E-PAPER
19 Nov 2026, 08:07:32 AM|
Gold₹13444/gGold24K ₹13,444/g - 22K ₹12,313/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗ್ರಾಮೀಣ ಆಸ್ತಿ ಮಾಲೀಕರಿಗೆ 'ಭೂ-ಗ್ಯಾರಂಟಿ ಇ-ಸ್ವತ್ತು ಅಭಿಯಾನ'ಕ್ಕೆ ಚಾಲನೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮೀಣ ಭಾಗದ ಆಸ್ತಿಗಳಿಗೆ ಇ-ಸ್ವತ್ತು ನೀಡುವಲ್ಲಿನ ವಿಳಂಬವನ್ನು ತಪ್ಪಿಸಲು ರಾಜ್ಯ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತಂದಿದ್ದು
, ಈ ವರ್ಷದ ಅಂತ್ಯದೊಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಪ್ರಕಟಿಸಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ 'ಭೂ-ಗ್ಯಾರಂಟಿ ಇ-ಸ್ವತ್ತು ಅಭಿಯಾನ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದು ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಎಂದರು.

ರಾಜ್ಯದ ಸುಮಾರು 1.50 ಕೋಟಿ ಗ್ರಾಮೀಣ ಆಸ್ತಿಗಳ ಪೈಕಿ ಬಾಕಿ ಇರುವ 80 ಲಕ್ಷ ವ್ಯಾಜ್ಯರಹಿತ ಆಸ್ತಿಗಳಿಗೆ 2027ರ ಅಂತ್ಯದೊಳಗೆ ಇ-ಸ್ವತ್ತು ನೀಡಲು ಎಲ್ಲಾ 5,927 ಗ್ರಾಮ ಪಂಚಾಯಿತಿಗಳಿಗೆ ಗುರಿ ನಿಗದಿಪಡಿಸಲಾಗಿದೆ.

ದಾಖಲೆ ಇಲ್ಲದವರಿಗೂ ಅವಕಾಶ: ಪ್ರವಾಹ, ಬೆಂಕಿ ಅಥವಾ ಗೆದ್ದಲು ಹಿಡಿದು ಆಸ್ತಿ ದಾಖಲೆಗಳು ನಾಶವಾಗಿದ್ದರೆ, 07.04.2025ರ ಪೂರ್ವದ ವಿದ್ಯುತ್ ಬಿಲ್ ಹಾಗೂ ಸ್ಥಳ ಮಹಜರು ಆಧರಿಸಿ (21 ದಿನಗಳ ಆಕ್ಷೇಪಣೆ ಅವಧಿ ನಂತರ) ಇ-ಸ್ವತ್ತು ನೀಡಲಾಗುವುದು.

ಕಣಮನೆ, ಮನೆದಳಕ್ಕೂ ಅನ್ವಯ: ಮಲೆನಾಡು ಭಾಗದ ಕಣಮನೆ, ಮನೆದಳ ಹಾಗೂ ಕೃಷಿ ಜಮೀನಿನಲ್ಲಿರುವ 4,000 ಚದರಡಿಯವರೆಗಿನ ವಾಸದ/ಕೃಷಿ ಕಟ್ಟಡಗಳಿಗೂ ನಿಯಮಾನುಸಾರ ಇ-ಸ್ವತ್ತು ಸಿಗಲಿದೆ.

ಕಂದಾಯ ಭೂಮಿ ಆಸ್ತಿ: ಮೊದಲ ಹಂತದಲ್ಲಿ ಭೂಪರಿವರ್ತನೆ ಆದ (ಬಿ-ಖರಾಬು ಇಲ್ಲದ) ಆಸ್ತಿಗಳಿಗೆ, ಹಾಗೂ ಮುಂದಿನ ದಿನಗಳಲ್ಲಿ ನಿಯಮ ಮಾರ್ಪಾಡು ಮಾಡಿ ಭೂಪರಿವರ್ತನೆ ಆಗದ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗುವುದು.

ತಂತ್ರಜ್ಞಾನ ಮತ್ತು ಸರ್ವೇ: ಸರ್ಕಾರಿ ಜಾಗ ದುರ್ಬಳಕೆ ತಡೆಯಲು 'ಇ-ಸ್ವತ್ತು 3.0' ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದ್ದು, ಇಲಾಖೆಯಲ್ಲೇ ಪ್ರತ್ಯೇಕ ಸರ್ವೇ (ಮೋಜಣಿ) ವಿಭಾಗ ಆರಂಭಿಸಲು ಚಿಂತನೆ ನಡೆದಿದೆ.

ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ ಸಚಿವರು, ಇ-ಸ್ವತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾದರೆ ಸಹಾಯವಾಣಿ: 9483476000 ಸಂಪರ್ಕಿಸಲು ತಿಳಿಸಿದ್ದಾರೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳ್ಳಂಬೆಳಗ್ಗೆ ಮನೆ ಮುಂದೆ ಪ್ರತ್ಯಕ್ಷವಾಗುತ್ತಿವೆ ಹಂದಿ ತಲೆಗಳು ಹಾಗೂ ತ್ಯಾಜ್ಯ:  ನೇಮಕಾತಿ ಪರೀಕ್ಷೆಗಳಲ್ಲಿ ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆ ಮರು ಸೇರ್ಪಡೆಗೆ ಕನ್ನಡಪಕ್ಷ ಆಗ್ರಹಬಸವಣ್ಣ ಕಳ್ಳನೇ? ಸುಳ್ಳುಗಾರನೇ? ಕೊಲೆಗಾರನೇ?: ಡಾ. ಜಿ.ವಿ. ಮಂಜುನಾಥಬುದ್ಧಿ ಬೆಳೆಸುವುದೇಕೆ, ಬುದ್ಧಿವಂತಿಕೆಗೆ ಬದುಕಿನಲ್ಲಿ ಬೆಲೆ ಕೊಡಬಾರದೇ?ಎನ್‌ಕೌಂಟರ್‌ಗೆ ಬಲಿಯಾದ ಲಷ್ಕರ್ ಮೋಸ್ಟ್‌ವಾಂಟೆಡ್‌ಉಗ್ರ ಲತೀಫ್ ಭಟ್ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ; ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಟೀಕೆಸಿದ್ದರಾಮಯ್ಯ ನಮ್ಮ ಎರಡು ಕಣ್ಣುಗಳಿದ್ದಂತೆ, ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಸಚಿವ ಎಂ.ಬಿ. ಪಾಟೀಲ್ಸಿಜೆಐ ವಿರುದ್ಧ ಅಸಭ್ಯ ಟೀಕೆ: ವಕೀಲನಿಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದಿಂದ ನೋಟಿಸ್ ಜಾರಿರಾಜ್ಯದ 5 ಜಿಲ್ಲೆಗಳ ಭ್ರಷ್ಟಾಚಾರಿಗಳ ಮನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ, ಅಳತೆಯಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಸಚಿವ ರಿಜ್ವಾನ್ ಅರ್ಷದ್ ಪತ್ರ