Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಹಿತರಕ್ಷಣೆಗೆ ಮೋದಿ ಸರ್ಕಾರ ಬದ್ಧ: ಎಂಎಸ್‌ಪಿ ಏರಿಕೆ ಸ್ವಾಗತಿಸಿದ ಬಿ.ವೈ. ವಿಜಯೇಂದ್ರ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
"ಎಂತಹ ಸವಾಲುಗಳಿದ್ದರೂ ಅನ್ನದಾತರ ಹಿತ ಕಾಯಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶ್ಲಾಘಿಸಿದ್ದಾರೆ.

​2026-27ರ ಮಾರುಕಟ್ಟೆ ಹಂಗಾಮಿನ 14 ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಇದು ಕೇವಲ ಅಂಕಿ-ಅಂಶವಲ್ಲ, ಅನ್ನದಾತರಿಗೆ ನೀಡುವ ಗೌರವ ಎಂದು ಬಣ್ಣಿಸಿದ್ದಾರೆ.

​​ಲಾಭದ ಖಾತ್ರಿ: ಕೃಷಿ ವೆಚ್ಚಕ್ಕಿಂತ ಕನಿಷ್ಠ 50% ರಷ್ಟು ಹೆಚ್ಚಿನ ಲಾಭವನ್ನು ರೈತರಿಗೆ ಖಾತ್ರಿಪಡಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಸಂಕಲ್ಪವನ್ನು ಸಾಬೀತುಪಡಿಸಿದೆ.

​ಭತ್ತದ ಬೆಲೆ ಏರಿಕೆ: ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 72 ರೂ. ಹೆಚ್ಚಿಸಲಾಗಿದ್ದು, ಈಗಿನ ಬೆಲೆ 2,441 ರೂ. ಗೆ ತಲುಪಿದೆ.

​ಸೂರ್ಯಕಾಂತಿ ಬೆಲೆಯಲ್ಲಿ ಭಾರಿ ಜಿಗಿತ: ಸೂರ್ಯಕಾಂತಿ ಬೀಜಕ್ಕೆ ಕ್ವಿಂಟಾಲ್‌ಗೆ ಬರೋಬ್ಬರಿ 622 ರೂ. ಹೆಚ್ಚಳ ಮಾಡಲಾಗಿದ್ದು, ಒಟ್ಟು ಬೆಲೆ 8,343 ರೂ. ಆಗಿದೆ.

​ಬೆಳೆ ವೈವಿಧ್ಯಕ್ಕೆ ಆದ್ಯತೆ: ಆಮದು ಅವಲಂಬನೆ ತಗ್ಗಿಸಲು ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

​ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ:
​"
ಬಿತ್ತನೆಯಿಂದ ಮಾರುಕಟ್ಟೆಯವರೆಗೆ ರೈತರ ಕೈ ಹಿಡಿದು ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ನಿರ್ಧಾರವು ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಬೆಳೆ ವೈವಿಧ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ" ಎಂದು ವಿಜಯೇಂದ್ರ ತಿಳಿಸಿದ್ದಾರೆ.

​ರಾಜ್ಯದ ಸಮಸ್ತ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಎನ್.ಡಿ.ಎ ಸರ್ಕಾರಕ್ಕೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗಕ್ಕೆ ಆಗಮಿಸಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಗುರು ಸದ್ಗುರು ಶ್ರೀ  ಜಗ್ಗಿ ವಾಸುದೇವ್ಹಾಡೋನಹಳ್ಳಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆಕೆಂಪೇಗೌಡರ ಜಾತ್ಯತೀತ ಕಲ್ಪನೆ ಇಂದಿಗೂ ಆದರ್ಶ-ಡಾ.ಕೆ.ಸುಧಾಕರ್ಪಲ್ಸ್ ಪೋಲಿಯೋ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್.ಶಂಕರ್ ನಿಧನ: ಕೆಯುಡಬ್ಲ್ಯೂಜೆ ತೀವ್ರ ಸಂತಾಪಯೋಗಭ್ಯಾಸವು ಮಾನವನಲ್ಲಿ ಅಳತೆ ಮತ್ತು ಪ್ರಮಾಣಗಳ ವಿವೇಕಜ್ಞಾನ ಮೂಡಿಸುತ್ತದೆ: ಯೋಗಾಚಾರ್ಯ ಚಿನ್ಮಯಾನಂದಜೆಡಿಎಸ್ ಬೂತ್ ಮಟ್ಟದ ಏಜೆಂಟರ ಕಾರ್ಯಾಗಾರ: ಮುಂಬರುವ ಚುನಾವಣಾ ಸಿದ್ಧತೆ ಕುರಿತು ತೀವ್ರ ಚರ್ಚೆಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬಿಜೆಪಿಯಿಂದ 'ಮತ ದ್ರೋಹ': ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪಹಸಿರು ಅಭಿಯಾನಕ್ಕೆ ಜಾಗತಿಕ ಗಿನ್ನಿಸ್ ರೆಕಾರ್ಡ್ ಮನ್ನಣೆ: ಮುಖ್ಯಮಂತ್ರಿ ಶಿವಕುಮಾರ್ ಹೆಮ್ಮೆಯ ಘೋಷಣೆಕಾರ್ಮಿಕರ ಘನತೆ, ಹಕ್ಕುಗಳ ರಕ್ಷಣೆಗೆ ಕರ್ನಾಟಕ ಬದ್ಧ: ಮುಖ್ಯಮಂತ್ರಿ ಶಿವಕುಮಾರ್