಿಸುವ ಲಿಂಕ್: https://kries.karnataka.gov.in

ಗಮನಿಸಿ: ಕೇವಲ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.

ಚಿತ್ರದುರ್ಗ ಜಿಲ್ಲೆಯ ಲಭ್ಯವಿರುವ ಕಾಲೇಜುಗಳು:
ಜಿಲ್ಲೆಯ ಈ ಕೆಳಗಿನ ಕಾಲೇಜುಗಳಲ್ಲಿ ಪ್ರವೇಶಾತಿ ಲಭ್ಯವಿದ್ದು, ಪ್ರತಿ ಕಾಲೇಜಿನಲ್ಲಿ 40 PCMB ಮತ್ತು 40 PCMC ಸೀಟುಗಳ ಅವಕಾಶವಿದೆ.

ಮೊರಾರ್ಜಿ ದೇಸಾಯಿ ವಸತಿ ಕಾಲೇಜು, ಚಿತ್ರಹಳ್ಳಿ: ಹೊಳಲ್ಕೆರೆ ತಾಲ್ಲೂಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪಿ.ಯು. ಕಾಲೇಜು, ಬೊಮ್ಮನಕಟ್ಟೆ: ಹೊಳಲ್ಕೆರೆ ತಾಲ್ಲೂಕು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪಿ.ಯು. ಕಾಲೇಜು, ದೇವರಕೊಟ್ಟ: ಹಿರಿಯೂರು ತಾಲ್ಲೂಕು.

ಸೂಚನೆ: ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಹೊಂದಿರುವ ಅರ್ಹ ವಿದ್ಯಾರ್ಥಿಗಳು ನಿಗಧಿತ ಅವಧಿಯೊಳಗೆ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್. ಎಸ್. ಎಲ್. ಸಿ.ಪರೀಕ್ಷೆಯಲ್ಲಿ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾಗೆ 625ಕ್ಕೆ 622 ಅಂಕ.ಬಡಪ್ಪನ ಕಟ್ಟೆ   ಕಥೆ ಭಾಗ-4 ಕುಮಾರ್ ಬಡಪ್ಪಬಡಪ್ಪನ ಕಟ್ಟೆ   ಕಥೆ ಭಾಗ-3   ಕುಮಾರ್ ಬಡಪ್ಪಬಡಪ್ಪನ ಕಟ್ಟೆ, ಕಥೆ ಭಾಗ- 2  ಕುಮಾರ್ ಬಡಪ್ಪಬಡಪ್ಪನ ಕಟ್ಟೆ..   ಕಥೆ ಭಾಗ-1  ಕುಮಾರ್ ಬಡಪ್ಪಪುಸ್ತಕಗಳೇ ಜಗತ್ತಿನ ಅತ್ಯುತ್ತಮ ಸ್ನೇಹಿತ- ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿಕನ್ನಡ ಪರೀಕ್ಷೆಯಲ್ಲಿ 19 ಸಾವಿರ ವಿದ್ಯಾರ್ಥಿಗಳು ಫೇಲ್: ಸಿ.ಟಿ. ರವಿ ಆಕ್ರೋಶಪ.ಜಾ. ಒಳಮೀಸಲಾತಿ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿ.ವೈ. ವಿಜಯೇಂದ್ರ​ಜನಿವಾರ ತೆಗೆಸಿದ್ದು ಖಂಡನೀಯ: ನಿಖಿಲ್ ಕುಮಾರಸ್ವಾಮಿ ಆಕ್ರೋಶ​ಜೆಡಿಎಸ್ ಜಿಲ್ಲಾ ಅಧ್ಯಕ್ಷರ ಸಭೆ: ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ತಂತ್ರ ರೂಪಿಸಿದ ಎಂ. ಕೃಷ್ಣಾರೆಡ್ಡಿ