Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಕರ್ತರು ಬಿಪಿಎಲ್ ಭಾರತ ಗಮನಿಸಿ ವರದಿ ಮಾಡಬೇಕು

Advertisement
ಚಂದ್ರವಳ್ಳಿ ನ್ಯೂಸ್, ತುಮಕೂರು:
ಸಂವಿಧಾನದ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವಂತಹ ಸನ್ನಿವೇಶಗಳು
, ಘಟನೆಗಳು ವರದಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಪತ್ರಕರ್ತರು ಐಪಿಲ್ ಭಾರತ ಬಿಟ್ಟು ಬಿಪಿಎಲ್ ಭಾರತದ ಕಡೆ ಗಮನ ಹರಿಸಬೇಕಾಗಿದೆ, ಪಿ.ಸಾಯಿನಾಥ್ ರವರು ಪ್ರತೀ ಬಾರಿ ಪತ್ರಕರ್ತರಿಗೆ ಹೇಳುವ ಕಿವಿಮಾತಿದು ಎನ್ನುವ ಉಲ್ಲೇಖದೊಂದಿಗೆ ಮಾಧ್ಯಮ ತಜ್ಞರಾದ ಜಿ.ಎನ್ ಮೋಹನ್‌ರವರು ವಿಚಾರ ಮಂಡಿಸಿದರು.

೩೯ನೆಯ ರಾಜ್ಯ ಪತ್ರಕರ್ತರ ಸಮ್ಮೇಳನದ ವಿಚಾರ ಗೋಷ್ಟಿಯಲ್ಲಿ ಸಂವಿಧಾನ ಮತ್ತು ಮಾಧ್ಯಮಕುರಿತು ವಿಷಯ ಮಂಡಿಸಿದ ಅವರು ಇಂದು ಮಾಧ್ಯಮ ಕೇವಲ ಮಾಧ್ಯಮವಾಗಿ ಉಳಿದಿಲ್ಲ, ಸಂವಿಧಾನ ಜನಸಾಮಾನ್ಯರಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳಂತೆಯೇ ಪತ್ರಕರ್ತರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಸಂವಿಧಾನ ಹೇಗೆ ಮಾಧ್ಯಮವನ್ನು ರಕ್ಷಿಸುತ್ತದೆಯೋ ಹಾಗೆಯೇ ಮಾಧ್ಯಮವೂ ಸಂವಿಧಾನವನ್ನು ರಕ್ಷಿಸಬೇಕು ಎಂದರು.

ಇಡೀ ಜಗತ್ತಿನಲ್ಲಿ ಅಮೇರಿಕದಲ್ಲಿ ಮಾತ್ರ ಮಾಧ್ಯಮಕ್ಕೆ ಸಂವಿಧಾನದ ರಕ್ಟಣೆ ಇದೆ. ಬೇರೆ ರಾಷ್ಟ್ರಗಳಲ್ಲಿ ಇಲ್ಲ. ಜನರ ಪ್ರತಿನಿಧಿಯಾಗಿ ಕೆಲಸ ಮಾಡುವ ಮಾಧ್ಯಮಕ್ಕೆ ಸಾಮಾನ್ಯರಿಗೆ ಇರುವಂತೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ೧೯ (೧) (ಎ)ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಎಂದರು. ಕೆಲವು ಪ್ರಕರಣಗಳ ಉದಾಹರಣೆಗಳನ್ನು ನೀಡುವುದರ ಮೂಲಕ ಅವರು ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮ ಮಿತ್ರರು ಯಾವ ವಿಷಯಗಳ ಕಡೆ ಹೆಚ್ಚು ಗಮನ ಹರಿಸಬೇಕು ಎನ್ನುವುದನ್ನು ವಿವರಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಮತ್ತು ಶಾಸಕ ಬಿಆರ್  ಪಾಟೀಲ್ ಅವರು ಮಾತನಾಡಿದ್   ಪತ್ರಿಕೆಗಳು ಚಳುವಳಿಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದವು ೮೦ರ ದಶಕದಲ್ಲಿ ರೈತ ಚಳುವಳಿ ದಲಿತ ಚಳುವಳಿ ಸೇರಿದಂತೆ ಇತರೆ ತಿಳುವಳಿಗಳು ಬಹಳ ದೊಡ್ಡದಾಗಿ ಬೆಳೆಯಲು ಅನುಕೂಲಕರವಾಗಿದ್ದು ಆದರೆ ಇಂದು ಪತ್ರಿಕೆಗಳು ಉದ್ಯಮವಾಗಿ ಬದಲಾದ ನಂತರ ಚಳುವಳಿಗಳಿಗೆ ಮಾಧ್ಯಮಗಳಲ್ಲಿ ಅಂತಹ ಮಹತ್ವ ಸಿಗುತ್ತಿದ್ದವು ಇಂದು  ಇಂತಹ ಚಳುವಳಿಗಳು ಹೆಸರಿಲ್ಲದೆ ಹೋಗಿವೆ ಎಂದು ತಿಳಿಸಿದರು.

ಟೆಲಕ್ಸ್ ರವಿ ಅವರು ಮಾತನಾಡಿ  ಗಾಂಧಿ ಮತ್ತು ಅಂಬೇಡ್ಕರ್ ಅವರು  ಪತ್ರಿಕೋದ್ಯಮದ ವೃತ್ತಿ ಬದುಕನ್ನು ಕಂಡವರು  ಅಂಬೇಡ್ಕರ್ ಅವರು ಕಾನೂನು ಮಂತ್ರಿಗಳಾಗಿದ್ದಾಗ ಹಿಂದೂ ಕೋಡ್ ಬಿಲ್ ಗೆ  ಸೋಲಾದ ಸಂದರ್ಭದಲ್ಲಿ ಅಲ್ಲಿಂದ  ಹೊರ ಬಂದ ಅವರು  ಮರುದಿನ ಸುದ್ದಿಗೋಷ್ಠಿಯಲ್ಲಿ  ಊಹ.ಪೋಹಗಳಿಗೆ ಆಸ್ಪದ ಕೊಡದೆ ರಾಜೀನಾಮೆ ಇಂದಿನ ಕಾರಣಗಳನ್ನು ತಿಳಿಸಿದರು.

  ಸತ್ಯ ಜನರಿಗೆ ತಿಳಿಯಬೇಕೆಂಬುದು ಇದರ ಆಶಯ ಆಗಿತ್ತು  ಇಂದಿಗೂ ಕೂಡ ಮಾಧ್ಯಮಗಳು ಜನರಿಗೆ ಸತ್ಯತೆಯನ್ನು ತಿಳಿಸಬೇಕು ಎಂಬುದೇ ಇದರ  ಉದ್ದೇಶವಾಗಿತ್ತು ಅದೇ ರೀತಿಯಲ್ಲಿ ಇಂದಿನ ಪತ್ರಕರ್ತರುಗಳು ಊಹಾಪೋಕದ ವಿಚಾರಗಳಿಗೆ ಮಣೆ ಹಾಕದೆ ಸತ್ಯತೆ ಸುದ್ದಿಯನ್ನು ಪ್ರಸರಿಸಬೇಕು ಎಂದು ತಿಳಿಸಿದರು.

ಎನ್ ರವಿಕುಮಾರ್ ಅವರು ವಿಚಾರ ಗೋಷ್ಠಿಯ ಮುನ್ನ ಪೂರಕ ಭಾಷಣ ಮಾಡಿದರೆ, ಆಳಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಆರ್. ಪಾಟೀಲ್ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಎ.ಎಸ್. ಪೊನ್ನಣ್ಣ ಅವರು ಬಾಗವಹಿಸಿದ್ದರು. ಸಾ.ಚಿ ರಾಜ್ ಕುಮಾರ್ ಅವರು ಸ್ವಾಗತ ಕೋರಿದರೆ ಶ್ಯಾ.ನ. ಪ್ರಸನ್ನ ಮೂರ್ತಿ ಅವರು ವಂದಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ