Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐಪಿಎಲ್ ಫೈನಲ್ ಸ್ಥಳಾಂತರ ವಿವಾದ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿ

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಪಿಎಲ್ ಫೈನಲ್‌ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರ ಮಾಡಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ಸರ್ಕಾರ ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ಸರಣಿ ಟ್ವೀಟ್ ಮಾಡಿರುವ ಜೆಡಿಎಸ್
, ಫೈನಲ್ ಪಂದ್ಯ ಕೈತಪ್ಪಲು ಕಾಂಗ್ರೆಸ್ ಸರ್ಕಾರದ "ಉಚಿತ ಟಿಕೆಟ್" ದಾಹವೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದೆ.

​10,000 ವಿವಿಐಪಿ ಟಿಕೆಟ್‌ಗಳ ಬೇಡಿಕೆ?-
​ಬೆಂಗಳೂರಿನಿಂದ ಪಂದ್ಯ ಸ್ಥಳಾಂತರಗೊಳ್ಳಲು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೀಡಿರುವ ಸ್ಪಷ್ಟನೆಯನ್ನು ಉಲ್ಲೇಖಿಸಿರುವ ಜೆಡಿಎಸ್
, "ರಾಜ್ಯದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 10,000 ಉಚಿತ (VVIP) ಟಿಕೆಟ್‌ಗಳಿಗಾಗಿ ಬೇಡಿಕೆ ಇಟ್ಟಿತ್ತು. ಈ ಲಜ್ಜೆಗೆಟ್ಟ ಬೇಡಿಕೆಯಿಂದಾಗಿಯೇ ಪಂದ್ಯ ಕೈತಪ್ಪಿದೆ," ಎಂದು ದೂರಿದೆ. ಈ ಹಿಂದೆ ಸದನದಲ್ಲೇ ಶಾಸಕರು ಬಿಟ್ಟಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದನ್ನು ಜೆಡಿಎಸ್ ನೆನಪಿಸಿದೆ.

​ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ-
​ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರಿಗೆ ತಿರುಗೇಟು ನೀಡಿರುವ ಜೆಡಿಎಸ್
, "ಇಟಲಿ ಕಾಂಗ್ರೆಸ್‌ನ ಚಮಚಾಗಿರಿಯಲ್ಲಿ ಬದುಕುತ್ತಿರುವ ನಿಮಗೆ ನಕಲಿ ಗಾಂಧಿ ಕುಟುಂಬದ ವಂಶ ರಾಜಕಾರಣದ ಬಗ್ಗೆ ಮಾತನಾಡಲು ನಾಲಿಗೆ ಬಿದ್ದು ಹೋಗಿದೆಯೇ? ಅಹಮದಾಬಾದ್‌ಗೆ ಪಂದ್ಯ ಸ್ಥಳಾಂತರವಾದ ಬಗ್ಗೆ ಮಾತನಾಡುವ ನಿಮಗೆ ಅಸಲಿ ಕಾರಣ ತಿಳಿದಿಲ್ಲದಿರುವುದು ನಿಮ್ಮ ಅವಿವೇಕಿತನಕ್ಕೆ ಹಿಡಿದ ಕನ್ನಡಿ," ಎಂದು ವೀಕ್ಷಿಸಿದೆ.

​ಹಳೆಯ ಘಟನೆಗಳ ನೆನಪು-
​ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಪಂದ್ಯದ ವೇಳೆ ಸಂಭವಿಸಿದ ದುರಂತವನ್ನು ಪ್ರಸ್ತಾಪಿಸಿರುವ ಜೆಡಿಎಸ್
, "ಪಿಆರ್ ಸ್ಟಂಟ್ ಮಾಡುವ ಡಿ.ಕೆ. ಶಿವಕುಮಾರ್ ಅವರ ಪ್ರಚಾರದ ತೆವಲಿಗೆ ಕಳೆದ ವರ್ಷ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಬಲಿಯಾಗಿದ್ದು ಮರೆತುಹೋಯಿತೇ?" ಎಂದು ಪ್ರಶ್ನಿಸಿದೆ. "ಕ್ರಿಕೆಟ್ ಪ್ರೇಮದ ಬಗ್ಗೆ ಪಾಠ ಮಾಡುವ ನೈತಿಕತೆ ಕಾಂಗ್ರೆಸ್ ಸರ್ಕಾರಕ್ಕಿಲ್ಲ," ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

​ಒಟ್ಟಾರೆಯಾಗಿ, ಐಪಿಎಲ್ ಕ್ರಿಕೆಟ್ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವದ ಪ್ರಯುಕ್ತ ವೈಭವೋಪೇತವಾಗಿ ನಡೆದ ಮೆರವಣಿಗೆ  ಜಿಟಿಟಿಸಿ ಡಿಪ್ಲೋಮಾ ಕೋರ್ಸ್‍ಗಳಿಂದ ಉಜ್ವಲ ಭವಿಷ್ಯ-ಪಿ.ರಘುವಸತಿ ರಹಿತರ ಪಟ್ಟಿಗೆ ಹೆಸರು ಸೇರಿಸಲು ಮೇ 15 ಕೊನೆಯ ದಿನಅರಿವು ಶೈಕ್ಷಣಿಕ ಸಾಲ ಯೋಜನೆ: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಕ್ರಿಯಾಶೀಲ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರಗಳು ಸಹಕಾರಿ- ಕಲ್ಯಾಣಾಧಿಕಾರಿ ಜೆ.ವೈಶಾಲಿಕರವಸೂಲಿಗಾರರ ಹುದ್ದೆಯ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಆಕ್ಷೇಪಣೆಗೆ ಅವಕಾಶಸೇವಾದಳದ ಸಂಸ್ಥಾಪಕ ಹರ್ಡಿಕರ್ ರವರ ಜನ್ಮ ದಿನಾಚರಣೆವಿಶ್ವ ಅಮ್ಮಂದಿರ ದಿನಾಚರಣೆ-ಅಮ್ಮಾ ಕವಿತೆಕಾಂಗ್ರೆಸ್‌ಗೆ 'ಮೊಟ್ಟೆ' ಏಟಿನ ಭವಿಷ್ಯ ನುಡಿದ ಬಿಜೆಪಿ ನಾಯಕ!ಪತ್ನಿ-ಮಕ್ಕಳನ್ನು ಕರೆದೊಯ್ಯಲು ಹೋದ ಅಳಿಯನಿಗೆ ಬೆಂಕಿ ಹಚ್ಚಿದ ಅತ್ತೆ ಮನೆಯವರು!