Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತ ಕಾಲೋನಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ ಮಹಾರಾಜರು

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ಟಿಬಿ ವೃತ್ತದ ಆಂಜನೇಯ ದೇವಸ್ಥಾನದ ಹಿಂಭಾಗ ದಲಿತ ಕಾಲೋನಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ ಮಹಾರಾಜರಾದ ಯಧುವೀರ್ ಒಡೆಯರ್ ಮಾತನಾಡಿ ಸಮಸ್ತ ನಾಗರಿಕರಿಗೂ ಸಂವಿಧಾನದಿಂದ ಸಮಾನ ಹಕ್ಕುಗಳಿವೆ. ಯಾರೇ ಅಧಿಕಾರದಲ್ಲಿರಲಿ ನಾಗರೀಕರಿಗೆ ಸಮಾನ ಹಕ್ಕುಗಳಿರುತ್ತವೆ. ಅರ್ಧ ಸತ್ಯ ಮಂಡಿಸುವ ಮೂಲಕ ಅಪಪ್ರಚಾರ ಮಾಡುವ ಮಂದಿಗೆ ನಾವು ಉತ್ತರ ಕೊಡಬೇಕಿದೆ. ಕಾಂಗ್ರೆಸ್ ನವರು ಅಪಪ್ರಚಾರ ಮಾಡಿ ಸಂವಿಧಾನ ಬದಲಿಸುತ್ತಾರೆ ಎಂದರು .


ನಮ್ಮ ಪಕ್ಷದ ನಾಯಕರು ಎಂದೂ ಅಧಿಕೃತವಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಪಕ್ಷದ ಲಾಭಕ್ಕಾಗಿ ಸಂವಿಧಾನ ಬಳಸಿರುವವರು ಯಾರು ಸಂವಿಧಾನದ ಮೂಲಕ ಜನರನ್ನು ಸುಭದ್ರವಾಗಿಟ್ಟಿರುವವರು ಯಾರು ಎಂದು ಜನ ನೋಡಿದ್ದಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ತಿದ್ದುಪಡಿಯ ಮೂಲಕ ಅಧಿಕಾರ ಉಳಿಸಿಕೊಳ್ಳುವ ಕೆಲಸ ಮಾಡಿದವರ ಬಗ್ಗೆ ಜನಕ್ಕೆ ತಿಳಿದಿದೆ.ಅಗತ್ಯ ಇರುವುದಕ್ಕಿಂತ ಹೆಚ್ಚಿನ ತಿದ್ದುಪಡಿ ಮಾಡಿದರು.

ಅದು ಸಂವಿಧಾನದ ಮೇಲೆ ನಡೆದ ಹಲ್ಲೆಯಾಗಿತ್ತು. ತಿದ್ದುಪಡಿ ಮಾಡುವ ನಿಯಮಗಳನ್ನೇ ತಿದ್ದುಪಡಿ ಮಾಡಿದರು. ಸಂಪೂರ್ಣ ಭಾರತದ ಅಭಿವೃದ್ಧಿ ನಮ್ಮ ಗುರಿ. 25 ಕೋಟಿ ಜನರನ್ನು ಪ್ರಧಾನಿಗಳು ಬಡತನದಿಂದ ಆಚೆ ತಂದಿದ್ದಾರೆ. ಮುಂದಿನ ಎರಡು ದಶಕಕ್ಕೆ ಭಾರತ ಎಷ್ಟು ಬಲಿಷ್ಠ ಇರಬೇಕೆಂದು ಪ್ರಧಾನಿ ಯೋಚಿಸಿದ್ದಾರೆ. ಮುಂಬರುವ ಪೀಳಿಗೆಯ ದೃಷ್ಟಿಯಿಂದ ನೀವೆಲ್ಲಾ ನಮಗೆ ಕೈಜೋಡಿಸಿ ಎಂದರು.

ವಿಪ ಸದಸ್ಯ ಕೆ ಎಸ್ ನವೀನ್ ಮಾತನಾಡಿ ಬಾಬಾ ಸಾಹೇಬರನ್ನು ಪ್ರತಿನಿತ್ಯ ಪೂಜೆ ಮಾಡಬೇಕು.ನಾವು ರಾಜ್ಯದ ಜಿಲ್ಲೆ, ತಾಲೂಕುಗಳಲ್ಲಿ ಭೀಮ ಸಂಗಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂಬೇಡ್ಕರ್ ರವರನ್ನು ಸೋಲಿಸಿದ್ದನ್ನು ಅವರ ಮೃತದೇಹವನ್ನು ಸಾಗಿಸಲು ಕೊಟ್ಟ ತೊಂದರೆಯನ್ನು ಎಲ್ಲರೂ ಕೇಳಿದ್ದೀರಿ.

ಈ ಕಾರ್ಯಕ್ರಮ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ . ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಜಗಜೀವನ್ ರಾಂ ರವರ ಕೊಡುಗೆ ಯಾರೂ ಮರೆಯಬಾರದು. ಸಂವಿಧಾನಕ್ಕೆ ಗೌರವ ಕೊಡುವಂತಹ ಬದುಕು ಬದುಕೋಣ ಎಂದರು.

ಲೇಖಕ ವಿಕಾಸ್ ಪುತ್ತೂರು ಮಾತನಾಡಿ ಬಾಬಾ ಸಾಹೇಬರು ಎಂದಿಗೂ ರಾಜಕೀಯ ಅಧಿಕಾರ ಪಡೆಯಬಾರದು ಎಂಬುದು ಕಾಂಗ್ರೆಸ್ ನವರ ನಿಲುವಾಗಿತ್ತು.

 ಅಂಬೇಡ್ಕರ್ ರವರ ಬಗ್ಗೆ ಕಾಂಗ್ರೆಸ್ ನವರು ಸಾಕಷ್ಟು ಅಪಪ್ರಚಾರ ಮಾಡಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿದ್ದ ಅಷ್ಟೂ ದಿನವೂ ಬಾಬಾ ಸಾಹೇಬರ ವಿಚಾರ ಧಾರೆಗಳನ್ನು ಕಾಂಗ್ರೆಸ್ ನವರು ವಿರೋಧಿಸುತ್ತಾ ಬಂದರು.ಅವರ ಕಿರುಕುಳಕ್ಕೆ ಬೇಸತ್ತ ಅಂಬೇಡ್ಕರ್ ರವರು ನೆಹರೂ ರವರ ಕ್ಯಾಬಿನೆಟ್ ನಿಂದ ಹೊರ ಬರುತ್ತಾರೆ.

1952 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾಬಾ ಸಾಹೇಬರು ಯಾವುದೇ ಕಾರಣಕ್ಕೂ ಅಂಬೇಡ್ಕರ್ ಗೆಲ್ಲಬಾರದು ಎಂದು ಪ್ರಚಾರ ಮಾಡುತ್ತಾರೆ. ಆನಂತರ ಅವರನ್ನು ರಾಜ್ಯಸಭೆಗೆ ತಂದದ್ದು ಭಾರತೀಯ ಜನಸಂಘ. ಸಂವಿಧಾನವನ್ನು ತಿದ್ದುಪಡಿ ಮಾಡುತ್ತಿರುವುದು ಕಾಂಗ್ರೆಸ್ ನವರು. 50 ಕ್ಕೂ ಹೆಚ್ಚು ಅನುಚ್ಛೆದಗಳನ್ನು ಕಾಂಗ್ರೆಸ್ ನವರು ಬದಲಾಯಿಸಿದ್ದಾರೆ ಎಂದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ