Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

"ನಮ್ಮ ಜಾತಿ ಕಾಂಗ್ರೆಸ್, ಪವಿತ್ರ ಧರ್ಮ ಸಂವಿಧಾನ" ಎಂದ ನೂತನ ಅಧ್ಯಕ್ಷ!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಐತಿಹಾಸಿಕ 'ಸಂಕಲ್ಪ ಸಮಾವೇಶ'ದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಅಧ್ಯಕ್ಷರಿಗೆ ಪಕ್ಷದ ಬಾವುಟವನ್ನು ಹಸ್ತಾಂತರಿಸುವ ಮೂಲಕ ಜವಾಬ್ದಾರಿ ಒಪ್ಪಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, "ಇದು ನನ್ನ ಜೀವನದ ಮಹತ್ವಪೂರ್ಣ ದಿನ. 141 ವರ್ಷಗಳ ಇತಿಹಾಸವಿರುವ ಪವಿತ್ರ ಪಕ್ಷದ ಜವಾಬ್ದಾರಿ ನೀಡಿರುವ ಹೈಕಮಾಂಡ್ ನಾಯಕರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ನಮ್ಮ ಜಾತಿ ಕಾಂಗ್ರೆಸ್, ನಮ್ಮ ಪವಿತ್ರ ಧರ್ಮ ಸಂವಿಧಾನ" ಎಂದು ಘೋಷಿಸಿದರು.

Advertisement

ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಖಡಕ್ ಮಾತುಗಳು:
ಬಿಜೆಪಿ-ಆರ್​​ಎಸ್​​ಎಸ್​​ಗೆ ಸವಾಲು: "ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಕೊಡುಗೆ ಇಲ್ಲದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಂದು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಸಂವಿಧಾನವನ್ನೇ ಮುಗಿಸಲು ಹೊರಟಿವೆ. ಇವರ ವಿರುದ್ಧ ನಮ್ಮ ಹೋರಾಟ ನಿರಂತರ."

ನಿಗಮ ಮಂಡಳಿಗಳಿಗೆ ಹೊಸಬರ ನೇಮಕಾತಿಗೆ ಆಗ್ರಹ: "ಎರಡೂವರೆ ವರ್ಷಗಳಿಂದ ನಿಗಮ ಮಂಡಳಿಗಳಲ್ಲಿ ಇರುವವರಿಂದ ರಾಜೀನಾಮೆ ಪಡೆದು, ಹೊಸ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿ. ಸಿದ್ದರಾಮಯ್ಯ ಅವರ 'ಎರಡನೇ ಇನ್ನಿಂಗ್ಸ್' ಯಶಸ್ವಿಯಾಗಬೇಕಾದರೆ ಹೊಸ ಪಿಚ್‌ನಲ್ಲಿ ಹೊಸ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು."

ಸಾಮಾನ್ಯ ಕಾರ್ಯಕರ್ತನ ಹೆಮ್ಮೆ: "ನಾನು ಯಾವುದೇ ದೊಡ್ಡ ಜಾತಿ ಅಥವಾ ಬಂಡವಾಳಶಾಹಿ ಹಿನ್ನೆಲೆಯಿಂದ ಬಂದವನಲ್ಲ. ಶಿಫಾರಸು ಪತ್ರ ಹಿಡಿದು ಓಡಾಡಿದವನೂ ಅಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷನಿಷ್ಠೆಯಿಂದ ಈ ಹಂತಕ್ಕೆ ಬೆಳೆದಿದ್ದೇನೆ."

"ನನ್ನ ಅಧಿಕಾರಾವಧಿಯಲ್ಲಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗುತ್ತಿದ್ದೇನೆ":ಸಿಎಂ ಡಿ.ಕೆ. ಶಿವಕುಮಾರ್

ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ಅಧ್ಯಕ್ಷತೆಯ ಅವಧಿಯ ಸಾಧನೆಗಳನ್ನು ಸ್ಮರಿಸಿದರು.

ಸದೃಢ ಸಂಘಟನೆ: "ನನ್ನ ಅವಧಿಯಲ್ಲಿ 75 ಲಕ್ಷ ಸದಸ್ಯತ್ವ ನೋಂದಣಿ ಮಾಡಿ ದೇಶಕ್ಕೇ ಸಂದೇಶ ನೀಡಿದ್ದೇವೆ. ನಾನು ಮತ್ತು ಸಿದ್ದರಾಮಯ್ಯ ಅವರಷ್ಟೇ ಅಲ್ಲ, ಕಾರ್ಯಕರ್ತರ ಹೋರಾಟದಿಂದಾಗಿ ಪಕ್ಷಕ್ಕೆ 138 ಸೀಟುಗಳು ಬಂದವು."

ಪಕ್ಷಕ್ಕೆ ಸ್ವಂತ ಆಸ್ತಿ: "ರಾಜ್ಯದ 100 ಕಡೆಗಳಲ್ಲಿ 'ಗಾಂಧೀ ಭಾರತ್' ಹೊಸ ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸಿದ್ದೇನೆ. ಇಡೀ ಸರ್ಕಾರ ಇನ್ನುಮುಂದೆ ಹರಿಪ್ರಸಾದ್ ಅವರ ಜೊತೆ ನಿಲ್ಲಲಿದೆ."

ಪ್ರಮುಖ ಘೋಷಣೆ: "ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 5 ಜನ ಕಾರ್ಯಕರ್ತರನ್ನು ಒಳಗೊಂಡ 'ಗ್ಯಾರಂಟಿ ಸಮಿತಿ' ಅಧ್ಯಕ್ಷರನ್ನು ನೇಮಿಸಲಾಗುವುದು. ಹಾಗೆಯೇ, ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ."

"2028 ಮತ್ತು 2029 ರಲ್ಲಿ ಕಾಂಗ್ರೆಸ್ ವಿಜಯಭೇರಿ ನಿಶ್ಚಿತ": ಮಾಜಿ ಸಿಎಂ ಸಿದ್ದರಾಮಯ್ಯ
ಸಮಾವೇಶದ ಮುಕ್ತಾಯದ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ಬಹುತ್ವದ ರಕ್ಷಣೆ: "ಬಿಜೆಪಿಯವರು ಧರ್ಮ, ಜಾತಿಯ ಹೆಸರಲ್ಲಿ ದೇಶವನ್ನು ಒಡೆಯುತ್ತಿದ್ದಾರೆ ಮತ್ತು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಇದನ್ನು ತಡೆಯಲು ನಮ್ಮ ಕಾರ್ಯಕರ್ತರು ಸನ್ನದ್ಧರಾಗಬೇಕು."

ರಾಹುಲ್ ಗಾಂಧಿ ಪ್ರಧಾನಿಯಾಗಲಿ: "ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿವೆ. ಇತ್ತೀಚಿನ ಐದು ಉಪಚುನಾವಣೆಗಳ ಗೆಲುವೇ ಇದಕ್ಕೆ ಸಾಕ್ಷಿ. 2028ರ ವಿಧಾನಸಭಾ ಚುನಾವಣೆಯಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಮತ್ತು 2029ರ ಲೋಕಸಭೆಯಲ್ಲಿ ಗೆದ್ದು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಸಂಕಲ್ಪ ನಮ್ಮದಾಗಬೇಕು."

ಕೆಪಿಸಿಸಿ ನೂತನ ಸಾರಥಿಯಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ವಹಿಸಿಕೊಳ್ಳುವ ಮೂಲಕ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಸಂಘಟನಾ ಪರ್ವ ಆರಂಭವಾಗಿದ್ದು, ಮುಂಬರುವ 2028 ರ ಚುನಾವಣಾ ಸಮರಕ್ಕೆ ಪಕ್ಷ ಈಗಿನಿಂದಲೇ ಕಣಕ್ಕಿಳಿದ ಮುನ್ಸೂಚನೆ ನೀಡಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು