Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆತ್ತ ಮಗುವಿನ ಸಾವಿನ ಸುದ್ದಿ ಗೌಪ್ಯವಾಗಿಟ್ಟ ಸಹನಮೂರ್ತಿ ರಮಾಬಾಯಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಬಾ ಸಾಹೇಬರ ಶಿಕ್ಷಣಕ್ಕೆ ದಕ್ಕೆ ಆಗಬಾರದೆಂದು, ತನ್ನ ಹೆತ್ತ ಮಗುವಿನ ಸಾವಿನ ಸುದ್ದಿಯು ಸಹ ತಿಳಿಸದೇ ತನ್ನಲ್ಲಿ ಅದುವಿಟ್ಟುಕೊಂಡ ಸಹನಮೂರ್ತಿ ರಮಾಬಾಯಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿಕ್ಕವಯಸ್ಸಿಗೆ ಬಾಬಾರನ್ನು ಮದುವೆಯಾದರೂ, ಅವರ ಎಲ್ಲಾ ಹೋರಾಟ, ತ್ಯಾಗಕ್ಕೆ ಆಕ್ಷೇಪಿಸದೇ, ಹೆಗಲಾಗಿ ನಿಂತ ದರಿದ್ರ್ಯಬದುಕಿನ ಭಾರತೀಯರಿಗೆ ಮಾತೆಯಾಗಿದ್ದಾರೆ. ಆಕೆಯ ತ್ಯಾಗ, ಬಾಬಾರ ಮೇಲಿನ ಪ್ರೀತಿ, ಸಂಸಾರ ಹೊಣೆ ನಿಭಾಯಿಸಿದ ರೀತಿ, ಭಾರತದ ಚರಿತ್ರೆಯನ್ನು ಬದಲಾಯಿಸುವಂತ ಅಂಬೇಡ್ಕರ್ ವ್ಯಕ್ತಿತ್ವ ರೂಪಿಸುವಲ್ಲಿ ಆಕೆಯ ಪಾತ್ರ ಅಜರಾಮರವಾಗಿದೆ. ಸಮಾನತೆ ಬಯಸುವವರ ಆತ್ಮದಲ್ಲಿ ಜೈ ಭೀಮ್ ನಾಮ ಇರುವವರೆಗೂ ರಮಾಬಾಯಿ ಎಂಬ ಹೆಸರು ಅಚ್ಚಳಿಯದೇ ಉಳಿಯುತ್ತದೆ ಎಂದರು.

ಸಗಣಿ ಮಾರಿ ಅಂಬೇಡ್ಕರವರ ಓದಿಗೆ ಸಹಕರಿಸಿ, ತಮ್ಮ ಜೀವನ ತ್ಯಾಗ ಮಾಡಿ ಶೋಷಿತರ ಕತ್ತಲೆಯ ಬಾಳಿಗೆ ಸೂರ್ಯನನ್ನು ನೀಡಿದ ಮಹಾತಾಯಿ ಆಗಿದ್ದಾರೆ. ಅಲ್ಲದೇ ಅನಕ್ಷರತೆಯ ಪರಿಣಾಮ ಅರಿತಿದ್ದ ರಮಾಬಾಯಿ ಅವರು ತನ್ನಂತೆಯೇ ಬೇರೆ ಮಹಿಳೆಯರು ಅನುಭವಿಸಬಾರೆದಂದು ತಮ್ಮ ಪತಿಯ ಜೊತೆಗೂಡಿ ಇಡೀ ಜೀವನದುದ್ದಕ್ಕೂ ಶೋಷಿತರು ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ದೊರಕಿಸಿಕೊಡಲು ಹೋರಾಟ ಮಾಡುವ ಮೂಲಕ ಅನನ್ಯವಾದ ಸಾಮಾಜಿಕ ಕೊಡುಗೆ ನೀಡಿದ್ದಾರೆ ಎಂದರು.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶ ಕಟ್ಟುವ ಕಾರ್ಯಕ್ಕೆ ನಿರಂತರವಾಗಿ ಸಹಕಾರ, ಶ್ರಮವಹಿಸಿದ ಮಾತೆ ರಮಾಬಾಯಿ ಅಂಬೇಡ್ಕರ್ ಅವರು ಹೆಂಡತಿಯಾಗಿ ಗಂಡನ ಯಶಸ್ಸಿಗಾಗಿ ಮಾಡಿದ ತ್ಯಾಗ, ಸಾಮಾಜಿಕ ತುಡಿತದ ಮಾದರಿ ನಡೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಚರಿತ್ರೆಯನ್ನು ಪಠ್ಯಕ್ಕೆ ಸೇರ್ಪಡೆಯಾಗಬೇಕು. ಸರ್ಕಾರದ ವತಿಯಿಂದ ಜಯಂತಿ ಆಚರಿಸಬೇಕು. ಮರಣೋತ್ತರವಾಗಿ ಭಾರತ ರತ್ನಪ್ರಶಸ್ತಿ ನೀಡಿ ಗೌರವಿಸಬೇಕು. ಮಾತೆ ರಮಾಬಾಯಿ ಅವರ ತ್ಯಾಗ ಮರೆಯುವಂತಿಲ್ಲ. ಸಮಸ್ಥ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸುಮಾ, ಉಷಾ, ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ಶಾಂತಮ್ಮ, ಶಕುಂತಲಾ, ಸಚಿನ್ ಗೌತಮ್, ಬೆಸ್ಕಾಂ ತಿಪ್ಪೇಸಾಮಿ, ಗಿರಿಜಾ, ತಿಪ್ಪಮ್ಮ, ತಿಪಟೂರು ಮಂಜು, ಬನ್ನಿಕೋಡ್ ರಮೇಶ ಇತರರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ