ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸಾರಿಗೆ ನಿಗಮಗಳಿಗೆ ಐಸಾ ಐಸಾ ಯೋಜನೆ ಕೊಟ್ಟು ಬಸ್‌ಗಳನ್ನು ತಳ್ಳುವಂತೆ ಮಾಡಿರುವ ಭ್ರಷ್ಟ ಸಿದ್ದರಾಮಯ್ಯ ಅವರು ಇದೀಗ ಎಲ್ಲಾ ಹೈಕ್‌ಹೈಕ್‌ಎನ್ನುತ್ತಾ 48% ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡುವ ಮೂಲಕ ಹೈಕ್‌ರಾಮಯ್ಯ ಎನಿಸಿಕೊಂಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಬಸ್‌ಪ್ರಯಾಣವೂ ದುಬಾರಿ ಮೆಟ್ರೋ ಬಲು ದುಬಾರಿ ಆಗಿದೆ. ಜನರಿಗೆ ಅಕ್ಕಿಯನ್ನೂ ಕೊಡುತ್ತಿಲ್ಲ, ಗೃಹ ಲಕ್ಷ್ಮಿ ಹಣವನ್ನು ನೀಡುತ್ತಿಲ್ಲ. ದುಡಿದು ತಿನ್ನೋಣ ಎಂದರೆ ಎಲ್ಲಾ ದರವನ್ನು ಏರಿಕೆ ಮಾಡಿ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ ಕರ್ನಾಟಕ ಕಾಂಗ್ರೆಸ್ ಎಂದು ಬಿಜೆಪಿ ದೂರಿದೆ.


