ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೌದಪ್ಪ ಹೌದು.. ಡಿಸಿಎಂ ಡಿ.ಕೆ ಶಿವಕುಮಾರ್ ಸಾಹೇಬರೇ, ಹೆಚ್.ಡಿ. ಕುಮಾರಸ್ವಾಮಿ ಅವರು ಖಾಲಿ ಟ್ರಂಕ್ ಅನ್ನೋದು ದಿಟವೇ. ಅವರದು ಖಾಲಿ ಕೈ, ತುಂಬಿದ ಹೃದಯ ಎಂದು ಜೆಡಿಎಸ್ ಟಾಂಗ್ ನೀಡಿದೆ.
ನಿಮ್ಮದು ಹಾಗಲ್ಲವಲ್ಲ, ಹೃದಯದ ತುಂಬಾ ಕಾರ್ಕೋಟಕ ವಿಷ. ಕಂಡೋರ ಹಣವನ್ನು ಮತ್ತು ಬಡವರು, ದೀನ ದಲಿತರು, ದುರ್ಬಲರ ಭೂಮಿಯನ್ನು ಹೆದರಿಸಿ ಬೆದರಿಸಿ ಕಿತ್ತುಕೊಂಡು ತುಂಬಿಸಿಕೊಂಡ ಪಾಪದ ಟ್ರಂಕು! ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಈ ಸತ್ಯ ನಿಮಗಷ್ಟೇ ಅಲ್ಲ, ಇಡೀ ನಾಡಿಗೆ, ದೇಶಕ್ಕೇ ತಿಳಿದ ಸತ್ಯ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಮಿಸ್ಟರ್ #ಲೂಟೇಶಿ? ಎಂದು ಜೆಡಿಎಸ್ ಟಾಂಗ್ ನೀಡಿದೆ.


