Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಠಾಣೆ ಹಾಡಿನಿಂದ ಜನಮನ ಗೆದ್ದ ಸಂಗೀತ ಸಂಯೋಜಕಿ ಮಾನಸ ಹೊಳ್ಳ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿದ್ದ ಗುರುತಿಸಿಕೊಂಡಿದ್ದ ಮಾನಸ ಹೊಳ್ಳ ಅವರು ಇತ್ತೀಚೆಗೆ ಸಂಗೀತ ನಿರ್ದೇಶಕಿಯಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ  ಅವರು ಸಂಗೀತ ನೀಡಿರುವ ಠಾಣೆ ಚಿತ್ರದ "ಬಾಳಿನಲಿ ಭರವಸೆಯ ಬೆಳಕನು ನೀ ಹೂಡು.." ಎಂಬ ಹಾಡಿಗೆ ಇಡೀ ಕರುನಾಡೇ ಮನಸೋತಿದೆ.


ಎಲ್ಲೆಡೆ ವೈರಲ್ ಆಗಿರುವ,ಅದರಲ್ಲೂ ಪುಟ್ಟ ಮಕ್ಕಳೇ ದನಿಯಾಗಿರುವ ಈ ಹಾಡಿಗೆ ಗೆಳತಿ ರೆಮೋ ಸಾಹಿತ್ಯ ಬರೆದಿದ್ದಾರೆ. ಕರವೇ ರಾಜ್ಯಾಧ್ಯಕ್ಷ‌ನಾರಾಯಣಗೌಡ್ರು ಕೂಡ ಈ ಹಾಡನ್ನು ಮೆಚ್ಚಿ ಹಾಡಿದ ಮಕ್ಕಳು ಹಾಗೂ ಸಂಗೀತ ನಿರ್ದೇಶಕಿಗೆ ಅಭಿನಂದಿಸಿದ್ದಾರೆ.

ಹಿರಿಯ ಕಲಾವಿದ ಶಂಖನಾದ ಅರವಿಂದ್ ಅವರ ಪುತ್ರಿಯಾದ ಮಾನಸ ಗಾಯಕಿ, ಸಂಗೀತ ನಿರ್ದೇಶಕಿ, ಕೀಬೋರ್ಡ್, ಪ್ರೋಗ್ರಾಮರ್ ಮತ್ತು ಸೌಂಡ್ ಇಂಜಿನಿಯರ್ ಆಗಿಯೂ ಸೈ ಎನಿಸಿಕೊಂಡಿದದ್ದು, ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. "ಠಾಣೆ" ಹಾಡಿನ ಯಶಸ್ಸು ಮಾನಸ ಅವರಿಗೆ ಬೆರಳೆಣಿಕೆಯಷ್ಟಿರುವ ಮಹಿಳಾ ಸಂಗೀತ ನಿರ್ದೇಶಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ.

  99, ಅಧ್ಯಕ್ಷ, ಶಿವಲಿಂಗ, ರವಿಕೆ ಪ್ರಸಂಗ, ರಜನಿಕಾಂತ, ಧಮಾಕ, ಸೂಪರ್ ರಂಗ, ಡಾರ್ಲಿಂಗ್ ಸೇರಿದಂತೆ ಹಲವಾರು ಚಿತ್ರಗಳ 500ಕ್ಕೂ ಹೆಚ್ಚು ಗೀತೆಗಳು, ಭಕ್ತಿಗೀತೆಗಳೂ ಸೇರಿದಂತೆ 1500 ಹಾಡುಗಳಿಗೆ ಧ್ವನಿಯಾಗಿರುವ. ಮಾನಸ ಹೊಳ್ಖ ಅವರು ಸಂಗೀತದಲ್ಲೂ ಹಿಂದೆ ಬಿದ್ದಿಲ್ಲ.

  6 ಟು 6, ಕನಸು ಮಾರಾಟಕ್ಕಿದೆ, ಕೆಂಪು ದೀಪ, ಮನಸಾಗಿದೆ. ಮಸಣದ ಹೂವು, ಬಯಲು ಸೀಮೆ ಮತ್ತು ಚಿರತೆ ಬಂತು ಚಿರತೆ ಸೇರಿದಂತೆ ಹಲವಾರು ಚಿತ್ರಗಳಿಗೆ  ಸಂಗೀತ ನೀಡಿರುವ ಮಾನಸ ಹೊಳ್ಳ ಅವರಿಗೆ, ಕನಸು ಮಾರಾಟಕ್ಕಿದೆ ಚಿತ್ರದ ಸಂಗೀತಕ್ಕೆ ಗೋವಾ ಚಿತ್ರೋತ್ಸವದಲ್ಲಿ  ಅತ್ಯುತ್ತಮ ಸಂಗೀತ ನಿರ್ದೇಶಕಿ  ಪ್ರಶಸ್ತಿ ಲಭಿಸಿದೆ. ಜೊತೆಗೆ ಮಸಣದ ಹೂವು ಚಿತ್ರಕ್ಕೆ  ಬೆಂಗಳೂರು ಚಿತ್ರೋತ್ಸವದಲ್ಲಿ ವಿಶೇಷ ಜೂರಿ ಪ್ರಶಸ್ತಿ ಲಭಿಸಿದೆ.



ಇದರ ಜೊತೆಗೆ ವನಜ, ಗಂಡ ಗುಂಡಿ, ಹನಿ ಟ್ರ್ಯಾಪ್, ಪಾರ್ಸೆಲ್, ಚಿರಂಜೀವಿ ನವೀನದಂಥ ವೆಬ್ ಸೀರೀಸ್‌ಹಾಗೂ ವಿವಿಧ ಧಾರಾವಾಹಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ