Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೋತಲೂರು ವೀರ ಭ್ರಮ್ಹೇಂದ್ರ ಆರಾಧನ ಮಹೋತ್ಸವ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವೀರಬ್ರಹ್ಮೆಂದ್ರಸ್ವಾಮಿ ಸೇವಾ ಟ್ರಸ್ಟ್‌ ವತಿಯಿಂದ ಮಧ್ವಿರಾಟ ಪೋತುಲೂರು ವೀರ ಬ್ರಹ್ಮೆಂದ್ರಸ್ವಾಮಿ ಯವರ 15ನೇ ವರ್ಷದ ಆರಾಧನಾ ಮಹೋತ್ಸವ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆಯಿತು. 

ವಿಶೇಷವಾಗಿ ಅಲಂಕರಿಸಿದ್ದ ಭಾವಚಿತ್ರಕ್ಕೆ ವಿಶ್ವಕರ್ಮ ಸಮುದಾಯದವರಿಂದ ಪೂಜೆ ಸಲ್ಲಿಸಲಾಯಿತು.ವಿವಿಧ ಕಲಾವಿದರಿಂದ ವೀರಭ್ರಮ್ಹೇಂದ್ರ ಸ್ವಾಮಿಗಳ ಗೀತೆಗಳ ಗಾಯನ ನಡೆಯಿತು. 

ಕಾರ್ಯಕ್ರಮದಲ್ಲಿ  ಶಾಸಕ ಧೀರಜ್ ಮುನಿರಾಜು ಮಾತನಾಡಿ, ವೀರಭ್ರಮ್ಹೇಂದ್ರ ಅವರ ತತ್ವ ಅರ್ಥ ಅದರ್ಶಗಳು ಇಂದಿಗೂ ಪ್ರಸ್ತುತ ಆಂಧ್ರಪ್ರದೇಶದ ಕಡಪ ಜಿಲ್ಲೆಯ  ಕಂದಿಮಲ್ಲಯ್ಯಪಲ್ಲಿಯಲ್ಲಿ 17 ನೇ ಶತಮಾನದಲ್ಲಿ ಜೀವಿಸಿದ್ದ ಪ್ರಸಿದ್ಧ ಹಿಂದೂ ಸಂತ, ಜ್ಯೋತಿಷಿ ಮತ್ತು ದಾರ್ಶನಿಕರಾಗಿದ್ದರು. ಅವರು ವಿಶೇಷವಾಗಿ ಭವಿಷ್ಯದ ಘಟನೆಗಳನ್ನು ಮುನ್ಸೂಚಿಸುವ ಕಾಲಜ್ಞಾನ, ಭವಿಷ್ಯ  ಕೃತಿಯ ಲೇಖಕರಾಗಿ ಜನಪ್ರಿಯರಾಗಿದ್ದಾರೆ.

ವೀರಬ್ರಹ್ಮೇಂದ್ರ ಸ್ವಾಮಿಯವರು ಕೇವಲ ಸಂತನಾಗಿರದೆ, ಅಂದಿನ ಕಾಲದಲ್ಲಿನ ಮೂಢನಂಬಿಕೆಗಳನ್ನು ವಿರೋಧಿಸಿ, ಜ್ಞಾನ ಮತ್ತು ಕರ್ಮಯೋಗದ ಮಹತ್ವವನ್ನು ಸಾರಿದ ಮಹಾಪುರುಷರಾಗಿದ್ದಾರೆ. 

ಅವರ ಆರಾಧನೆ ಅರ್ಥಪೂರ್ಣವಾಗಿಸಬೇಕಿದೆ. ಅವರ ಕಾಲಜ್ಞಾನ ವೈಜ್ಞಾನಿಕ ಸತ್ಯಗಳನ್ನು ಹೇಳುತ್ತಾ ಬಂದಿದ್ದು, ಬಹುಪಾಲು ನಿಜವಾಗಿವೆ. ಮಹನೀಯರ ತತ್ವಾದರ್ಶ ಸಮಾಜಕ್ಕೆ ದಾರಿದೀಪ ಎಂದರು. 

ವೀರಬ್ರಹ್ಮಂದ್ರಸ್ವಾಮಿ ಸೇವಾ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಸೋಮಶೇಖ‌ರ್ ಮಾತನಾಡಿ, ಸಮಿತಿ ವತಿಯಿಂದ ಪ್ರತಿವರ್ಷಆರಾಧನೆ ನಡೆಸಿಕೊಂಡು ಬರಲಾಗುತ್ತಿದೆ. ಜ್ಞಾನದ ಕೊರತೆಯಿಂದ ವೈಜ್ಞಾನಿಕ ಸತ್ಯಗಳಿಂದ ದೂರ ಉಳಿದಿದ್ದೇವೆ ಎಂದರು.

ಈ ಸಂದರ್ಭದಲ್ಲಿ  ವಿಶ್ವಕರ್ಮ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಈಶ್ವರಾಚಾ‌ರ್, ಬಿ.ಉಮೇಶ್, ಬಾಬು ಪತ್ತಾರ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಶೋಭಾ, ರಾಜ್ಯ ಉಪಾಧ್ಯಕ್ಷ ರವಿಶಂಕರ್, ಶರತ್ ಚಂದ್ರ, ಲಕ್ಷ್ಮಣ್,ಚಂದ್ರಶೇಖರ್, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಎಸ್.ನಾಗೇಶ್ ಹಾಗೂ ಟ್ರಸ್ಟಿನ ಗೌರವ ಅಧ್ಯಕ್ಷ ಬೋಜಾಚಾ‌ರ್, ಅಧ್ಯಕ್ಷ ವೆಂಕಟಾಚಲಪತಿ ಪ್ರಧಾನ ಕಾರ್ಯದರ್ಶಿ  ಸೋಮಶೇಖ‌ರ್, ಯಶೋದ ಜಗದೀಶ ಮಂಜುನಾಥ್‌,ಕುಮಾರ್,ರಮೇಶಾಚಾರ್, ವೇಣುಗೋಪಾಲಾಚಾ‌ರ್, ಪರಮ ಶಿವಮೂರ್ತಿ, ಮೋಹನಾಚಾರ್ಮನೋಹರ್, ವೆಂಕಟೇಶ್ ಮೂರ್ತಿ, ನಾರಾಯಣ ಚಾ‌ರ್, ಇತರರು ಹಾಜರಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ್ ಶಾ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್: ಕರ್ನಾಟಕದ ಭದ್ರತೆ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಬದ್ಧಹಿರಿಯೂರು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಸಂಧ್ಯಾ ವೈ.ಎಸ್. ಕರ್ತವ್ಯದಿಂದ ಬಿಡುಗಡೆಅಕ್ರಮವಾಗಿ ಗಾಂಜವನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ಬಂಧನಧರ್ಮಸ್ಥಳ ಬುರುಡೆ ಪ್ರಕರಣ: ನಟ ಪ್ರಕಾಶ್‌ರಾಜ್‌ಹೆಸರು ಪ್ರಸ್ತಾಪ; ಗೃಹ ಸಚಿವರ ಪ್ರತಿಕ್ರಿಯೆಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಪೆಟ್ರೋಲ್ ಬಂಕ್‌ಗಳಲ್ಲಿ ಬಲ್ಕ್ ಇಂಧನ ಖರೀದಿಗೆ ಕೇಂದ್ರದ ಬ್ರೇಕ್: ದಿನಕ್ಕೆ 200 ಲೀಟರ್‌ಮಾತ್ರ ಮಿತಿ!ರೈತರ ತೀವ್ರ ವಿರೋಧದ ನಡುವೆ ಬಿಡದಿ ಟೌನ್ ಶಿಪ್ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲ, ಇದು ಅಂತಿಮ ಪಟ್ಟಿಯಲ್ಲ: ಸಿದ್ದರಾಮಯ್ಯ ಸ್ಪಷ್ಟನೆಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ತಮಿಳುನಾಡು ಸಿಎಂ 'ದಳಪತಿ' ವಿಜಯ್: ಕರವೇ ಪ್ರತಿಭಟನೆಮಾವಿನ ಹಣ್ಣು ತಿಂದ ಬೆನ್ನಲ್ಲೇ ಇಬ್ಬರು ಸಹೋದರಿಯರು ಸಾವು!