Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕನಕ ಜಯಂತಿ ವಿಭಿನ್ನವಾಗಿ ಆಚರಣೆ-ಬಿಟಿ ಜಗದೀಶ್

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ನ.18 ರಂದು ನಗರದಲ್ಲಿ ಆಚರಣೆ ಕನಕಶ್ರೀ
, ಸಮಾಜದ ಸುಧಾಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನಕದಾಸರ ಜಯಂತಿಯನ್ನು ಮುಂದಿನ ದಿನದಲ್ಲಿ ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಗ್ರಾಮ ಹೋಬಳಿ ಮಟ್ಟದಲ್ಲಿಯೂ ಸಹಾ ಮಾಡುವ ಬಗ್ಗೆ ಸಂಘ ಆಲೋಚನೆ ನಡೆಸುತ್ತಿದೆ ಇದಕ್ಕೆ ಬೇಕಾದ ತಯಾರಿ ಮಾಡಲಾಗುತ್ತಿದೆ. ಇದ್ದಲ್ಲದೆ ನಮ್ಮ ಸಮಾಜದ ಜನಗಣತಿಯನ್ನು ಸಹಾ ಪ್ರಾರಂಭ ಮಾಡಲಾಗುತ್ತದೆ. ಇದರೊಂದಿಗೆ ಸಮಾಜದ ಅಭೀವೃದ್ದಿಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ನ. ೧೮ ರಂದು ಜಿಲ್ಲಾಡಳಿತ, ಜಿಲ್ಲಾ ಕುರುಬರ, ತಾಲ್ಲೂಕು, ಮಹಿಳಾ ಕನಕ ನೌಕರರ ಹಾಗೂ ಸಮಾಜದ ಇತರೆ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಕನಕದಾಸ ಜಯಂತ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೯.೩೦ಕ್ಕೆ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ಪ್ರತಿಮೆಯ ಬಳಿ ಶ್ರೀ ಈಶ್ವರಾನಂದ ಶ್ರೀಗಳು ಮಾಲಾರ್ಪಣೆಯನ್ನು ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಈ ಮೆರವಣಿಗೆಯಲ್ಲಿ ಡೊಳ್ಳು, ಭಜನಾ ತಂಡ, ಸೋಬಾನೆ ತಂಡ, ಗೊರವರ ತಂಡ ನಂಧಿಧ್ವಜ, ಕರಡಿ ಚಮ್ಮಾಳ, ಕೋಲಾಟದಂತಹ ಸಾಂಸ್ಕೃತಿಕ ತಂಡದೊಂದಿಗೆ ಮರೆವಣಿಗೆಯೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಿ ಗಾಂಧಿವೃತ್ತ, ಮೈಸೂರು ಬ್ಯಾಂಕ್ ವೃತ್ತ, ಮಾರ್ಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತರಾಸು ರಂಗಮಂದಿರವನ್ನು ತಲುಪಲಿದೆ.

ತರಾಸು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಬಿ.ಕೆ.ರವಿ ಕನಕದಾಸರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಂಘದಿಂದ ನೀಡುವ ಕನಕಶ್ರೀ ಪ್ರಶಸ್ತಿಗೆ ವೀರಶೈವ ಸಮಾಜದ ಮುಖಂಡರಾದ ಷಣ್ಮುಖಪ್ಪ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸತೀಶ್, ಸಮಾಜ ಸೇವೆಯಲ್ಲಿ ಲಿಂಗವ್ವ ನಾಗತಿಹಳ್ಳಿಯ ತಿಪ್ಪೇಸ್ವಾಮಿ, ಸರ್ಕಾರಿ ನೌಕರರಲ್ಲಿ ಚೋಳಗಟ್ಟದ ಪಿಡಿಓ  ರೂಪಕುಮಾರಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಜಗದೀಶ್ ತಿಳಿಸಿದರು.

ನ. ೧೮ ರ ಸಂಜೆ ೬.೩೦ಕ್ಕೆ ಕನಕ ವೃತ್ತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಪತ್ರಿಕಾರಂಗದಲ್ಲಿ ಮಾಲತೇಶ್ ಆರಸ್, ಶಿಕ್ಷಣ ಕ್ಷೇತ್ರದಲ್ಲಿ ಯೋಗೀಶ್ ಸಹಾದ್ರಿ, ಪರಿಸರ ಕ್ಷೇತ್ರದಲ್ಲಿ ಮಲ್ಲಿಕಾರ್ಜನಯ್ಯ, ಆರೋಗ್ಯವೇ ಭಾಗ್ಯ ಸಂಘದ ಅಧ್ಯಕ್ಷ ಪರಶುರಾಮ್, ಕೃಷಿ ಕ್ಷೇತ್ರದಲ್ಲಿ ಕ್ಯಾದಿಗೆರೆಯ ರೇಣುಕಾ ರಾಜ್ ರವರನ್ನು ಸನ್ಮಾನಿಸಲಾಗುವುದು.

ಜೀ.ಕನ್ನಡ ಸರಿಗಮಪ ಮತ್ತು ಜೋಡಿ ನಂ೧ರ ಕಂಬದ ರಂಗಯ್ಯ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಮ್ಮ ಸಮಾಜದ ಜನಗಣತಿಯನ್ನು ಸಹಾ ಪ್ರಾರಂಭ ಮಾಡಲಾಗುತ್ತದೆ. ಇದರೊಂದಿಗೆ ಸಮಾಜದ ಅಭಿವೃದ್ದಿ ಮಾಡಲಾಗುತ್ತದೆ ಎಂದು ಜಗದೀಶ್ ತಿಳಿಸಿದರು.

ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಎಚ್,ಮಂಜಪ್ಪ ಮಾತನಾಡಿ, ಸಮಾಜ ಸಾಧಕರಾದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಭರಮಸಾಗರದ ಪಿಎಸ್.ಐ ಸುರೇಶ್, ಸಾಹಿತಿ ಸುಭಾಷ ಚಂದ್ರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ರಶ್ಮಿ ಮಲ್ಲಪ್ಪ, ಸಮಾಜ ಸೇವೆಯಲ್ಲಿ ಎಂ.ವಿ.ಮಾಲತೇಶ್, ಕಾರ್ಮಿಕ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಆರ್ ಹಾಗೂ ಕೃಷಿ ಕ್ಷೇತ್ರದಲ್ಲಿ ಜಗನ್ನಾಥ್ ರವರಿಗೆ ಸನ್ಮಾನ ಮಾಡಲಾಗುವುದು ಎಂದರು.

ಗೋಷ್ಟಿಯಲ್ಲಿ ಓಂಕಾರ್, ಪ್ರೇಮ್, ಲೋಕೇಶ್, ರಾಜು, ಮಹಾಲಿಂಗಪ್ಪ, ನಾರಾಯಣಗೌಡ, ಉಮೇಶ್ ಮಾಲೇಶ್, ಉಪಸ್ಥಿತರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ