Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮ ಪಂಚಾಯಿತಿಗಳು ಜನಮೆಚ್ಚುವ ಆಡಳಿತ ನೀಡಲಿ: ಶಾಸಕ ಟಿ.ರಘುಮೂರ್ತಿ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗ್ರಾಮಪಂಚಾಯಿತಿ ಕೇಂದ್ರಗಳು ಜನಸ್ನೇಹಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು
, ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿ, ಚುನಾಯಿತ ಸದಸ್ಯರು ಮತ್ತು ಅಧಿಕಾರಿ ವರ್ಗ ಪರಸ್ವರ ಚರ್ಚೆಯ ಮೂಲಕ ಗ್ರಾಮೀಣ ಭಾಗದ ಸಮಸ್ಯೆ ಹಾಗೂ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸಬೇಕು. iಹಾತ್ಮಗಾಂಧೀಜಿಯವರ ಕನಸು ನನಸು ಮಾಡಲು ಗ್ರಾಮ ಸೇವೆಯಿಂದ ಮಾತ್ರ ಎಂಬ ಸತ್ಯವನ್ನು ನಿರೂಪಿಸುವಂತೆ ಕಾರ್ಯನಿರ್ವಹಿಸಿ ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಶನಿವಾರ ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಯ ೬೫ ಲಕ್ಷ ವೆಚ್ಚದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ, ೬೫ ಲಕ್ಷ ವೆಚ್ಚದ ಎಸ್‌ಎಂಎಫ್ ಘಟಕ, ಲಕ್ಷ್ಮಿಪುರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಅನುದಾನದಡಿ ೨೦ ಲಕ್ಷ ವೆಚ್ಚದ ಶ್ರೀಕೊಲ್ಲಾಪುರದಮ್ಮ ದೇವಸ್ಥಾನ, ಗ್ರಾಮದಲ್ಲಿ ಭೂಮಿ ಪೂಜೆ, ೧೦ ಲಕ್ಷವೆಚ್ಚದಲ್ಲಿ ಹೆಚ್ಚುವರಿ ನೂತನ ಅರಿವು ಗ್ರಂಥಾಲಯ, ಸಿದ್ದಾಪುರ ಗ್ರಾಮದಲ್ಲಿ ೧೦ ಲಕ್ಷವೆಚ್ಚದ  ಈಶ್ವರದೇವಾಲಯದ ಭೂಮಿ ಪೂಜೆ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಮುಖ್ಯಮಂತ್ರಿಗಳ ಅನುದಾನ, ಸರ್ಕಾರ ಹಲವಾರು ಯೋಜನೆಗಳ ಮೂಲಕ ಹಣ ಬಿಡುಗಡೆ ಮಾಡಿದ್ದು ಅವುಗಳನ್ನು ಸೂಕ್ತ ರೀತಿಯಲ್ಲಿ ಜನರ ಹಿತಕ್ಕಾಗಿ ಬಳಸುವ ಕೆಲಸ ನಿರಂತರ ನಡೆಯಬೇಕು. ಯಾವುದೇ ಹಂತದಲ್ಲೂ ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಬಾರದು. ಗ್ರಾಮ ಪಂಚಾಯಿತಿ ಆಡಳಿತ ಜನರ ಮೆಚ್ಚುಗೆ ಪಡೆಯುವ ಮಟ್ಟಿಗೆ ಎಲ್ಲರೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕು, ನೀವು ನೀಡುವ ಸೇವೆಯಿಂದ ಜನರಲ್ಲಿ ಸಂತೃಪ್ತಿ ಭಾವನೆ ಉಂಟಾಗಬೇಕು ಎಂದರು.

ಇಒ ಎಚ್.ಶಶಿಧರ, ನಿರ್ಮಿತಿಕೇಂದ್ರದ ಇಂಜಿನಿಯರ್ ಸಿದ್ದೇಶ್,   ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ, ಉಪಾಧ್ಯಕ್ಷ ಓಬಣ್ಣ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಫೇಸ್ವಾಮಿ, ಕೆಡಿಪಿಸದಸ್ಯ ಅಂಗಡಿರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಮಂಜುನಾಥ, ಎಂ.ಕುಮಾರಸ್ವಾಮಿ, ಎಂ.ಹಿದಾಯಿತ್‌ವುಲ್ಲಾ, ಪಾತಲಿಂಗಪ್ಪಷಣ್ಮುಖಪ್ಪ, ಬಿ.ಸಿ.ಸತೀಶ್‌ಕುಮಾರ್, ಪಿಡಿಒ ಎಂ.ರಾಮಚಂದ್ರಪ್ಪ, ಶಲ್ಯದ್ಯಾಮಣ್ಣ, ರವಿಕುಮಾರ್, ಮೈನಬಾಬು, ದೇವರಾಜ, ಕೆ.ವೀರಭದ್ರಪ್ಪ, ರಾಜಣ್ಣ, ದೊಣ್ಣಪ್ಪರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ