Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ನಾಮಫಲಕ ಅನಾವರಣ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಎಳ್ಳುಪುರ  ಗ್ರಾಮದ  ವೃತ್ತದಲ್ಲಿ ಅಪ್ಪು ಅಭಿಮಾನಿ ಪುನೀತ್ ಪವರ್ ಆಲೂರು (ಅಪ್ಪು ) ಹಾಗೂ ಸಂಗಡಿಗರ ನೇತೃತ್ವದಲ್ಲಿ ವಿಶೇಷ ಅನ್ನದಾಸೋಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು , ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಎಳ್ಳುಪುರ ವೃತ್ತಕ್ಕೆ ಪುನೀತ್ ರಾಜಕುಮಾರ್ ರವರ ಹೆಸರಿಟ್ಟು,ನೂತನ ನಾಮಫಲಕವನ್ನು  ಲೋಕಾರ್ಪಣೆಗೊಳಿಸಲಾಯಿತು.

ಮಾರ್ಚ್ 17 ಅಂದರೆ ಪವರ್ ಸ್ಟಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಕಾರಣ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ 51ನೇ ಜನ್ಮದಿನಾಚರಣೆ. ಈ ಸುದಿನದಂದು ಅವರ ಅಭಿಮಾನಿಗಳು ಹಲವು ರೀತಿ ವಿಶೇಷ ಸಮಾಜಸೇವಾ ಕಾರ್ಯಗಳನ್ನು, ದಾನ ಧರ್ಮ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನ ವ್ಯಕ್ತಪಡಿಸುವುದು ವಿಶೇಷವಾಗಿದೆ.  

 ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ ನಟ ಪುನೀತ್ ರಾಜಕುಮಾರ್ ರವರು ತಮ್ಮ ಸರಳ ಜೀವನ ಸೇವಾ ಕಾರ್ಯಗಳಿಂದಲೇ  ಅಭಿಮಾನಿಗಳ ಮನಸ್ಸಿನಲ್ಲಿ  ವಿಶೇಷ ಸ್ಥಾನ ಪಡೆದವರು.  ನಮ್ಮ ಸೇವಾ ಕಾರ್ಯಗಳಲ್ಲಿ  ಅವರು ಸದಾ ಜೀವಂತ ಅವರ ನೆನಪಿಗಾಗಿ ಇಂದು ನಮ್ಮ ಗ್ರಾಮದ ವೃತ್ತಕ್ಕೆ ಅವರ ಹೆಸರಿಟ್ಟು ನೂತನ ನಾಮಫಲಕ ಅನಾವರಣ ಮಾಡಲಾಗಿದೆ  ಇಂದಿನ ಯುವ ಸಮೂಹ ಪುನೀತ್ ರಾಜಕುಮಾರ್ ಅವರ ಸದ್ಗುಣಗಳನ್ನು ಸ್ಪೂರ್ತಿಯಾಗಿ ಪಡೆದು ಸಮಾಜದಲ್ಲಿ ಮಾದರಿ ಜೀವನ ಸಾಗಿಸುವಂತಾಗಲಿ ಎಂದರು.

ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಮಾತನಾಡಿ ಮಾರ್ಚ್ 17 ಇಂದು ಸ್ಪೂರ್ತಿ ದಿನ , ಯುವಕರನ್ನು ಸಮಾಜದ ಸೇವಾ ಕಾರ್ಯಗಳ ಕಡೆಗೆ ಕರೆದೊಯ್ದ ದಿನ, ಡಾಕ್ಟರ್ ಪುನೀತ್ ರಾಜಕುಮಾರ್ ಅವರು  ಕೇವಲ ನಾಯಕ ನಟರಾಗದೆ ಸಮಾಜಕ್ಕೆ ಸ್ಪೂರ್ತಿಯಾದಂತವರು, ತಮ್ಮಉತ್ತಮ ಸರಳ ಜೀವನಶೈಲಿಯಿಂದ ಹಾಗೂ ಸೇವಾ ಕಾರ್ಯಗಳಿಂದಲೇ  ಅಪಾರ ಅಭಿಮಾನಿ ಬಳಗ ಹೊಂದಿದವರು. ಇಂದು ಅವರ 51ರ ಜನ್ಮ ದಿನಾಚರಣೆಯನ್ನು ಆಚರಿಸುವ ಮೂಲಕ ವಿಶೇಷ ರೀತಿಯಲ್ಲಿ  ನಾವೆಲ್ಲರೂ ಅವರಿಗೆ ಗೌರವಸಮರ್ಪಣೆ ಮಾಡಿದ್ದೇವೆ . ಅಪ್ಪು ಸದಾ ಅಮರ ಅವರು ಸದಾ ನಮ್ಮೊಂದಿಗಿದ್ದಾರೆ ಎಂದರು.

ಅಭಿಮಾನಿ ಪುನೀತ್ ಪವರ್ ಆಲೂರು ಮಾತನಾಡಿ ಪ್ರತಿ ವರ್ಷವೂ ವಿಶೇಷ ರೀತಿಯಲ್ಲಿ ಅನ್ನ ದಾಸೋಹ ನೆಡೆಸುವ ಮೂಲಕ ನಟ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬವನ್ನು ಆಚರಿಸುತ್ತೇವೆ. ಕಳೆದ ಬಾರಿ ನಮ್ಮ  ಎಳ್ಳುಪುರ ವೃತ್ತಕ್ಕೆ ಡಾ. ಪುನೀತ್ ರಾಜಕುಮಾರ್ ವೃತ್ತಾ ಎಂದು ನಾಮಕರಣ ಮಾಡಲಾಗಿತ್ತು. ಈ ಬಾರಿ ಗ್ರಾನೆಟ್ ನಾಮಫಲಕವನ್ನು  ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಹಲವು ಗಣ್ಯರ ಮುಖೇನಾ ಲೋಕಾರ್ಪಣೆ ಮಾಡಲಾಗಿದೆ. ಅಭಿಮಾನ ಕೇವಲ ಶಿಳ್ಳೆ ಹೊಡೆದು ಚಪ್ಪಾಳೆಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ನೊಂದ ಜನರಿಗೆ ಸಹಾಯ ಮಾಡಬೇಕೆಂಬುದೇ  ಅಪ್ಪು ಅವರ ಆಶಯವಾಗಿತ್ತು  ಅವರ ಆಶಯದಂತೆ  ಅವರ ಅಭಿಮಾನಿಗಳದ ನಾವು  ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದರು.

ಈ ವೇಳೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರೇಮ್ ಕುಮಾರ್, ಸದಸ್ಯರಾದ ಎಳ್ಳುಪುರ ಮುನಿ ಶಂಕರ್,ಮಧು,ವಾರದನಹಳ್ಳಿ ಅರುಣ್ ಕುಮಾರ್, ನಗರಸಭೆ ಉಪಾಧ್ಯಕ್ಷ ಮಲ್ಲೇಶ್,ಎಳ್ಳುಪುರ ಮುರಳಿ, ಯಲಹಂಕ ಬಾಲಕೃಷ್ಣ ನಾಯಕ್,  ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಪ್ರಮುಖರು, ಸ್ಥಳೀಯ ಮುಖಂಡರಾದ ಪುನೀತ್ ಪವರ್ ಆಲೂರು , ನರೇಂದ್ರ  ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ