Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸ ವರ್ಷ: ಸಂಭ್ರಮವಲ್ಲ, ಚಿಂತನೆಯ ಪ್ರಶ್ನೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊಸ ವರ್ಷ: ಸಂಭ್ರಮವಲ್ಲ, ಚಿಂತನೆಯ ಪ್ರಶ್ನೆ
ಜನವರಿ 1 ಬಂದ ತಕ್ಷಣ ಹ್ಯಾಪಿ ನ್ಯೂ ಇಯರ್ಎಂಬ ಶುಭಾಶಯಗಳು, ಪಾರ್ಟಿಗಳು, ಪಟಾಕಿಗಳು ಎಲ್ಲೆಡೆ ಕಾಣಿಸುತ್ತವೆ. ಹೊಸ ವರ್ಷವನ್ನು ಸಂಭ್ರಮಿಸುವುದರಲ್ಲಿ ತಪ್ಪಿಲ್ಲ. ಆದರೆ ಪ್ರಶ್ನೆ ಒಂದೇ, ನಾವು ಏನು ಆಚರಿಸುತ್ತಿದ್ದೇವೆ? ಯಾಕೆ ಆಚರಿಸುತ್ತಿದ್ದೇವೆ? ಹೊಸ ವರ್ಷ ಎಂದರೆ ಏನು? ಜನವರಿ 1 ಹೊಸ ವರ್ಷವು ಪಾಶ್ಚಾತ್ಯ ಕ್ಯಾಲೆಂಡರ್‌ನ ಆರಂಭದ ದಿನ. ಇದು ಭಾರತದ ಸಾಂಸ್ಕೃತಿಕ ಕಾಲಗಣನೆಯಿಂದ ಬಂದದ್ದು ಅಲ್ಲ.

ಭಾರತಕ್ಕೆ ತನ್ನದೇ ಹೊಸ ವರ್ಷಗಳಿವೆ. ಯುಗಾದಿ, ವಿಷು, ಬೈಶಾಖಿ ಇವುಗಳು ಪ್ರಕೃತಿ, ಕೃಷಿ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ನೇರವಾಗಿ ಸಂಬಂಧಿಸಿದವು ಮತ್ತು ಜೀವನ ಚಕ್ರದದೊಂದಿಗೆ ಜೋಡಿತವಾದ ಕಾಲದ ಅರಿವು.
ನಮ್ಮದೇ ಹೊಸ ವರ್ಷಗಳನ್ನು ಮರೆತು, ವಿದೇಶಿ ಕ್ಯಾಲೆಂಡರ್‌ನ ದಿನವನ್ನೇ ಯಾಕೆ ನಾವು ಅತಿ ದೊಡ್ಡ ಸಂಭ್ರಮ ಮಾಡಬೇಕು?”ಇದು ವಿದೇಶ ದ್ವೇಷವಲ್ಲ. ಇದು ಸಾಂಸ್ಕೃತಿಕ ಸ್ವಾಭಿಮಾನದ ಪ್ರಶ್ನೆ.ಹೊಸ ವರ್ಷದ ಹೆಸರಿನ ಅತಿರೇಕ

ಇಂದಿನ ಹೊಸ ವರ್ಷ ಆಚರಣೆ ಎಂದರೆ:
ಅತಿಯಾದ ಮದ್ಯಪಾನ
,ಶಿಸ್ತು ಇಲ್ಲದ ವರ್ತನೆ,ಹಣದ ದುರ್ಬಳಕೆ, ಇದನ್ನೇ ಸಂಸ್ಕೃತಿ ಎಂದು ಕರೆಯಬಹುದೇ? ಭಾರತೀಯ ಸಂಸ್ಕೃತಿ ಎಂದರೆ ಸಂಯಮ, ಜವಾಬ್ದಾರಿ, ಮೌಲ್ಯಗಳು.


ರಾಷ್ಟ್ರದ ಇತ ದೃಷ್ಟಿಯಲ್ಲಿ ಹೊಸ ವರ್ಷವನ್ನು ತಿರಸ್ಕರಿಸುವ ಪ್ರಶ್ನೆಯೇ ಇಲ್ಲ. ಆದರೆ ಅದು ಭಾರತೀಯ ಚಿಂತನೆಯ ನೆಲೆಯ ಮೇಲೆ ನಿಲ್ಲಬೇಕು. ಆಧುನಿಕತೆಯನ್ನು ಸ್ವೀಕರಿಸಬೇಕು, ಆದರೆ ಬೇರುಗಳನ್ನು ಕತ್ತರಿಸಿ ಅಲ್ಲ. ಜಾಗತಿಕತೆಯೊಂದಿಗೆ ನಡೆಯಬೇಕು, ಆದರೆ ಸ್ವಾಭಿಮಾನ ಕಳೆದುಕೊಂಡು ಅಲ್ಲ. ಕ್ಯಾಲೆಂಡರ್ ಬದಲಾಗುವುದು ಸಹಜ. ಆದರೆ ಚಿಂತನೆ ಬದಲಾಗದಿದ್ದರೆ, ಹೊಸ ವರ್ಷ ಕೇವಲ ದಿನಾಂಕವಾಗಿಯೇ ಉಳಿಯುತ್ತದೆ.


ಹೊಸ ವರ್ಷ ಬೇಕು:
ಆದರೆ ಭಾರತೀಯ ಚಿಂತನೆಯೊಂದಿಗೆ.ಭಾರತೀಯ ಸಂಸ್ಕೃತಿಯಲ್ಲಿ ಹೊಸ ಆರಂಭ ಎಂದರೆ ಆತ್ಮಪರಿಶೀಲನೆ, ಶಿಸ್ತು ಮತ್ತು ಕರ್ತವ್ಯಬೋಧ. ಈ ಹೊಸ ವರ್ಷವನ್ನು ನಾವು ರಾಷ್ಟ್ರಭಕ್ತಿ ಮತ್ತು ಸಂಸ್ಕಾರಗಳ ಪುನರುಜ್ಜೀವನದ ವರ್ಷವಾಗಿಸಬೇಕಾಗಿದೆ.

ರಾಷ್ಟ್ರೀತೆಯ ಚಿಂತನೆಯ ಪ್ರಕಾರ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬಲಿಷ್ಠ ನಾಗರಿಕ ಅಗತ್ಯ. ಹೊಸ ವರ್ಷದಲ್ಲಿ ಪ್ರತಿಯೊಬ್ಬ ಭಾರತೀಯನು ನಾನು ದೇಶಕ್ಕಾಗಿ ಏನು ಮಾಡಬಹುದು?” ಎಂದು ಪ್ರಶ್ನಿಸಬೇಕು. ಸ್ವಾರ್ಥಕ್ಕಿಂತ ರಾಷ್ಟ್ರ ಹಿತವನ್ನು ಮುಂದಿಟ್ಟು ಕೆಲಸ ಮಾಡುವ ಸಂಕಲ್ಪವೇ ನಿಜವಾದ ಹೊಸ ವರ್ಷದ ಪ್ರತಿಜ್ಞೆ.

ಮೌಢ್ಯವಲ್ಲ, ಜಾಗೃತಿ:
ಹೊಸ ವರ್ಷದಲ್ಲಿ,ಅದೃಷ್ಟ ಬದಲಾಗುತ್ತದೆ ಎಂಬ ನಂಬಿಕೆ ಬೇಡ,ದೇವರು ಎಲ್ಲವನ್ನೂ ಮಾಡುತ್ತಾನೆ ಎಂಬ ನಿರೀಕ್ಷೆ ಬೇಡ.


ವಿದ್ಯಾರ್ಥಿಗಳ ಜವಾಬ್ದಾರಿ:
ವಿದ್ಯಾರ್ಥಿಗಳು ಕೇವಲ ಸಂಭ್ರಮಿಸುವ ಗುಂಪಾಗಿರಬಾರದು; ಅವರು ಸಮಾಜದ ದಿಕ್ಕು ತೋರಿಸುವ ಶಕ್ತಿಯಾಗಬೇಕು. ಹೊಸ ವರ್ಷದ ಸಂಭ್ರಮದ ಮಧ್ಯೆ ಪ್ರಶ್ನಿಸುವ ಧ್ವನಿ ಮೌನವಾದರೆ,

ವಿದ್ಯಾರ್ಥಿ ರಾಜಕಾರಣ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಕ್ಯಾಂಪಸ್‌ಗಳು ಪಾರ್ಟಿಗಳ ಕೇಂದ್ರವಾಗಬಾರದು, ಚಿಂತನೆಯ ಪ್ರಯೋಗಾಲಯಗಳಾಗಬೇಕು. ನಾವು ಯಾರ ಸಂಸ್ಕೃತಿಯನ್ನು ಅನುಕರಿಸುತ್ತಿದ್ದೇವೆ?”, “ನಮ್ಮದೇ ಚಿಂತನೆ ಎಲ್ಲಿದೆ?” ಎಂಬ ಪ್ರಶ್ನೆಗಳು ವಿದ್ಯಾರ್ಥಿ ರಾಜಕಾರಣದ ಆರಂಭಬಿಂದು ಆಗಬೇಕು.

ಕ್ಯಾಲೆಂಡರ್ ಬದಲಾಗುವ ಪ್ರತಿವರ್ಷ, ವಿದ್ಯಾರ್ಥಿಗಳ ಪ್ರಶ್ನಿಸುವ ಮನಸ್ಸೂ ಬದಲಾಗಬೇಕು. ಭಾರತೀಯ ಚಿಂತನೆಯೊಂದಿಗೆ ಸಮಾಜವನ್ನು ಮರುನಿರ್ಮಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ.

ಹೊಸ ವರ್ಷ ಕೇವಲ ದಿನಾಂಕವಾಗಬಾರದು; ಅದು ವಿದ್ಯಾರ್ಥಿ ಚಳವಳಿಯ ಹೊಸ ಆರಂಭವಾಗಬೇಕು.ಪ್ರಶ್ನಿಸುವ ವಿದ್ಯಾರ್ಥಿಗಳು ಎದ್ದ ದಿನವೇ, ಸಂಭ್ರಮವಲ್ಲ ನಿಜವಾದ ಹೊಸ ವರ್ಷ ಆರಂಭವಾಗುತ್ತದೆ!”.
ಲೇಖನ-ಕನಕರಾಜ್, ಕೋಡಿಹಳ್ಳಿ. ವಿದ್ಯಾರ್ಥಿ 6363044610

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ