Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ಎಂದೂ ಮುಗಿಯದ ಭಾಷೆ-ಬಸವಕುಮಾರ ಸ್ವಾಮೀಜಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಕನ್ನಡ ಎಂದೂ ಮುಗಿಯದ ಭಾಷೆ. ನಮಗೆ ಭಾವ ಶ್ರೀಮಂತಿಕೆಯನ್ನು ತಂದು ಕೊಟ್ಟದ್ದು ಇದೇ ಕನ್ನಡ ಭಾಷೆ. ಕನ್ನಡಕ್ಕೆ ದೇವ ಭಾಷೆ ಕನ್ನಡವೇ.

ನಾವು ನಮ್ಮ ನಾಡಗೀತೆಯನ್ನು ಹಾಡುತ್ತೇವೆ ಕೇಳುತ್ತೇವೆ. ಆದರೆ ಅದರ ಆಳವನ್ನು ಗಮನಿಸಿರುವುದಿಲ್ಲ. ನಾಡಗೀತೆಯನ್ನು ಬರೀ ಕೇಳುವುದಲ್ಲ ಅದರ ಒಳ ಅರ್ಥವನ್ನು ನಾವು ಗ್ರಹಿಸಬೇಕಿದೆ. ರಾಷ್ಟ್ರ ಕವಿ ಕುವೆಂಪುರವರು ಇಡೀ ನಾಡಗೀತೆಯಲ್ಲಿ ದೇಶದ ಸಮಗ್ರತೆಯನ್ನು ಮತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂಬ ಅವರ ಆಶಯವನ್ನು ನಾಡಗೀತೆಯಲ್ಲಿ ಕಾಣಬಹುದು.

ನಮ್ಮ ಪ್ರಾಚೀನ ಸಾಹಿತ್ಯದ ಸಿಂಹಾವಲೋಕನ ಮಾಡಿದಾಗ ಕವಿಗಳ, ಕಾವ್ಯಗಳನ್ನು ಓದಿದಾಗ ನಮಗೆ ಮೈ ರೋಮಾಂಚನವಾಗುತ್ತದೆ. ನಮ್ಮ ಆಲೋಚನೆಗಳಿಗೆ ಉತ್ಸಾಹ ನೀಡುವ ಭಾಷೆ ಕನ್ನಡ. ನಮ್ಮ ಭಾಷೆ ಶ್ರೀಮಂತಗೊಳ್ಳಲು ಎರಡು ಧರ್ಮಗಳು ಪ್ರಮುಖ ಕಾರಣ ಒಂದು ಜೈನ ಧರ್ಮ ಮತ್ತೊಂದು ಲಿಂಗಾಯತ ಧರ್ಮ. ಜೈನ ಧರ್ಮದ ಕವಿಗಳಾದ ಆದಿ ಕವಿ ಪಂಪ, ರನ್ನ, ನಾಗಚಂದ್ರ ಮೊದಲಾದವರು ಕನ್ನಡದಲ್ಲಿ ಬರೆದು ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

 ನಂತರದಲ್ಲಿ ೧೨ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಗೆ ಘನತೆ ತಂದರು. ನಮ್ಮ ನೋವು, ಸಮಸ್ಯೆಗಳಿಗೆ ಸ್ಪಂದಿಸುವ ಸಾಹಿತ್ಯವನ್ನು ರಚಿಸಿದವರು ಜಿ.ಎಸ್.ಶಿವರುದ್ರಪ್ಪನವರು. ಕನ್ನಡ ನiಗೆ ಸಂತೋಷ ನೀಡುವ ಭಾಷೆ. ವಿದ್ಯಾರ್ಥಿಗಳು ಕನ್ನಡಕ್ಕೆ ಒತ್ತು ನೀಡಬೇಕು ಎಂದು ನುಡಿದರು.

ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಕನ್ನಡವನ್ನು ನಾವು ಪ್ರತಿದಿನ ಬಳಸಬೇಕು. ಇಂತಹ ಉತ್ಸವಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು, ಅದು ನಿತ್ಯೋತ್ಸವ ಆಗಬೇಕು. ಕನ್ನಡ ನಮ್ಮ ಜೀವನದ ವಿಧಾನವಾಗಬೇಕು.

ನಮ್ಮ ಉಸಿರಾಗಬೇಕು. ಈ ನಾಡಿನಲ್ಲಿ ಹುಟ್ಟಿರುವ ನಾವುಗಳೇ ಪುಣ್ಯವಂತರು. ಇಡೀ ಜಗತ್ತಿಗೆ ಒಳಿತಾಗಲೀ ಎಂದು ಸಂದೇಶ ನೀಡಿದ್ದು ಇದೇ ಕನ್ನಡ ನೆಲದ ಬಸವಕಲ್ಯಾಣದಿಂದ. ಬಸವಣ್ಣನವರು ಲಿಂಗಭೇದ, ಜಾತಿಭೇದ, ವಯಸ್ಸಿನ ಭೇದವನ್ನು ತೊಲಗಿಸಿ ಸಮಸಮಾಜದ ಪರಿಕಲ್ಪನೆ ಮೂಡಿಸಿದ್ದು ಇದೇ ಕನ್ನಡದ ನೆಲದಿಂದ.

ಸರ್ವರಿಗೂ ಸಮಪಾಲು ಸಮಬಾಳು ಬಯಸಿದ ಧರ್ಮ, ಪ್ರಜಾಪ್ರಭುತ್ವದ ಆಲೋಚನೆ ಮತ್ತು ಪರಿಕಲ್ಪನೆ ಹುಟ್ಟಿದ್ದು ನಮ್ಮ ಕರ್ನಾಟಕದ ಬಸವಕಲ್ಯಾಣದಲ್ಲಿ. ಅತಿ ದೊಡ್ಡ ಇತಿಹಾಸವುಳ್ಳ ಭಾಷೆ ಕನ್ನಡ. ಶಿವರಾಂ ಕಾರಂತರು ಹೇಳಿರುವಂತೆ ಜಗತ್ತಿನ ಸಾಹಿತ್ಯಕ್ಕೆ ಕನ್ನಡದ ದೊಡ್ಡ ಕೊಡುಗೆಯೆಂದರೆ ಅದುವೇ ವಚನ ಸಾಹಿತ್ಯ. ಗೋಲ್ ಗುಂಬಜ್, ಹಂಪಿ ಮುಂತಾದವು ನಮ್ಮ ನಾಡಿನ ಕಲಾ ಸಂಸ್ಕೃತಿಯ ಸಂಕೇತಗಳಾಗಿವೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಭರತ್ ಪಿ ಬಿ ಮಾತನಾಡಿ, ವಿದ್ಯಾರ್ಥಿಗಳೇ ಮುಂದೆ ನಿಂತು ಕನ್ನಡ ರಾಜ್ಯೋತ್ಸವ ಆಯೋಜಿಸಿ ಕಾಲೇಜಿನಲ್ಲಿ ಕನ್ನಡದ ವಾತಾವರಣ ಸೃಷ್ಟಿಸಿದ್ದಾರೆ. ಕನ್ನಡದ ಕಂಪು ಹರಿಸಿದ್ದಾರೆ. ಕನ್ನಡದ ನೆಲ, ಜಲ, ಭಾಷೆ ಅತ್ಯಂತ ಶ್ರೀಮಂತವಾದದು. ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರು ಸಾಧನೆ ಮೆರೆದಿದ್ದಾರೆ.

ನಾವು ನವೆಂಬರ್ ಕನ್ನಡಿಗರಾಗದೇ ನಮ್ಮ ನಿತ್ಯ ಜೀವನದಲ್ಲಿ ಕನ್ನಡಕ್ಕೆ ಮಹತ್ವ ನೀಡಬೇಕು. ಕನ್ನಡ ಉಳಿಸಬೇಕು. ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ನಮ್ಮ ನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ನುಡಿದರು.

ಚಲನಚಿತ್ರ ನಟ ಪೃಥ್ವಿ ಶಾಮನೂರು ಮಾತನಾಡಿ, ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ. ನನ್ನ ಚಿತ್ರಗಳಿಗೆ ಚಿತ್ರದುರ್ಗದ ಜನತೆ ಉತ್ತಮ ಪ್ರೋತ್ಸಾಹ ನೀಡಿದ್ದಾರೆ.  ಈ ಅಭಿಮಾನ ನನ್ನ ಮುಂದಿನ ಚಿತ್ರಗಳಿಗೂ ಮುಂದುವರೆಯಲಿ ಎಂದು ತಿಳಿಸಿದರು.

ವಿವಿಧ ಇಲಾಖೆ ಮುಖ್ಯಸ್ಥರಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಕೃಷ್ಣಾರೆಡ್ಡಿ ಕೆ.ಆರ್., ಡಾ. ಸಿದ್ಧೇಶ್ ಕೆ ಬಿ, ಡಾ. ಶ್ರೀಶೈಲ ಜೆ ಎಂ, ಡಾ.ಶಿವಕುಮಾರ್ ಎಸ್.ಪಿ, ಡಾ.ಲೋಕೇಶ್ ಹೆಚ್ ಜೆ., ಪ್ರೊ.ಶಶಿಧರ್ ಎ.ಪಿ., ಡಾ.ನಿರಂಜನ್ ಈ, ಡಾ.ಕೆ.ಕುಮಾರಸ್ವಾಮಿ ಉಪಸ್ಥಿತರಿದ್ದರು.

ಆಕಾಂಕ್ಷಾ ಪ್ರಾರ್ಥಿಸಿದರು. ನಾಗಸಾರಿಕ ಸ್ವಾಗತಿಸಿದರು. ರುಚಿತಾ ರಚನಾ ನಿರೂಪಿಸಿದರು. ಚಂದನ ವಂದಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ