Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಬುದ್ಧ ಧರ್ಮಕ್ಕೆ ಪ್ರತ್ಯೇಕ ಧ್ವಜ ಬೇಕಿಲ್ಲ ಎನ್ನುವುದು ಅರ್ಥಹೀನ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬುದ್ಧ ಧರ್ಮಕ್ಕೆ ಪ್ರತ್ಯೇಕ ಧ್ವಜ ಬೇಕಿಲ್ಲ ಎನ್ನುವುದು ಅರ್ಥಹೀನವಾದುದು. ವಿಶ್ವ ಬೌದ್ಧ ಪಂಚಶೀಲ ಧ್ವಜವು ಧಮ್ಮದ ಸಂಕೇತ
, ಮಾನವೀಯತೆಗೆ ಮಾರ್ಗದರ್ಶಿ ಯಾಗಿದೆ. ಎಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಕೋಟೆನಾಡು ಬುದ್ದ ವಿಹಾರ ಧ್ಯಾನ ಕೇಂದ್ರದಲ್ಲಿ ವಿಶ್ವ ಬೌದ್ಧಧ್ವಜ ದಿನಾಚರಣೆ ಪ್ರಯುಕ್ತ ನಡೆದ ಬೌದ್ಧ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜಗತ್ತಿನ ಪ್ರತಿಯೊಂದು ದೇಶಕ್ಕೂ ಒಂದು ರಾಷ್ಟ್ರಧ್ವಜವಿದೆ. ಆ ಧ್ವಜವು ಆ ದೇಶದ ಜನರ ಆಕಾಂಕ್ಷೆ, ಇತಿಹಾಸ, ಸಂಸ್ಕೃತಿ ಮತ್ತು ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತ ಪ್ರತಿಬಿಂಬಿಸಲು ಧ್ವಜಗಳನ್ನು ವಿನ್ಯಾಸಗೊಳಿಸುತ್ತವೆ. ಅದೇ ರೀತಿ ಪ್ರತಿಯೊಂದು ಧರ್ಮವು ಅದರ ತಾತ್ವಿಕ ಮೌಲ್ಯ ಮತ್ತು ಪ್ರಾಯೋಗಿಕ ದಿಕ್ಕನ್ನು ಸೂಚಿಸಲು ವಿಶಿಷ್ಟ ಧ್ವಜವನ್ನು ಹೊಂದಿದೆ.

ಬೌದ್ಧ ಸಂಪ್ರದಾಯದ ಪ್ರಕಾರ, ಬುದ್ಧನು ಜ್ಞಾನೋದಯವಾದ ನಂತರ, ಅವನ ದೇಹದಿಂದ ಐದು ಬಣ್ಣದ ದೀಪಗಳು ಮಳೆಬಿಲ್ಲಿನಂತೆ ಹೊರಹೊಮ್ಮಿದವು ಎಂದು ನಂಬಲಾಗಿದೆ.ಈ ಐದು ಬಣ್ಣ ಬುದ್ಧನ ಜ್ಞಾನೋದಯ ಮತ್ತು ಧರ್ಮದ ಪರಿಪೂರ್ಣತೆ ಪ್ರತಿನಿಧಿಸುತ್ತವೆ. ಈ ಆಧಾರದ ಮೇಲೆ ಬೌದ್ಧರಿಗಾಗಿ ಸಾಮೂಹಿಕ ಧರ್ಮ ಧ್ವಜವನ್ನು ರಚಿಸುವ ಕಲ್ಪನೆ ಹುಟ್ಟಿಕೊಂಡಿತು.

ಈ ಧ್ವಜವು ಸಾಮಾನ್ಯವಾಗಿ ಆರು ಲಂಬ ಪಟ್ಟೆಗಳನ್ನು ಹೊಂದಿರುತ್ತದೆ. ನೀಲಿ ಬಣ್ಣ  ಸ್ನೇಹ, ಸಹಾನುಭೂತಿ, ದಯೆ, ಹಳದಿ - ಮಧ್ಯಮ ಮಾರ್ಗ, ಧರ್ಮದ ಬೋಧನೆ, ಕೆಂಪು - ಪ್ರಯತ್ನ, ಅಭ್ಯಾಸ, ಜ್ಞಾನ, ಬಿಳಿ-ಶುದ್ಧತೆ, ವಿಮೋಚನೆ, ಸತ್ಯ, ಕಿತ್ತಳೆ - ನಿರಾಸಕ್ತಿ, ಲೈಂಗಿಕತೆಯಿಲ್ಲದಿರುವಿಕೆ, ಈ ಐದು ಬಣ್ಣಗಳ ಸಂಯೋಜನೆ - ಬುದ್ಧ ತಥಾಗತನ ಪರಿಪೂರ್ಣ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ. ಐದು ಲಂಬ ಬಣ್ಣಗಳು ಭಿಕ್ಷು ಸಂಘದ ನಿಯಮಗಳು ಮತ್ತು ಐದು ಅಡ್ಡ ಬಣ್ಣಗಳು ಗೃಹಸ್ಥರು ಆಚರಿಸಬೇಕಾದ ಐದು ನಿಯಮಗಳನ್ನು ಸಂಕೇತಿಸುತ್ತವೆ ಎಂದರು.

೧೯ನೇ ಶತಮಾನದ ಕೊನೆಯಲ್ಲಿ ಶ್ರೀಲಂಕಾದಲ್ಲಿ ಬೌದ್ಧಧರ್ಮವು ತೀವ್ರ ಬಿಕ್ಕಟ್ಟಿನಲ್ಲಿ ಇದ್ದಾಗ ಬೌದ್ಧ ಪುನರುಜ್ಜೀವನ ಚಳುವಳಿ ಪ್ರಾರಂಭವಾಯಿತು. ನಿವೃತ್ತ ಕರ್ನಲ್ ಹೆನ್ರಿ ಸ್ಟೀಲ್ ಓಲ್ಕಾಟ್ ಈ ಚಳುವಳಿಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ೧೮೮೫ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ರೂಪುಗೊಂಡ ಬೌದ್ಧ ಸಮಿತಿಯು ಪಂಚಶೀಲ ಧ್ವಜವನ್ನು ವಿನ್ಯಾಸಗೊಳಿಸಿತು. ೧೮೮೫ರ ಏಪ್ರಿಲ್ ೨೦ ರಂದು, ಬುದ್ಧ ಪೂರ್ಣಿಮೆ ದಿನದಂದು ಶ್ರೀಲಂಕಾದ ಕೋಟಹೇನಾ ಪ್ರದೇಶದಲ್ಲಿ ಪಂಚಶೀಲ ಧ್ವಜವನ್ನು ಮೊದಲ ಬಾರಿಗೆ ಅಧಿಕೃತವಾಗಿ ಹಾರಿಸಲಾಯಿತು.೧೯೫೦ರಲ್ಲಿ, ಶ್ರೀಲಂಕಾದಲ್ಲಿ ನಡೆದ "ವಿಶ್ವ ಬೌದ್ಧರ ಫೆಲೋಶಿಪ್"ನಲ್ಲಿ ಧ್ವಜವನ್ನು ಅಧಿಕೃತ ಬೌದ್ಧ ಧ್ವಜವೆಂದು ಘೋಷಿಸಲಾಯಿತು.

ಪಂಚಶೀಲ ಧ್ವಜವು ಬಟ್ಟೆಯ ತುಂಡು ಅಲ್ಲ. ಇದು ಮನಸ್ಸನ್ನು ಶುದ್ಧೀಕರಿಸುವ ಸಂಕೇತವಾಗಿದೆ. ಪಂಚಶೀಲ ನಿಯಮಗಳು ಧಾರ್ಮಿಕ ಸಂಹಿತೆಯಲ್ಲ.ಅವು ಮಾನವೀಯತೆಗಾಗಿ ವಿನ್ಯಾಸಗೊಳಿಸಲಾದ ಜೀವನದ ತತ್ವಗಳಾಗಿವೆ. ಈ ಜನವರಿ ೮ ಪಂಚಶೀಲ ಧ್ವಜವನ್ನು ಹಾರಿಸುವುದಷ್ಟೇ ಅಲ್ಲ, ನಮ್ಮ ಜೀವನದಲ್ಲಿ ಪಂಚಶೀಲವನ್ನು ಜಾರಿಗೆ ತರುವ ನಿಜವಾದ ದಿನವಾಗಬೇಕು ಎಂದರು.

ನಿವೃತ್ತ ಸಬ್‌ಇನ್ಸ್ಪೆಕ್ಟರ್ ಕೃಷ್ಣಪ್ಪ, ಪಂಚಶೀಲ ಧ್ವಜವು ಬೌದ್ಧ ಧಮ್ಮವನ್ನು ಸಂಕೇತಿಸಲು ವಿನ್ಯಾಸಗೊಳಿಸಲಾದ ಧ್ವಜ.ಇದು ಕೇವಲ ಧಾರ್ಮಿಕ ಧ್ವಜವಲ್ಲ,ಕರುಣೆ, ಬುದ್ಧಿವಂತಿಕೆ, ಸಮಾನತೆ, ಅಹಿಂಸೆ ಮತ್ತು ಸಾವಧಾನತೆಯಂತಹ ಸಾರ್ವತ್ರಿಕ ಮಾನವ ಮೌಲ್ಯಗಳ ಸಂಕೇತವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಎಸ್‌ಐ ಮಹಿಳಾ ಘಟಕದ ಅಧ್ಯಕ್ಷ ಶಕುಂತಲಮ್ಮ , ಗಿರಿಜಾ, ಉಪನ್ಯಾಸಕ ಈ. ನಾಗೇಂದ್ರಪ್ಪ, ಶಿಕ್ಷಕಿ ಲಾವಣ್ಯ, ಉಷಾ, ಪುಷ್ಪಾ, ಶಾಂತಾ, ಬನ್ನಿಕೊಡ ರಮೇಶ್, ಸಚಿನ್ ಗೌತಮ್ ಇತರರಿದ್ದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು