Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಭುತ್ವದ ರಾಜ ನೀತಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಪ್ರಭುತ್ವದ ನೀತಿಯಲ್ಲಿ ಜನಪ್ರತಿನಿಧಿಗಳನ್ನು ಜನರಿಂದ ಜನರಿಗಾಗಿ ಆಯ್ಕೆಯಾದ ಸೇವಕರು ಎಂದು ಪರಿಗಣಿಸಬೇಕು. ಚುನಾವಣೆ ನೀತಿಯಲ್ಲಿ ಗೆದ್ದಿರುವ ಪ್ರತಿನಿಧಿಗಳು ಪ್ರಭುತ್ವದ ಆಡಳಿತ ನೀಡಬೇಕಾಗುತ್ತದೆ. ಚುನಾವಣೆ ಪ್ರಭುತ್ವದ ಆಡಳಿತಕ್ಕೆ ಮೆಟ್ಟಿಲುಗಳು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ನಾನಾ ಬಗೆಯ ತಂತ್ರಗಳನ್ನು ಬಳಸಿಕೊಂಡು ಗೆಲುವು ಸಾಧಿಸಲು ಪ್ರಯತ್ನಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದವು ಹಣ, ಜಾತಿ, ಸುಳ್ಳು  ಆಶ್ವಾಸನೆ ಇವುಗಳೊಂದಿಗೆ ಇನ್ನು ಕೆಲವು ತಂತ್ರ ಕುತಂತ್ರಗಳನ್ನು  ಬಳಸಿ ಗೆದ್ದು ಬೀಗುತ್ತಿದ್ದಾರೆ.

ಮತದಾರರ ಪ್ರಭುಗಳು ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು. ಆದರೆ ಮತದಾನ ಪ್ರಭುಗಳು ಅಭ್ಯರ್ಥಿಯ ಶ್ರೀಮಂತಿಕೆಯ ಲೆಕ್ಕಾಚಾರ, ತನಗೆಷ್ಟು ಲಾಭದಾಯಕ ಎನ್ನುವುದರ ಅನುಗುಣವಾಗಿ ಮತದಾನ ಮಾಡುತ್ತಿದ್ದಾರೆ.‌ಈ ವಿಚಾರದಿಂದ ಪ್ರಭುತ್ವದ ಆಡಳಿತ ಶೋಚನೀಯ ಸ್ಥಿತಿಗೆ ತಲುಪಿದೆ.

ಜನಪ್ರತಿನಿಧಿಗಳಿಗೆ(ರಾಜಕಾರಣಿಗಳಿಗೆ) ವೇತನ ಹಾಗೂ ಪೆನ್ಷನ್ ನೀಡಲು ಕಾರಣವೆಂದರೆ ಸಾರ್ವಜನಿಕ ಕೆಲಸಗಳ ಸಲುವಾಗಿ ಆಯಾ ಪ್ರದೇಶದ ಜನತೆ ಜನಪ್ರತಿನಿಧಿಗಳ ಬಳಿ ಬರುವುದು ಸಹಜ. ಬಂದಂತಹ ಮತದಾರ ಪ್ರಭುಗಳಿಗೆ ಗೌರವದಿಂದ ಕಾಪಿ, ಟೀ,. ತಿಂಡಿ,. ಊಟ ಇನ್ನಿತರೇ ವಿಚಾರದಲ್ಲಿ ಸತ್ಕರಿಸುವುದು ಸಾಮಾನ್ಯ ವಿಷಯ ಇದರೊಂದಿಗೆ ಕ್ಷೇತ್ರದ ಉದ್ದಗಲಕ್ಕೂ  ಜನಪ್ರತಿನಿಧಿಗಳು ಸಂಚರಿಸಬೇಕು. ಈ ಎಲ್ಲಾ ಸೂಕ್ಷ್ಮತೆಯ ವಿಚಾರದಲ್ಲಿ ಜನಪ್ರತಿನಿಧಿಗಳಿಗೆ ಸಂಬಳ ಕೊಡಲಾಗುತ್ತದೆ.

 ಪ್ರಭುತ್ವದ ಸೇವಕರಿಗೆ ವಿದ್ಯಾರ್ಹತೆ ಲೆಕ್ಕವಿಲ್ಲ . ಕಾರಣ ಸೇವೆಯ ಮನೋಭಾವಕ್ಕೆ ವಿದ್ಯೆ ಮಾನದಂಡವಲ್ಲ. ಸೇವೆ ಎಂಬುದು ಮಾನವೀಯತೆಯ ಮನೋಧರ್ಮ ಸೇವೆಗೆ ಬೇಕಿರುವುದು ತಾಳ್ಮೆ, ಕರುಣೆ, ನ್ಯಾಯ, ನೀತಿ, ಧರ್ಮ ಇವುಗಳಲ್ಲಿ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಇದರೊಂದಿಗೆ ಸಾಮಾನ್ಯ ಜ್ಞಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಾನ್ಯತೆ ನೀಡುವ ಮೂಲಕ ಕ್ಷೇತ್ರವನ್ನು ಉನ್ನತಿಗೊಳಿಸಬೇಕು. ಇದು ಕಥೆಯಲ್ಲ ಇದುವೇ ಪ್ರಭುತ್ವದ ರಾಜನೀತಿ. ಲೇಖನ-ರಘು ಗೌಡ 9916101265
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ