Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೋಕ್ಸೋ ಪ್ರಕರಣ: ವಚನಾನಂದ ಸ್ವಾಮೀಜಿಗೆ 5 ಗಂಟೆಗಳ ಕಾಲ ವಿಚಾರಣೆ, ವೈದ್ಯಕೀಯ ಪರೀಕ್ಷೆ ಪೂರ್ಣ

Advertisement
Advertisement

ಚಂದ್ರವಳ್ಳಿ ನ್ಯೂಸ್, ದಾವಣಗೆರೆ/ಹರಿಹರ:
ಹಾಸ್ಟೆಲ್ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹರಿಹರದ ವಚನಾನಂದ ಸ್ವಾಮೀಜಿಯವರನ್ನು ಗುರುವಾರ ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಬಸವರಾಜ್ ನೇತೃತ್ವದಲ್ಲಿ ಸತತ 5 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯಿತು.

ಕಾನೂನಿಗೆ ಗೌರವ ನೀಡುತ್ತೇನೆಂದ ಶ್ರೀಗಳು:
ವಿಚಾರಣೆ ಮುಗಿಸಿ ಹೊರಬಂದ ಸ್ವಾಮೀಜಿ ಮಾಧ್ಯಮಗಳತ್ತ ನೋಡಿ, "ನಾವು ಕಾನೂನನ್ನು ಗೌರವಿಸುತ್ತೇವೆ ಮತ್ತು ಪರಿಪಾಲಿಸುತ್ತೇವೆ" ಎಂದು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದರು. ನಂತರ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಹರಿಹರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಾಯಿತು. ಪರೀಕ್ಷೆಗಳ ನಂತರ ನಗುಮುಖದಿಂದಲೇ 'ಆದಿಯೋಗಿ' ಪುಸ್ತಕ ಹಿಡಿದು ಕಾರು ಹತ್ತಿ ಮಠದತ್ತ ತೆರಳಿದರು.

15 ದಿನಗಳಲ್ಲಿ ಎಫ್‌ಎಸ್‌ಎಲ್ ವರದಿ:
ಆಸ್ಪತ್ರೆಯ ತುರ್ತು ಚಿಕಿತ್ಸೆ ತಜ್ಞ ಡಾ. ರಾಘವೇಂದ್ರ ದುರ್ಗೋಜಿ ಅವರು ಸ್ವಾಮೀಜಿಯವರ ವೈದ್ಯಕೀಯ ತಪಾಸಣೆ ನಡೆಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಪೋಕ್ಸೋ ಪ್ರಕರಣಕ್ಕೆ ಪೂರಕವಾಗಿ ಉಗುರು, ಬಟ್ಟೆ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಆರೋಗ್ಯ ತಪಾಸಣೆಯ ಭಾಗವಾಗಿ ಬಿಪಿ, ಶುಗರ್ ಮತ್ತು ಪಲ್ಸ್ ಪರೀಕ್ಷೆ ನಡೆಸಲಾಗಿದ್ದು, ಸ್ವಾಮೀಜಿ ಸದೃಢರಾಗಿದ್ದಾರೆ.

ಸಂಗ್ರಹಿಸಿದ ಮಾದರಿಗಳನ್ನು ಬಾತಿಯ ವಿಧಿ ವಿಜ್ಞಾನ ಕೇಂದ್ರಕ್ಕೆ (FSL) ಕಳುಹಿಸಲಾಗಿದ್ದು, 15 ದಿನಗಳಲ್ಲಿ ವರದಿ ಬರಲಿದೆ.

ಭಕ್ತರ ಆಕ್ರೋಶ: "ಇದು ಟ್ರಸ್ಟ್‌ನವರ ಷಡ್ಯಂತ್ರ":
ಸ್ವಾಮೀಜಿಯವರ ವಿಚಾರಣೆ ನಡೆಯುತ್ತಿದ್ದಂತೆ ಠಾಣೆಯ ಮುಂದೆ ಜಮಾಯಿಸಿದ ನೂರಾರು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶ್ರೀಗಳ ವಿರುದ್ಧದ ಆರೋಪ ಸುಳ್ಳು ಎಂದು ಘೋಷಣೆ ಕೂಗಿದರು.

'ಲೆಕ್ಕ ಕೊಡಿ' ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಮಾತನಾಡಿ, "ಇದು ಮಠದ ಟ್ರಸ್ಟ್‌ನವರು ಮಾಡಿರುವ ದೊಡ್ಡ ಷಡ್ಯಂತ್ರ. ಹೇಗಾದರೂ ಮಾಡಿ ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠವನ್ನು ವಶಪಡಿಸಿಕೊಳ್ಳುವ ತಂತ್ರವಿದು. ಮಠದ ಹಣ ತಿಂದವರು ಎಸಿ ರೂಮ್‌ನಲ್ಲಿದ್ದಾರೆ, ಆದರೆ ಭಕ್ತರಾದ ನಾವು ಬಿಸಿಲಿನಲ್ಲಿ ನಿಂತು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ," ಎಂದು ಕಿಡಿಕಾರಿದರು.

ವಿಚಾರಣೆ ಅವಧಿ: 5 ಗಂಟೆಗಳು.
ಮುಂದಿನ ಹಂತ: ಒಂದು ಲಕ್ಷ ರೂ. ಶ್ಯೂರಿಟಿ ಬಾಂಡ್ ನೀಡಿ ತನಿಖೆಗೆ ಸಹಕರಿಸುವುದಾಗಿ ಭಕ್ತರ ಸಮಿತಿ ತಿಳಿಸಿದೆ.
ಪೊಲೀಸ್ ಕಣ್ಗಾವಲು: ಹರಿಹರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗಕ್ಕೆ ಆಗಮಿಸಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಗುರು ಸದ್ಗುರು ಶ್ರೀ  ಜಗ್ಗಿ ವಾಸುದೇವ್ಹಾಡೋನಹಳ್ಳಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆಕೆಂಪೇಗೌಡರ ಜಾತ್ಯತೀತ ಕಲ್ಪನೆ ಇಂದಿಗೂ ಆದರ್ಶ-ಡಾ.ಕೆ.ಸುಧಾಕರ್ಪಲ್ಸ್ ಪೋಲಿಯೋ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್.ಶಂಕರ್ ನಿಧನ: ಕೆಯುಡಬ್ಲ್ಯೂಜೆ ತೀವ್ರ ಸಂತಾಪಯೋಗಭ್ಯಾಸವು ಮಾನವನಲ್ಲಿ ಅಳತೆ ಮತ್ತು ಪ್ರಮಾಣಗಳ ವಿವೇಕಜ್ಞಾನ ಮೂಡಿಸುತ್ತದೆ: ಯೋಗಾಚಾರ್ಯ ಚಿನ್ಮಯಾನಂದಜೆಡಿಎಸ್ ಬೂತ್ ಮಟ್ಟದ ಏಜೆಂಟರ ಕಾರ್ಯಾಗಾರ: ಮುಂಬರುವ ಚುನಾವಣಾ ಸಿದ್ಧತೆ ಕುರಿತು ತೀವ್ರ ಚರ್ಚೆಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬಿಜೆಪಿಯಿಂದ 'ಮತ ದ್ರೋಹ': ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪಹಸಿರು ಅಭಿಯಾನಕ್ಕೆ ಜಾಗತಿಕ ಗಿನ್ನಿಸ್ ರೆಕಾರ್ಡ್ ಮನ್ನಣೆ: ಮುಖ್ಯಮಂತ್ರಿ ಶಿವಕುಮಾರ್ ಹೆಮ್ಮೆಯ ಘೋಷಣೆಕಾರ್ಮಿಕರ ಘನತೆ, ಹಕ್ಕುಗಳ ರಕ್ಷಣೆಗೆ ಕರ್ನಾಟಕ ಬದ್ಧ: ಮುಖ್ಯಮಂತ್ರಿ ಶಿವಕುಮಾರ್